ಪುತ್ತೂರು: ಅಂತರಾಷ್ಟ್ರೀಯ ತರಬೇತಿ ಸಂಸ್ಥೆಯಾದ ಜೆಸಿಐ ಪುತ್ತೂರು ಘಟಕದ ವತಿಯಿಂದ ಸೆಪ್ಟೆಂಬರ್ 9ರಿಂದ 15ರವರೆಗೆ ಜೆಸಿ ಸಪ್ತಾಹ 2025 ನಡೆಯಲಿದ್ದು, ಸೆಪ್ಟೆಂಬರ್ 9ರಂದು ಧ್ವಜಾರೋಹಣ ಹಾಗೂ ಸಪ್ತಾಹದ ಉದ್ಘಾಟನೆ ನಡೆದು ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ ಎಂದು ಪುತ್ತೂರು ಜೆಸಿಐ ಅಧ್ಯಕ್ಷ ಭಾಗ್ಯೇಶ್ ರೈ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡನೇ ದಿನವಾದ ಸೆಪ್ಟೆಂಬರ್ 10 ಬುಧವಾರದಂದು ವೆಬ್ ಪೀಪಲ್ ಸಂಸ್ಥೆ ಪುತ್ತೂರು ಇಲ್ಲಿ ಜೆಸಿಯೇತರ ಯುವ ಸಮುದಾಯಕ್ಕೆ ಜೆಸಿ ಸೇರಲು ಮಾಹಿತಿ ಕಾರ್ಯಾಗಾರ ಹಾಗೂ ಮಧ್ಯಾಹ್ನದ ನಂತರ ಸರಕಾರಿ ಪ್ರಥಮ ದರ್ಜೆ ಕಾಲೇಜು ಜಿಡೆಕಲ್ಲು ಪುತ್ತೂರು ಇಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ “ಉದ್ಯೋಗ ಕೌಶಲ್ಯ ತರಬೇತಿ’ಯು ನಡೆಯಲಿದೆ ಎಂದರು.
ಮೂರನೇ ದಿನವಾದ ಸೆಪ್ಟೆಂಬರ್ 11 ಗುರುವಾರದಂದು ವಿದ್ಯಾಮಾತಾ ಅಕಾಡೆಮಿ ಇಲ್ಲಿ ಅಖಿಲ ಭಾರತೀಯ ಮೊಬೈಲ್ ಮಾರಾಟಗಾರರ ಸಂಘದ ಪುತ್ತೂರು ಘಟಕದ ಸಹಯೋಗದಲ್ಲಿ “ಆರೋಗ್ಯ ತಪಾಸಣಾ ಶಿಬಿರ’ವು ನಡೆಯಲಿದೆ ಹಾಗೂ ಮಧ್ಯಾಹ್ನದ ನಂತರ ತಾಲೂಕು ಕ್ರೀಡಾಂಗಣ ಕೊಂಬೆಟ್ಟು ಪುತ್ತೂರು ಇಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟವು ನಡೆಯಲಿದೆ ಎಂದರು.
ನಾಲ್ಕನೇ ದಿನವಾದ ಸೆಪ್ಟೆಂಬರ್ 12 ಶುಕ್ರವಾರದಂದು ಸಚ್ಚಿದಾನಂದ ಸಭಾಭವನ ದರ್ಬೆ ಪುತ್ತೂರು ಇಲ್ಲಿ ವ್ಯವಹಾರ ನೆಟ್ವರ್ಕಿಂಗ್ ಸಭೆ ನಡೆದು ಬಳಿಕ ಲಷ್ ಫ್ಯಾಷನ್ ಇನೈಡ್ ಜಿ.ಎಲ್. ಒನ್ ಮಾಲ್ ಪುತ್ತೂರು ಇಲ್ಲಿ ನಾಮಫಲಕದೊಂದಿಗೆ ವ್ಯವಹಾರ ದಿನ ಕಾರ್ಯಕ್ರಮವು ನಡೆಯಲಿದೆ ಎಂದರು.
ಐದನೇ ದಿನವಾದ ಸೆಪ್ಟೆಂಬರ್ 13 ಶನಿವಾರದಂದು ಸುದಾನ ಪದವಿ ಪೂರ್ವ ಕಾಲೇಜು, ಪುತ್ತೂರು ಇಲ್ಲಿ ಕರ್ತವ್ಯಕ್ಕಾಗಿ ಧ್ವನಿ-ಮಾನವ ಕರ್ತವ್ಯ ಮತ್ತು ಮನವಿ ದಿನ ಕಾರ್ಯಕ್ರಮವು ನಡೆಯಲಿದೆ.
ಆರನೇ ದಿನವಾದ ಸೆಪ್ಟೆಂಬರ್ 14 ಆದಿತ್ಯವಾರದಂದು ವಿದ್ಯಾಮಾತಾ ಅಕಾಡೆಮಿಯಿಂದ ಬೋಳ್ತಾರ್ ಪುತ್ತೂರು ವರೆಗೆ ಆಮಂತ್ರಣ ದಿನ ಬನ್ನಿ ಜೆಸಿಐ ಸೇರಿ ನಡಿಗೆ ಜಾಥಾ ನಡೆಯಲಿದೆ. ಕಾರ್ಯಕ್ರಮವು ವಿದ್ಯಮಾತಾ ಅಕಾಡೆಮಿ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪುದ್ವಾರ್ ತುಳುನಾಡಿನ ಅಪ್ಪಟ ಸಾಂಪ್ರದಾಯಿಕ ಖಾದ್ಯಗಳ ಭೋಜನದೊಂದಿಗೆ ಸಪ್ತಾಹವು ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಿಕಟಪೂರ್ವ ಅಧ್ಯಕ್ಷ ಮೋಹನ್ ಕೆ., ಕಾರ್ಯದರ್ಶಿ ಮನೋಹರ್ ಪಾಟಾಳಿ, ಜೇಸಿ ಮಹಿಳಾ ಸಂಯೋಜಕಿ ಆಶಾ ಮುತ್ಲಾಜೆ, ಸಪ್ತಾಹ ನಿರ್ದೇಶಕ ರುಕ್ಮಯ ಉಪಸ್ಥಿತರಿದ್ದರು.