ಸ್ಥಳೀಯ

ಶಿಲ್ಪಕ್ಕೆ ಜೀವ, ಶಿಲ್ಪಿಗೆ ಜೀವನ | ಶಿವಪೇಟೆಯಲ್ಲಿ ತಯಾರಾಗುತ್ತಿವೆ ಗಣಪನ ಮೂರ್ತಿ!

ಈ ಸುದ್ದಿಯನ್ನು ಶೇರ್ ಮಾಡಿ

ಗಣೇಶ ಚತುರ್ಥಿಗೆ ಇನ್ನು ಕೆಲ ದಿನಗಳಷ್ಟೇ ಬಾಕಿ. ಅಂದು ಹಲವು ರೀತಿಯ ಗಣಪತಿ ಮೂರ್ತಿಗಳು ನಮ್ಮನ್ನು ಆಕರ್ಷಿಸುತ್ತವೆ. ಅದರಲ್ಲಿ ಪರಿಸರ ಸ್ನೇಹಿ ಗಣಪ ವಿಶೇಷ ಆಕರ್ಷಣೆಯ ಕೇಂದ್ರ.
ಪುತ್ತೂರಿನ ಪರ್ಲಡ್ಕದಲ್ಲಿ ಪರಿಸರ ಸ್ನೇಹಿ ಗಣಪ ತಯಾರಾಗುತ್ತಿದೆ. ತಾರಾನಾಥ ಎನ್. ಆಚಾರ್ಯ ಅವರ ಕೈಚಳಕದಲ್ಲಿ ಗಣಪನ ಮೂರ್ತಿ ರೂಪು ಪಡೆಯುತ್ತಿದೆ.
ಕಳೆದ 30 ವರ್ಷಗಳಿಂದ ಕಲೆಯನ್ನೇ ಜೀವನವನ್ನಾಗಿಸಿಕೊಂಡಿರುವ ತಾರಾನಾಥ ಎನ್. ಆಚಾರ್ಯ ಅವರು, ತನ್ನ ಶಿಲ್ಪಕಲೆಯ ಚಾತುರ್ಯವನ್ನು ಮೆರೆದಿದ್ದಾರೆ.
ಪರ್ಲಡ್ಕದ ಶಿವಪೇಟೆಯ ಏಕದಂತ ಆರ್ಟ್ಸ್ ಸ್ಟುಡಿಯೋದಲ್ಲಿ ಈ ಬಾರಿಯೂ ಗಣಪನ ಹಲವು ಮೂರ್ತಿಗಳು ತಯಾರಾಗಿವೆ. ಪ್ರತಿವರ್ಷ ಸುಮಾರು 50ಕ್ಕೂ ಅಧಿಕ ಗಣಪನ ಮೂರ್ತಿಗಳನ್ನು ಇವರು ತಯಾರಿಸುತ್ತಾರೆ. ಇವರ ಕುಟುಂಬ ಸದಸ್ಯರು ತಾರಾನಾಥ ಎನ್. ಅಚಾರ್ಯ ಅವರೊಂದಿಗೆ ಕೈಜೋಡಿಸುತ್ತಾರೆ.
ಗಣಪನ ಜೊತೆಗೆ ಡೆಕೊರೇಷನ್, ಮಾಡೆಲ್ಸ್, ಶಿಲ್ಪ ಸೇರಿದಂತೆ ಹಲವು ಸೃಜನಾತ್ಮಕ ಕಾರ್ಯಗಳನ್ನು ನಾವಿಲ್ಲಿ ಕಾಣಬಹುದು.
ಸುಳ್ಯ, ಕಾಸರಗೋಡಿನಿಂದ ಇಲ್ಲಿಗೆ ಆಗಮಿಸಿ, ಮೂರ್ತಿಗಳನ್ನು ಕೊಂಡೊಯ್ಯುತ್ತಾರೆ.

akshaya college

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 107