pashupathi
ರಾಜ್ಯ ವಾರ್ತೆಸ್ಥಳೀಯ

ದಕ್ಷಿಣ ಕನ್ನಡಕ್ಕೆ ಕ್ಯಾ| ಬ್ರಿಜೇಶ್ ಚೌಟಾ, ಉಡುಪಿಗೆ ಕೋಟಾ, ಬೆಂಗಳೂರು ಉತ್ತರಕ್ಕೆ ಶೋಭಾ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ತೀವ್ರ ಕುತೂಹಲ ಕಾರಣವಾಗಿದ್ದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬುಧವಾರ ಬಿಡುಗಡೆಗೊಂಡಿದೆ.

akshaya college

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕುತೂಹಲ ಕೆರಳಿಸಿತ್ತು.

ದಕ್ಷಿಣ ಕನ್ನಡದಿಂದ ನಳಿನ್ ಕುಮಾರ್ ಕಟೀಲಿಗೆ ಕ್ಷೇತ್ರ ಕೈತಪ್ಪಿದ್ದು, ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಅವಕಾಶ ನೀಡಲಾಗಿದೆ.

ಉಡುಪಿಯಿಂದ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಕಣಕ್ಕೆ ಇಳಿಯಲಿದ್ದಾರೆ. ಈ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರದಿಂದ ಟಿಕೇಟ್ ನೀಡಲಾಗಿದೆ.

ಬೆಂಗಳೂರು ಉತ್ತರ ಸಂಸದರಾಗಿದ್ದ ಡಿ.ವಿ. ಸದಾನಂದ ಗೌಡ ಅವರಿಗೆ ಟಿಕೇಟ್ ಕೈತಪ್ಪಿದೆ.

ಮೈಸೂರಿನಿಂದ ಯದುವೀರ್ ಕಣಕ್ಕೆ ಇಳಿಯಲಿದ್ದು, ಪ್ರತಾಪ್ ಸಿಂಹ ಅವರಿಗೆ ಟಿಕೇಟ್ ನೀಡಿಲ್ಲ.

ಯಾರಿಗೆ? ಎಲ್ಲಿ?
ಚಿಕ್ಕೋಡಿ – ಅಣ್ಣಾಸಾಹೇಬ್‌ ಜೊಲ್ಲೆ
ಬಾಗಲಕೋಟೆ: ಗದ್ದಿಗೌಡರ್‌
ಬಿಜಾಪುರ – ರಮೇಶ್‌ ಜಿಗಜಿಣಗಿ
ಕಲಬುರಗಿ – ಉಮೇಶ್‌ ಜಾಧವ್‌
ಬೀದರ್‌ – ಭಗವಂತ ಖೂಬಾ
ಕೊಪ್ಪಳ – ಬಸವರಾಜ ಬೊಮ್ಮಾಯಿ

ಬಳ್ಳಾರಿ- ಶ್ರೀರಾಮುಲು
ಹಾವೇರಿ- ಬಸವರಾಜ ಬೊಮ್ಮಾಯಿ
ಧಾರವಾಡ – ಪ್ರಹ್ಲಾದ್‌ ಜೋಷಿ
ದಾವಣಗೆರೆ – ಗಾಯತ್ರಿ ಸಿದ್ದೇಶ್ವರ
ಶಿವಮೊಗ್ಗ – ಬಿವೈ ರಾಘವೇಂದ್ರ
ಉಡುಪಿ ಚಿಕ್ಕಮಗಳೂರು- ಕೋಟಾ ಶ್ರೀನಿವಾಸ ಪೂಜಾರಿ
ದಕ್ಷಿಣ ಕನ್ನಡ – ಕ್ಯಾ.ಬ್ರಿಜೇಶ್‌ ಚೌಟ
ತುಮಕೂರು – ಸೋಮಣ್ಣ

ಮೈಸೂರು – ಯದುವೀರ್‌ ಕೃಷ್ಣದತ್ತ ಒಡೆಯರ್‌
ಚಾಮರಾಜನಗರ – ಎಸ್‌ ಬಾಲರಾಜ್‌
ಬೆಂಗಳೂರು ಗ್ರಾಮಾಂತರ- ಸಿಎನ್‌ ಮಂಜುನಾಥ
ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ
ಬೆಂಗಳೂರು ಕೇಂದ್ರ – ಪಿಸಿ ಮೋಹನ್‌
ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 143