pashupathi
ಸ್ಥಳೀಯ

200 ಕಟ್ಟಡ ಕಾರ್ಮಿಕರಿಗೆ ಕಾರ್ಪೆಂಟರ್ ಕಿಟ್ ವಿತರಣೆ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸರಕಾರ ಪ್ರತೀ ಕುಟುಂಬಕ್ಕೆ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದ್ದರೂ ಕಾರ್ಮಿಕ ವರ್ಗಕ್ಕೆ ನೀಡುವ ಸೌಲಭ್ಯವನ್ನು ಕಡಿತ ಮಾಡಿಲ್ಲ. ಕಾರ್ಮಿಕರಿಗೆ ವಿವಿಧ ಸೌಲಭ್ಯವನ್ನು ನೀಡುವ ಮೂಲಕ ಕಾರ್ಮಿಕ ಕುಟುಂಬಕ್ಕೆ ದಾರಿ ದೀಪವಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು‌ ಶಾಸಕರ ಕಚೇರಿಯಲ್ಲಿ ಕಾರ್ಪೆಂಟರ್ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಿಸಿ ಮಾತನಾಡಿದರು.

akshaya college

ಕಾರ್ಮಿಕ ವರ್ಗವನ್ನು ಸರಕಾರ ಎಂದೂ ಕಡೆಗಣಿಸುವುದಿಲ್ಲ. ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮಗಳ ಮದುವೆಗೆ ಸಹಾಯಧನ, ಆರೋಗ್ಯ ಸೇವೆ ಸೇರಿದಂತೆ ಎಲ್ಲಾ ವಿಧದ ಸೌಲಭ್ಯಗಳು ರಾಜ್ಯ ಸರಕಾರದಿಂದ ದೊರೆಯುತ್ತಿದೆ. ಎಲ್ಲಾ ಕಾರ್ಮಿಕ ವರ್ಗದ ಕುಟುಂಬಗಳು ಇದರ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಶಾಸಕರು‌ ಮನವಿ ಮಾಡಿದರು.

ಶಾಸಕರ ಕಚೇರಿಯಲ್ಲೇ ಕಾರ್ಮಿಕರ ಕಾರ್ಡು ನೋಂದಣಿಯನ್ನು ಉಚಿತವಾಗಿ ಮಾಡಿಕೊಡಲಾಗುತ್ತದೆ. ಕಾರ್ಡ್ ಮಾಡಿಕೊಳ್ಳದ ಕಾರ್ಮಿಕರು ಮಾಡಿಸಿಕೊಳ್ಳುವ‌ ಮೂಲಕ‌ ಸರಕಾರದ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ವೇದಿಕೆಯಲ್ಲಿ ಹಿರಿಯ ಕಾರ್ಮಿಕ‌ ಅಧಿಕಾರಿ ಗಣಪತಿ ಹೆಗ್ಡೆ,‌ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ಕಾರ್ಮಿಕ ಯೂನಿಯನ್ ಘಟಕದ ಅಧ್ಯಕ್ಷರುಗಳಾದ ಪುರಂದರ್ ರೈ ಹಾಗೂ ಆಶ್ರಫ್ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಜು.24(ನಾಳೆ): ಜರ್ನಲಿಸ್ಟ್ ಯೂನಿಯನ್‌ನಿಂದ ಪತ್ರಿಕಾ ದಿನಾಚರಣೆ-ಹಿರಿಯ ಪತ್ರಕರ್ತ ಡಾ. ನರೇಂದ್ರ ರೈ ದೇರ್ಲರಿಗೆ ಸನ್ಮಾನ

ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಪತ್ರಿಕಾ…

1 of 116