ಸ್ಥಳೀಯ

ಪುತ್ತೂರಿನಲ್ಲಿ ಜನರೇಟರ್’ಗಳ ಮಾಹಿತಿ, ಪ್ರದರ್ಶನ, ಮಾರಾಟ | ಜುಲೈ 24 – 31: ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್ ಆಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇಲ್ಲಿನ ಕೊಂಬೆಟ್ಟು ಪಶುಪತಿ ಲೈಟ್ಸ್, ಫ್ರಾನ್ಸ್, ಇಲೆಕ್ಟ್ರಿಕಲ್ಸ್’ನಲ್ಲಿ ಜುಲೈ 24ರಿಂದ 31ರವರೆಗೆ ಜನರೇಟರ್’ಗಳ ಮಾಹಿತಿ, ಪ್ರದರ್ಶನ ಹಾಗೂ ಮಾರಾಟ ಹಮ್ಮಿಕೊಳ್ಳಲಾಗಿದೆ.

akshaya college

ಹೋಂಡಾ ಅಮೆರ್ ಎನ್.ಎಸ್.ಎಂ. ಇಂಡಿಯಾ ಮತ್ತು ಜೀನ್’ಎಕ್ಸ್ ಬ್ರಾಂಡ್’ಗಳ ಜನರೇಟರ್’ಗಳು ಇಲ್ಲಿ ಲಭ್ಯವಾಗಲಿದೆ.

ಜುಲೈ 24ರ ಗುರುವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನೆಯಲ್ಲಿ ದ್ವಾರಕಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಗೋಪಾಲಕೃಷ್ಣ ಭಟ್ ಹಾಗೂ ಹೋಂಡಾ ಸಂಸ್ಥೆಯ ಮಹೇಶ್ ಜೋಶಿ, ಕುಕ್ಕಿಲ ಎಂಟರ್’ಪ್ರೈಸಸ್ ಮಾಲಕರಾದ ವೆಂಕಟರಮಣ ಭಟ್ ಉಪಸ್ಥಿತರಿರುವರು ಎಂದು ಸಂಸ್ಥೆಯ ಪಶುಪತಿ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿರಂತರವಾಗಿ ಕಾಡುತ್ತಿರುವ ವಿದ್ಯುತ್ ಸಮಸ್ಯೆಯನ್ನು ನಿವಾರಿಸುವ ದೃಷ್ಟಿಕೋನದಿಂದ ಎಲ್ಲಾ ಕ್ಷೇತ್ರಗಳಿಗೂ ಅನ್ವಯವಾಗುವಂತಹ ಜನರೇಟರ್’ಗಳನ್ನು ಇಲ್ಲಿ ಕಾಣಲು ಸಾಧ್ಯ. ಪ್ರಮುಖವಾಗಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕರಾವಳಿ ಭಾಗದ ಕೃಷಿ ಚಟುವಟಿಕೆ ಸೊರಗುತ್ತಿರುವ ಕೆಲ ಉದಾಹರಣೆಯೂ ನಮ್ಮ ಮುಂದೆ ಬರುತ್ತದೆ. ಇದಕ್ಕೆ ಪರಿಹಾರದ ರೂಪದಲ್ಲಿ ಜನರೇಟರ್’ಗಳನ್ನು ಅನ್ವೇಷಿಸಿದ್ದು, ಕೃಷಿಕರ ಮುಂದೆ ಬರಲಿದೆ. ಇದಲ್ಲದೇ ಕನ್’ಸ್ಟ್ರಕ್ಷನ್ / ಫ್ಯಾಬ್ರಿಕೇಷನ್ / ಎಲೆಕ್ಟ್ರಿಕಲ್ ವೆಲ್ಡಿಂಗ್ ಕೆಲಸಗಳಿಗಾಗಿ, ಅಂಗಡಿ – ಮಳಿಗೆಗಳಿಗಾಗಿ, ದಿನಬಳಕೆ ಹಾಗೂ ಕೈಗಾರಿಕೆಗಳಿಗಾಗಿ ವಿವಿಧ ವಿನ್ಯಾಸದ ಜನರೇಟರ್’ಗಳು ಲಭ್ಯವಾಗಲಿದೆ.

ಹೋಂಡಾ ಎಂಜಿನ್ ಹೊಂದಿರುವ ಈ ಜನರೇಟರ್’ಗಳು ಅತ್ಯುತ್ತಮ ಗುಣಮಟ್ಟ, ದೀರ್ಘ ಬಾಳಿಕೆ, ಪವರ್ ಬ್ಯಾಕಪ್, 1 ವರ್ಷದ ವ್ಯಾರೆಂಟಿ, ಕಡಿಮೆ ಬೆಲೆ ನಮ್ಮೂರಿನಲ್ಲೇ ಲಭ್ಯವಾಗಲಿದೆ ಎನ್ನುವುದು ಇಲ್ಲಿನ ವಿಶೇಷತೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರು ಕೆಎಸ್ಸಾರ್ಟಿಸಿ ನೂತನ ಬಸ್ ಚಾಲಕ ನಿರ್ವಾಹಕರಿಗೆ ಸಂವಹನ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ

ಪುತ್ತೂರು: ಕೆಎಸ್ಸಾರ್ಟಿಸಿ ಪುತ್ತೂರು ಘಟಕಕ್ಕೆ ನೂತನವಾಗಿ ಆಯ್ಕೆಗೊಂಡಿರುವ ಬಸ್ ಚಾಲಕ ಮತ್ತು…

ಇಂದಿನಿಂದ ಪುತ್ತೂರು ಜೆಸಿಐನಿಂದ ಜೆಸಿ ಸಪ್ತಾಹ 2025 | ಸೆ. 14ರಂದು ಪುದ್ವಾರ್, ಸಾಂಸ್ಕೃತಿಕ ಕಾರ್ಯಕ್ರಮ, 15ರಂದು ಸಂಪನ್ನ

ಪುತ್ತೂರು: ಅಂತರಾಷ್ಟ್ರೀಯ ತರಬೇತಿ ಸಂಸ್ಥೆಯಾದ ಜೆಸಿಐ ಪುತ್ತೂರು ಘಟಕದ ವತಿಯಿಂದ ಸೆಪ್ಟೆಂಬರ್…

1 of 115