ಪುತ್ತೂರು: ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಬಿರುಮಲೆ ಹಿಲ್ಸ್ ಪುತ್ತೂರು ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ನಡೆಯಲಿದ್ದು, ಅಧ್ಯಕ್ಷರಾಗಿ ಸಾಜ ರಾಧಾಕೃಷ್ಣ ಆಳ್ವ, ಕಾರ್ಯದರ್ಶಿ ರುಕ್ಕಯ ಕುಲಾಲ್, ಕೋಶಾಧಿಕಾರಿಯಾಗಿ ಪುರುಷೋತ್ತಮ ಪ್ರಭುರವರು ಆಯ್ಕೆಯಾಗಿದ್ದಾರೆ.
ಕ್ಲಬ್ ನ ನೂತನ ಪದಾಧಿಕಾರಿಗಳ ಪದ ಪ್ರದಾನ ಕಾರ್ಯಕ್ರಮ ಜು.19 ರಂದು ಸಂಜೆ ರೋಟರಿ ಮನೀಷಾ ಸಭಾಂಗಣದಲ್ಲಿ ನೆರವೇರಲಿದೆ.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಪ್ರಮೋದ್ ಕುಮಾರ್ ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ಮಾಡಲಿದ್ದಾರೆ. ರೋಟರಿ ವಲಯ ಐದರ ವಲಯ ಸೇನಾನಿ ಶಶಿಧರ್ ಬಿ.ಕೆ, ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲುರವರು ಉಪಸ್ಥಿತಲಿರುವರು.
ಪದಾಧಿಕಾರಿಗಳು:
ಕ್ಲಬ್ ಜಿ.ಎಸ್.ಆರ್ ಶರತ್ ಕುಮಾರ್ ರೈ, ಉಪಾಧ್ಯಕ್ಷರಾಗಿ ಜಯರಾಜ್ ರೈ, ಸಾರ್ಜಂಟ್ ಎಟ್ ಆರ್ಮ್ಸ್ ರಾಕೇಶ್ ರೈ ಬಿ, ಕ್ಲಬ್ ಸರ್ವಿಸ್ ನಿರ್ದೇಶಕ ವಂದನಾ ಶರತ್, ವೊಕೇಶನಲ್ ಸರ್ವಿಸ್ ನಿರ್ದೇಶಕ ದಾಮೋದರ್ ಪಾಟಾಳಿ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಸಂದೀಪ್ ರೈ, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ನಿತಿನ್ ಪಕ್ಕಳ, ಯೂತ್ ಸರ್ವಿಸ್ ನಿರ್ದೇಶಕ ಸುಚಿತಾ ಶೆಟ್ಟಿ, ಚೇರ್ಮನ್ ಗಳಾಗಿ ಅನಿಲ್ ಡಿ’ಸೋಜ (ಮೆಂಬರ್ ಶಿಪ್), ಡಾ.ಶರಣ್ ಆಳ್ವ (ಟಿ.ಆರ್.ಎಫ್), ಅಭಿಷೇಕ್ ರೈ (ಪಬ್ಲಿಕ್ ಇಮೇಜ್), ಸಿದ್ದಾರ್ಥ್ ನಾಯರ್ (ಡಿಸ್ಟ್ರಿಕ್ಟ್ ಪ್ರಾಜೆಕ್ಟ್), ಜಯಮಾಲ (ಪಲ್ಸ್ ಪೋಲಿಯೊ), ಗಣೇಶ್ ರೈ (ವೆಬ್/ಡಿಜಿಟಲ್ ರೋಟರಿ), ಸ್ವಾತಿ ಜೆ. ರೈ (ಸಿ.ಎಲ್.ಸಿ.ಸಿ) ರವರು ಆಯ್ಕೆಯಾಗಿರುತ್ತಾರೆ.
ನೂತನ ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಾಜ ರಾಧಾಕೃಷ್ಣ ಆಳ್ವ ಬಳ್ಳಮಜಲುಗುತ್ತುರವರು ಎಲ್.ಎಲ್.ಬಿ ಪದವೀಧರರಾಗಿದ್ದು ಪ್ರಗತಿಪರ ಕೃಷಿಕರಾಗಿದ್ದಾರೆ. ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸುವ ಇವರು ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿ ಜೆ.ಸಿ ಅಧ್ಯಕ್ಷ ಮಂಗಳೂರು ಸೆನೆಟ್ ಸದಸ್ಯರಾಗಿ, ಜಿಲ್ಲಾ ಪಂಚಾಯತ್ ಸದಸ್ಯರಾಗಿ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಸಹಕಾರಿ ಕ್ಷೇತ್ರದಲ್ಲಿ ಎ.ಪಿ.ಎಂ.ಸಿ ಸದಸ್ಯರಾಗಿ, ಆರ್ಯಾಪು ಸಹಕಾರಿ ಸಂಘದ ನಿರ್ದೇಶಕರಾಗಿ, ಬಂಟರ ಮಾತೃ ಸಂಘ ಮಂಗಳೂರು ನಿರ್ದೇಶಕರಾಗಿ, ಶ್ರೀ ರಾಮಕೃಷ್ಣ ಶಾಲಾ ನಿರ್ದೇಶಕರಾಗಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸ್ವಯಂಸೇವಕ ಸಮಿತಿಯ ಸಂಚಾಲಕರಾಗಿ, ಪ್ರಸ್ತುತ ಬಲ್ನಾಡು ಅರಣ್ಯ ಸಮಿತಿ ಅಧ್ಯಕ್ಷರಾಗಿ, ಟಿ.ಎ.ಪಿ.ಸಿ.ಎಮ್.ಎಸ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ರುಕ್ಕಯ ಕುಲಾಲ್ ರವರು ಬಲ್ನಾಡು ನಿವಾಸಿಯಾಗಿದ್ದು ಏಳ್ಳುಡಿಯಲ್ಲಿ ಕಾರ್ಯಾಚರಿಸುತ್ತಿರುವ ಸಾಯಿತೀರ್ಥ ಚಿಟ್ಸ್ ವ್ಯವಸ್ಥಾಪಕರಾಗಿದ್ದಾರೆ. ಪ್ರತಿಷ್ಠಿತ ಜೇಸಿಐ ಸಂಸ್ಥೆಯ ನಿರ್ದೇಶಕರಾಗಿದ್ದು ಮಾತ್ರವಲ್ಲ ವಿವಿಧ ಸಂಘಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿರುತ್ತಾರೆ.
ನೂತನ ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ಪುರುಷೋತ್ತಮ ಪ್ರಭು ಮುಂಡಕೊಚ್ಚಿರವರು 1980ರಲ್ಲಿ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಅರಣ್ಯಾಧಿಕಾರಿಯಾಗಿ ನೇಮಕಗೊಂಡು ರಾಜ್ಯದ ವಿವಿಧೆಡೆ ಸೇವೆ ನಿರ್ವಹಿಸಿ, 2016 ರಂದು ಹಾಸನದಲ್ಲಿ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವಾ ನಿವೃತ್ತಿ ಹೊಂದಿ ದರ್ಬೆ ವಿನಾಯಕ ನಗರದಲ್ಲಿ ವಾಸ್ತವ್ಯ ಹೊಂದಿದ್ದಾರೆ.