ಸ್ಥಳೀಯ

ನೀರು‌ ಕೇಳುವ ನೆಪದಲ್ಲಿ ಬಂದು ಮಹಿಳೆಯ ಸರ ಕಳ್ಳತನ: ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬಂಟ್ವಾಳ: ಬೈಕ್ ನಲ್ಲಿ ಬಂದು ನೀರು‌ ಕೇಳುವ ನೆಪದಲ್ಲಿ ಮಹಿಳೆಯ ಸರ ಕಳ್ಳತನ ಮಾಡಿರುವ ಘಟನೆ ಕರ್ಕುಂಜೆ ಗ್ರಾಮದ ನೇರಳಕಟ್ಟೆಯ ಗುಡ್ರಿಯಲ್ಲಿ ನಡೆದಿದೆ.

ಮಾ. 5ರಂದು ಅಪರಿಚಿತರು 75 ವರ್ಷದ ಬಾಬಿ ದಾಸ್ ಅವರನ್ನು ನೀರು ಕೇಳುವ ನೆಪದಲ್ಲಿ ಮಾತನಾಡಿಸಿ 8 ಗ್ರಾಂ ತೂಕದ ಚಿನ್ನದ ಸರ ಕದ್ದಿದ್ದಾರೆ.

SRK Ladders

ಕಲುಬುರಗಿ ಅಫಜಲ್‍ಪುರ ಹಾಗರಗಿ ಮೂಲದ ಪ್ರಸ್ತುತ ಬೆಂಗಳೂರಿನ ನಿವಾಸಿ ವಿಜಯ ಕುಮಾರ್ (23), ಕುಂದಾಪುರ ನೇರಳಕಟ್ಟೆ ಹಿಲ್ಕೋಡು ಮೂಲದ ಮನೋಜ್ (27) ನನ್ಮು ಬಂಧಿಸಿದ್ದಾರೆ.

ಮಾ. 11 ರಂದು ಬೆಳಗ್ಗೆ ನೇರಳ ಕಟ್ಟೆ ಬಳಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಸುಲಿಗೆ ಮಾಡಿದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 1,50,000 ರೂ. ಎಂದು ಅಂದಾಜಿಸಲಾಗಿದೆ.

ಕುಂದಾಪುರ ವೃ.ನಿ. ಜಯರಾಮ ಡಿ. ಗೌಡ ನೇತೃತ್ವದಲ್ಲಿ ಗ್ರಾಮಾಂತರ ಠಾಣೆ ಪಿಎಸ್‍ಐಗಳಾದ ಭೀಮಾಶಂಕರ್, ನೂತನ್ ಡಿ.ಈ. ಶಂಕರನಾರಾಯಣ ಠಾಣೆ ಪಿಎಸ್‍ಐ ಶಂಭುಲಿಂಗ ಮತ್ತು ಕುಂದಾಪುರ ಉಪವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಕುಂದಾಪುರ ಉ.ವಿ. ಠಾಣೆಯ ಎಎಸ್‍ಐ ಸೀತಾರಾಮ ಮತ್ತಿತರರು ಸಹಕರಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2