ಸ್ಥಳೀಯ

ಪುತ್ತೂರು ಹಿಂಜಾವೇ ಪ್ರತಿಭಟನೆಯಲ್ಲಿ ಶಾಸಕರ ನಿಂದನೆ ಆರೋಪ! | ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್’ನಿಂದ ಪೊಲೀಸರಿಗೆ ದೂರು

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ ರವರನ್ನು ನಿಂದಿಸಿರುವ ಪ್ರಕರಣಕ್ಕೆ ಸಂಭಂದಿಸಿದಂತೆ ಉಪ್ಪಿನಂಗಡಿ ಬ್ಲಾಕ್ ವತಿಯಿಂದ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ.

akshaya college

ಜು. 7 ಪುತ್ತೂರಿನ ದರ್ಬೆಯಲ್ಲಿ ನಡೆದ ಹಿಂದೂ ಜಾಗರಣ ವೇದಿಕೆಯ ಪ್ರತಿಭಟನಾ ಸಭೆಯಲ್ಲಿ ಅಜಿತ್ ಮಡಿಕೇರಿ ಎನ್ನುವ ವ್ಯಕ್ತಿ ಶಾಸಕರನ್ನು ಅವಹೇಳನಾಕಾರಿಯಾಗಿ ಬೈದು, ಜೀವ ಬೆದರಿಕೆಯನ್ನು ಮಾಡಿರುತ್ತಾರೆ. ಅಲ್ಲದೇ ಅಯೋಗ್ಯ ಶಾಸಕ ಎಂದು ಹೇಳುವುದರ ಮೂಲಕ ಶಾಸಕರಿಗೆ ಅವಮಾನ ಮಾಡಿರುತ್ತಾರೆ. ಅಲ್ಲದೇ ಇಸ್ಲಾಮಿಕ್ ಭಯೋತ್ಪಾದಕ ಗೂಂಡಗಳಿಗೆ ಶಾಸಕರು ಬೆಂಬಲಿಸಿದ್ದಾರೆಂದು ಎಂದು ಹೇಳುವುದರ ಮೂಲಕ ಭಾಷಣದಲ್ಲಿ ಕೋಮು ಪ್ರಚೋದನೆಯನ್ನು ಮಾಡಿರುತ್ತಾರೆ. ಸಂಘ ಪರಿವಾರದ ಸಭೆಯಲ್ಲಿ ಸಾರ್ವಜನಿಕವಾಗಿ ಶಾಸಕರನ್ನು ದಮನಿಸುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ. ಶಾಸಕರ ಅಭಿವೃದ್ಧಿ ಮತ್ತು ಸಾರ್ವಜನಿಕ ಸೇವೆ ಬಗ್ಗೆ ಇವರ ಪ್ರಭಾವವನ್ನು ಕುಂದಿಸಲು ಸುಳ್ಳು ಆರೋಪವನ್ನು ಹೊರಿಸಿರುತ್ತಾರೆ.
ಆದ್ದರಿಂದ ಶಾಸಕರನ್ನು ಬೆದರಿಸುವ ಇವರ ದುರಹಂಕಾರದ ವರ್ತನೆಗೆ ಇವರ ಮೇಲೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ
ಯು.ಟಿ. ತೌಸೀಫ್, ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿಮಿನೇಜಸ್, ವಿಟ್ಲ
ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷ ಡಾ.ರಾಜಾರಾಂ ಕೆ ಬಿ,ಉಪ್ಪಿನಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಡಿಸಿಸಿ ಕಾರ್ಯದರ್ಶಿ ನಝೀರ್ ಮಠ, ಶಬ್ಬೀರ್ ಕೆಂಪಿ, ಸಿದ್ದಿಕ್ ಕೆಂಪಿ, ಆದಂ ಕೊಪ್ಪಳ, ರವೀಂದ್ರ ಗೌಡ ಪಟ್ಟಾರ್ತಿ,ಝಕರಿಯಾ ಹಿರೆಬಂಡಾಡಿ, ಪ್ರೆಸಿಲ್ಲಾ ಡಿಸೋಜಾ ವಳಾಲು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕಡಬ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿಗರಿಂದಲೇ ಬಿಜೆಪಿ ಮುಕ್ತ | ಪತ್ರಿಕಾಗೋಷ್ಠಿಯಲ್ಲಿ ನೂರುದ್ದೀನ್ ಸಾಲ್ಮರ

ಪುತ್ತೂರು: ಹೊಸದಾಗಿ ಮೇಲ್ದರ್ಜೆಗೇರಿದ ಕಡಬ ತಾಲೂಕಿನ ಪಟ್ಟಣ ಪಂಚಾಯತ್ ಚುನಾವಣೆಯ ಗೆಲುವಿನಿಂದ ಆ…

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

1 of 108