Gl
ಸ್ಥಳೀಯ

ಅನಿಕೇತನ ಲಾ ಛೇಂಬರ್ಸ್ ಉದ್ಘಾಟನೆ | ಕೃಷ್ಣಪ್ರಸಾದ್ ನಡ್ಸಾರ್ ಕಾನೂನಿನ ಕ್ಷೇತ್ರದಲ್ಲಿ ಧರ್ಮಾಧಾರಿತ ನ್ಯಾಯ ನೀಡಲಿ: ಮಹೇಶ್ ಕಜೆ

ಅನಿಕೇತನ ಲಾ ಛೇಂಬರ್ಸ್ ಪುತ್ತೂರು ಎಂ.ಎಸ್. ರಸ್ತೆಯ ಶ್ರೀ ರಾಘವೇಂದ್ರ ಕಾಂಪ್ಲೆಕ್ಸ್'ನಲ್ಲಿ ಜುಲೈ 7ರಂದು ಉದ್ಘಾಟನೆಗೊಂಡಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಅನಿಕೇತನ ಲಾ ಛೇಂಬರ್ಸ್ ಪುತ್ತೂರು ಎಂ.ಎಸ್. ರಸ್ತೆಯ ಶ್ರೀ ರಾಘವೇಂದ್ರ ಕಾಂಪ್ಲೆಕ್ಸ್’ನಲ್ಲಿ ಜುಲೈ 7ರಂದು ಉದ್ಘಾಟನೆಗೊಂಡಿತು.

rachana_rai
Pashupathi
akshaya college

ಕಜೆ ಲಾ ಛೇಂಬರ್’ನ ವಕೀಲ ಮಹೇಶ ಕಜೆ ಮತ್ತು ದೀಪಿಕಾ ಕಜೆ ದಂಪತಿ ನೂತನ ಕಚೇರಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಮಹೇಶ್ ಕಜೆ ಅವರು, ಕೃಷ್ಣಪ್ರಸಾದ್‌ ಅವರ ವೃತ್ತಿ ಜೀವನ ಯಶಸ್ವಿಯಾಗಿ ಬೆಳಗಲಿ. ಪರಿಮಿತಿ ಇಲ್ಲದ ಅನಿಕೇತನವು ಕಾನೂನಿನ ಕ್ಷೇತ್ರದಲ್ಲೂ ನ್ಯಾಯವನ್ನು ಧರ್ಮಾದಾರಿತವಾಗಿ ನೀಡಲಿ ಎಂದು ಹಾರೈಸಿದರು.

pashupathi

ಸಿವಿಲ್ ಲಾ ಛೇಂಬರ್‌ನ ಸೂರ್ಯನಾರಾಯಣ ಎನ್ ಕೆ ಮಾತನಾಡಿ, ಕೃಷ್ಣಪ್ರಸಾದ್ ನಡ್ಸಾರ್ ಅವರ ಸಹಜವಾದ ವಿನಯವಂತಿಕೆ ನ್ಯಾಯ ಕ್ಷೇತ್ರದಲ್ಲೂ ಹಾಗೆಯೇ ಮುಂದುವರಿಯಲಿ ಎಂದು ಹೇಳಿದರು.

ಭಾಲವಾಲಿಕ‌ರ್ ಗೌಡ ಸಾರಸ್ವತ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿರುವ ನಿವೃತ್ತ ಶಿಕ್ಷಕ ಬಾಲಕೃಷ್ಣ ನಾಯಕ್‌ ಅಜೇರು ಮಾತನಾಡಿ, ನಗುಮೊಗದ ನ್ಯಾಯಕ್ಕೆ ಸರಿಯಾದ ಮಾರ್ಗವನ್ನು ತೋರಿಸುವ ಕೃಷ್ಣಪ್ರಸಾದ್ ನಡ್ಸಾರ್ ಅವರ ವೃತ್ತಿ ಜೀವನ ಉತ್ತಮವಾಗಿ ಬೆಳಗಲಿ ಎಂದು ಹಾರೈಸಿದರು.

ವಕೀಲರ ಸಂಘದ ಅಧ್ಯಕ್ಷ ಜಿ ಜಗನ್ನಾಥ ರೈ ಮಾತನಾಡಿ, ಕೃಷ್ಣಪ್ರಸಾದ್ ನಡ್ಸಾರ್ ಅವರು ಹೋದಲ್ಲಿ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಅವರ ವಕೀಲ ವೃತ್ತಿ ಜೀವನ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ವಕೀಲ ಶ್ರೀಗಿರೀಶ ಮಳಿ ಮಾತನಾಡಿ, ಕೃಷ್ಣಪ್ರಸಾದ್ ನಡ್ಸಾರ್ ಅವರು ತಮ್ಮ ಕ್ಷೇತ್ರವನ್ನು ಸೇವೆಯ ರೂಪದಲ್ಲಿ ನೋಡಿದ್ದಾರೆ. ಸೇವೆಯ ಕೈಕಂರ್ಯ ಕಷ್ಟದಲ್ಲಿರುವವರಿಗೆ ಸಿಗಲಿ. ಹಿರಿಯರ ಆಶೀರ್ವಾದ ನಿಮಗೆ ಸದಾ ಇರಲಿದೆ ಎಂದು ಹೇಳಿದರು.

ಶಿಕ್ಷಣ ಸಂಯೋಜಕ ಹರಿಪ್ರಸಾದ್‌, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಚ್ಚುತ ನಾಯಕ್, ವಕೀಲರಾದ ಕೃಪಾಶಂಕರ್, ಚಿದಾನಂದ ಬೈಲಾಡಿ, ದಿವಾಕರ ಕೆ ನಿಡ್ವಣ್ಣಾಯ, ಭಾಸ್ಕರ್ ಕೋಡಿಂಬಾಳ, ಎನ್ ಎಸ್ ಮಂಜುನಾಥ್, ಶಿವಪ್ರಸಾದ್, ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಡಾ. ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು. ಅನಿಕೇತನ ಲಾ ಛೇಂಬರ್ಸ್‌ನ ಕೃಷ್ಣಪ್ರಸಾದ್ ನಡ್ಸಾರ್ ದಂಪತಿ ಅತಿಥಿಗಳನ್ನು ಬರಮಾಡಿಕೊಂಡರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

ಕ್ರಿಯಾಶೀಲ ವ್ಯಕ್ತಿ ಮರಣದ ಬಳಿಕವೂ ಸಜೀವ | ಕಲಾಸಿರಿ ಗೊಂಬೆ ಬಳಗದ ಅಣ್ಣಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಉದಯ್

ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಯಾರ ಮನಸ್ಸು ಮಿಡಿಯುತ್ತದೆಯೋ ಅವರು ಸಜೀವ ಆಗಿರುತ್ತದೆ ಎಂದು…

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ್‌ ಪಾಟೀಲ್‌ ಅವರಿಗೆ ಪುತ್ತೂರು ವಕೀಲ ಸಂಘದಿಂದ ಸ್ವಾಗತ, ಅಭಿನಂದನೆ

ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಪಾಟೀಲ್‌ ಅವರು ಜೂನ್‌ 26…

1 of 100