ವಿಶ್ವದ ಟಾಪ್ 100 ಐಸ್ ಕ್ರೀಮ್ ಗಳ ಪಟ್ಟಿಯನ್ನು ತಯಾರಿಸಲಾಗಿದ್ದು ಇದರಲ್ಲಿ ಭಾರತದ ಹಲವು ಬಗೆ ಐಸ್ ಕ್ರೀಂ ಗಳ ಸ್ಥಾನ ಪಡೆದಿದೆ. ಅದರಲ್ಲಿ ನಮ್ಮ ಮಂಗಳೂರಿನ ಐಸ್ ಕ್ರೀಮ್ ಕೂಡ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ಮಂಗಳೂರಿನ ‘ಗಡ್ ಬಡ್’ ಐಸ್ ಕ್ರೀಮ್ ವಿಶ್ವದ ಟಾಪ್ 100 ಐಸ್ ಕ್ರೀಮ್ ಗಳ ಪೈಕಿ 33ನೇ ಸ್ಥಾನವನ್ನು ಗಿಟ್ಟಿಸಿಕೊಂಡು ಜಾತಿಯನ್ನು ಪಡೆದುಕೊಂಡಿದೆ.
ಕರ್ನಾಟಕದ ಕರಾವಳಿ ನಗರವಾದ ಮಂಗಳೂರಿನಲ್ಲಿ, “ಗಡ್ ಬಡ್” ಕೇವಲ (gudbud icecream) ಐಸ್ ಕ್ರೀಮ್ ಅಲ್ಲ, ಅದು ಒಂದು ಇಮೋಷನ್ ಅಂತಾನೇ ಹೇಳಬಹುದು. ಪಬ್ಬಾಸ್ ರೆಸ್ಟೋರೆಂಟ್‌ನ ಈ ವಿಶೇಷ ಐಸ್ ಕ್ರೀಮ್ ಅನ್ನು ಗಾಜಿನ ಲೋಟದೊಳಗೆ ಸರ್ವ್ ಮಾಡಲಾಗುತ್ತದೆ. ಇದು ವೆನಿಲ್ಲಾ, ಸ್ಟ್ರಾಬೆರಿ, ಜೆಲ್ಲಿ, ಹಣ್ಣುಗಳು, ಒಣ ಹಣ್ಣುಗಳು ಮತ್ತು ಸಿರಪ್ ಲೇಯರ್ ಹೊಂದಿರುತ್ತದೆ. ಪ್ರತಿಯೊಂದು ಚಮಚ ತಿನ್ನುವಾಗಲೂ ವಿಭಿನ್ನ ರುಚಿಯನ್ನು ನೀಡುತ್ತದೆ. ಅದಕ್ಕಾಗಿಯೇ ಇದು ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿದೆ ಮತ್ತು ಇದು 33 ನೇ ಸ್ಥಾನವನ್ನು ಪಡೆದುಕೊಂಡಿತು.
22 ನೇ ಸ್ಥಾನದಲ್ಲಿ ಮ್ಯಾಂಗೋ ಸ್ಯಾಂಡ್‌ವಿಚ್
1953 ರಿಂದ ಮುಂಬೈನಲ್ಲಿ ತಯಾರಾಗುತ್ತಿರುವ ಇರಾನಿನ ಐಸ್ ಕ್ರೀಮ್ ಪಾರ್ಲರ್ ‘ಕೆ ರುಸ್ತಮ್ & ಕಂಪನಿ’, ಮೊದಲ ದಿನದಂತೆಯೇ ಇಂದಿಗೂ ತಮ್ಮ ರುಚಿಯಿಂದ ಗ್ರಾಹಕರನ್ನು ಗೆಲ್ಲುತ್ತಿದೆ. ಇಲ್ಲಿನ ಮ್ಯಾಂಗೋ ಸ್ಯಾಂಡ್‌ವಿಚ್ ಐಸ್ ಕ್ರೀಮ್ (Mango Sandwich icecream) ಅನುಭವ ನೀಡುತ್ತೆ. ಎರಡು ತೆಳುವಾದ ಬಿಸ್ಕತ್ತುಗಳ ನಡುವೆ ದಪ್ಪ ಮಾವಿನ ಐಸ್ ಕ್ರೀಮ್. ಅದು ಬಾಯಿಯಲ್ಲಿಟ್ಟ ತಕ್ಷಣ ಕರಗುತ್ತದೆ. ನೀವು ಈ ವಿಶೇಷ ರುಚಿ ಐಸ್ ಕ್ರೀಮ್‌ಗೆ ವಿಶ್ವದ ಅತ್ಯುತ್ತಮ ಐಸ್ ಕ್ರೀಮ್ ಪಟ್ಟಿಯಲ್ಲಿ 22 ನೇ ಸ್ಥಾನವನ್ನು ನೀಡಿದೆ.
ಗಡ್ ಬಡ್ ಐಸ್ ಕ್ರೀಮ್’ 33 ನೇ ಸ್ಥಾನದಲ್ಲಿದೆ
ಕರ್ನಾಟಕದ ಕರಾವಳಿ ನಗರವಾದ ಮಂಗಳೂರಿನಲ್ಲಿ, “ಗಡ್ ಬಡ್” ಕೇವಲ (gudbud icecream) ಐಸ್ ಕ್ರೀಮ್ ಅಲ್ಲ, ಅದು ಒಂದು ಇಮೋಷನ್ ಅಂತಾನೇ ಹೇಳಬಹುದು. ಪಬ್ಬಾಸ್ ರೆಸ್ಟೋರೆಂಟ್‌ನ ಈ ವಿಶೇಷ ಐಸ್ ಕ್ರೀಮ್ ಅನ್ನು ಗಾಜಿನ ಲೋಟದೊಳಗೆ ಸರ್ವ್ ಮಾಡಲಾಗುತ್ತದೆ. ಇದು ವೆನಿಲ್ಲಾ, ಸ್ಟ್ರಾಬೆರಿ, ಜೆಲ್ಲಿ, ಹಣ್ಣುಗಳು, ಒಣ ಹಣ್ಣುಗಳು ಮತ್ತು ಸಿರಪ್ ಲೇಯರ್ ಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಚಮಚ ತಿನ್ನುವಾಗಲೂ ವಿಭಿನ್ನ ರುಚಿಯನ್ನು ನೀಡುತ್ತದೆ.
ಅದಕ್ಕಾಗಿಯೇ ಇದು ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿದೆ ಮತ್ತು ಇದು 33 ನೇ ಸ್ಥಾನವನ್ನು ಪಡೆದುಕೊಂಡಿತು.
40 ನೇ ಸ್ಥಾನದಲ್ಲಿ ‘ಟೆಂಡರ್ ಕೊಕನಟ್
ಈ ಐಸ್ ಕ್ರೀಮ್ 1984 ರಲ್ಲಿ ಮುಂಬೈನ ಜುಹುದಲ್ಲಿ ಪ್ರಾರಂಭವಾಯಿತು, ಆದರೆ ಇಂದು ಇದರ ರುಚಿ ದೇಶಾದ್ಯಂತ ಹರಡಿದೆ. ಇಲ್ಲಿನ ‘ಟೆಂಡರ್ ಕೊಕನಟ್’ ಐಸ್ (tender coconut icecream) ವಿಶೇಷವಾಗಿದೆ ಏಕೆಂದರೆ ಇದನ್ನು ತಾಜಾ ತೆಂಗಿನಕಾಯಿ ತಿರುಳಿನಿಂದ ತಯಾರಿಸಲಾಗುತ್ತದೆ ಮತ್ತು ಅದಕ್ಕೆ ಯಾವುದೇ ಕೃತಕ ಸುವಾಸನೆಗಳನ್ನು ಸೇರಿಸಲಾಗುವುದಿಲ್ಲ. ಇದರ ಆರೋಗ್ಯಕರ ಮತ್ತು ದೇಸಿ ರುಚಿ ದೇಶಾದ್ಯಂತ ಸದ್ದು ಮಾಡುತ್ತಿದ್ದು, ಪ್ರಪಂಚದಲ್ಲೇ 40 ನೇ ಸ್ಥಾನ ಪಡೆದಿದೆ.
ಡೆತ್ ಬೈ ಚಾಕೊಲೇಟ್
ಕಾರ್ನರ್ ಹೌಸ್ 1982 ರಲ್ಲಿ ಸ್ಥಾಪನೆಯಾಯಿತು ಮತ್ತು ಅದರ ಡೆತ್ ಬೈ ಚಾಕೊಲೇಟ್‌ಗೆ (death by chocolate) ಹೆಸರುವಾಸಿಯಾಗಿದೆ. ವೆಬ್‌ಸೈಟ್ ಪ್ರಕಾರ, ಇದು ಐಸ್ ಕ್ರೀಮ್ ಪರಿಮಳವನ್ನು ಹೊಂದಿಲ್ಲ, ಏಕೆಂದರೆ ಇದು ಕೇಕ್, ಐಸ್ ಕ್ರೀಮ್, ಚಾಕೊಲೇಟ್ ಸಾಸ್, ಬೀಜಗಳು ಮತ್ತು ಚೆರ್ರಿಯೊಂದಿಗೆ ಲೇಯರ್ಡ್ ಮಾಡಲಾದ ಒಂದು ರುಚಿಕರವಾದ ಐಸ್ ಕ್ರೀಂ.
ಗ್ವಾವಾ ಐಸ್ ಕ್ರೀಂ
ಅಪ್ಸರಾ ಐಸ್ ಕ್ರೀಂ ಮುಂಬೈಗೆ ಸ್ಥಳೀಯವಾಗಿದ್ದು, 1971 ರಲ್ಲಿ ಸ್ಥಾಪನೆಯಾಯಿತು ಮತ್ತು ಇದು ತನ್ನ ಸೀಬೆ ಹಣ್ಣಿನ ಐಸ್ ಕ್ರೀಮ್‌ಗೆ ಹೆಸರುವಾಸಿಯಾಗಿದೆ. ವೆಬ್‌ಸೈಟ್ ಪ್ರಕಾರ, ಗ್ವಾವಾ ಐಸ್ ಕ್ರೀಮ್ ಅದರ ನಿಜವಾದ ರುಚಿಗೆ ಹೆಸರುವಾಸಿಯಾಗಿದೆ, ಸೀಬೆ ಹಣ್ಣಿನ ಸಣ್ಣ ತುಂಡುಗಳು ಮತ್ತು ಕ್ರೀಂ ಟೆಕ್ಸಚರ್ ಬಲು ರುಚಿಕರವಾಗಿದೆ.