pashupathi
ಸ್ಥಳೀಯ

ಸೈಕಲ್ ಜಾಥಾ; ವಿಧಾನಸೌಧದ ಮೆಟ್ಟಿಲ ಮೇಲೆ ಬಿದ್ದುಬಿಟ್ಟ ಡಿಕೆ ಶಿವಕುಮಾರ್!!

tv clinic
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ವೇಳೆ ವಿಧಾನಸೌಧದ ಮೆಟ್ಟಿಲ ಮೇಲೆಯೇ ಬಿದ್ದ ಘಟನೆ ಮಂಗಳವಾರ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ವೇಳೆ ವಿಧಾನಸೌಧದ ಮೆಟ್ಟಿಲ ಮೇಲೆಯೇ ಬಿದ್ದ ಘಟನೆ ಮಂಗಳವಾರ ನಡೆಯಿತು.

akshaya college

ವಿಶ್ವ ಪರಿಸರ ದಿನದ ಅಂಗವಾಗಿ ವಿಧಾನಸೌಧದ ಬಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೇ ಹೊತ್ತಿನಲ್ಲಿ ಕಾರ್ಯಕ್ರಮದ ಭಾಗವಾಗಿ ಸೈಕಲ್ ಜಾಥಾವನ್ನು ಏರ್ಪಡಿಸಲಾಗಿತ್ತು. ಡಿಸಿಎಂ ಡಿಕೆ ಶಿವಕುಮಾರ್ ಅವರು ಜಿಮ್ ಸೂಟ್ ತೊಟ್ಟು, ಕೂಲಿಂಗ್ ಗ್ಲಾಸ್ ಹಾಕಿ ಜಾಥಾದ ತುಂಬಾ ಮಿಂಚುತ್ತಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಜಾಥಾ ವಿಧಾನಸೌಧದ ಮುಂಭಾಗಕ್ಕೆ ಆಗಮಿಸಿತು. ಜಾಥಾದ ಕೊನೆ ಹಂತ ತಲುಪಿತು ಎನ್ನುವಷ್ಟರಲ್ಲಿ ಕೆಂಗಲ್ ಗೇಟ್ ಬಳಿ ವಿಧಾನಸೌಧದ ಮೆಟ್ಟಿಲ ಮೇಲೆಯೇ ಜಾರಿ ಬಿದ್ದು ಬಿಟ್ಟರು.

ಬ್ಯಾಲೆನ್ಸ್ ತಪ್ಪಿದ ಡಿಸಿಎಂ ಬಿದ್ದಿದ್ದಾರೆ ಎಂದೂ ಹೇಳಲಾಗುತ್ತಿದೆ. ತಕ್ಷಣವೇ ಬೆಂಬಲಿಗರು ಆಗಮಿಸಿ, ಅವರ ಸಹಾಯಕ್ಕೆ ನಿಂತರು. ಬಿದ್ದಿದ್ದ ಡಿಕೆ ಶಿವಕುಮಾರ್ ಅವರನ್ನು ಎಬ್ಬಿಸಿ, ಉಪಚರಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 116