ಸ್ಥಳೀಯ

ಪೊಲೀಸ್ ರನ್’ಗೆ ವಿದ್ಯಾರ್ಥಿಗಳ ಸಾಥ್! | ಮಾ. 10ರಂದು ಮಾದಕ ದ್ರವ್ಯಗಳ ದುಷ್ಪರಿಣಾಮದ ಜಾಗೃತಿ ಜಾಥಾ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವದ ಅಂಗವಾಗಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಪೊಲೀಸ್ ರನ್ 2024 ಮಾರ್ಚ್ 10ರಂದು ಬೆಳಿಗ್ಗೆ 8.30ಕ್ಕೆ ನಡೆಯಲಿದೆ.
ಸೇ ಯಸ್ ಟು ಲೈಫ್, ನೋ ಟು ಡ್ರಗ್ಸ್ ಎಂಬ ಹೆಸರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಜಾಗೃತಿ ಜಾಥಾ ಹಮ್ಮಿಕೊಂಡಿದೆ.

ದರ್ಬೆ ಫಾ. ಪತ್ರಾವೋ ವೃತ್ತದಿಂದ ಆರಂಭಗೊಳ್ಳುವ ಕರ್ನಾಟಕ ಪೊಲೀಸ್ ರನ್ 2024 ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಸಮಾಪನಗೊಳ್ಳಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ನೇತೃತ್ವ ವಹಿಸುವರು. ಡಿವೈಎಸ್ಪಿ ಅರುಣ್ ನಾಗೇಗೌಡ ಉಪಸ್ಥಿತರಿರುವರು.

SRK Ladders

ಪುತ್ತೂರು ನಗರ ಪೊಲೀಸ್ ಠಾಣೆ, ಟ್ರಾಫಿಕ್ ಠಾಣೆ, ಮಹಿಳಾ ಪೊಲೀಸ್ ಠಾಣೆಯ ಪೊಲೀಸರ ಜೊತೆಗೆ ವಿವೇಕಾನಂದ ಕಾಲೇಜು, ಸಂತ ಫಿಲೋಮಿನಾ, ಉಪ್ಪಿನಂಗಡಿ ಕಾಲೇಜು, ಸಂಪ್ಯ ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು ಪೊಲೀಸ್ ರನ್’ನಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2