ಸ್ಥಳೀಯ

ಫಲಾನುಭವಿಗಳ ಸಮಾವೇಶದಲ್ಲಿ ಶಾಸಕ ಅಶೋಕ್ ರೈ ಜನರ ಕ್ಷಮೆ ಕೇಳಿದ್ಯಾಕೆ!?

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರಾಜ್ಯದಲ್ಲಿ ಬಡವರ ಪರವಾಗಿರುವ ರಾಜ್ಯ ಸರಕಾರದ ಗ್ಯಾರೆಂಟಿ ಯೋಜನೆ ಪ್ರತಿಯೊಬ್ನ ಜನರಿಗೂ ತಲುಪುವಂತೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಪುತ್ತೂರು ಕಿಲ್ಲೆ ಮೈದಾನದಲ್ಲಿ ಗುರುವಾರ ನಡೆದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

SRK Ladders

ಈಗಾಗಲೇ ಶೇ. 98 ಜನರಿಗೆ ರಾಜ್ಯದ ಗ್ಯಾರೆಂಟಿ ಯೋಜನೆಗಳು ತಲುಪಿವೆ. ಆದರೂ ನನಗೆ ಬೇಸರವಿದೆ. ಶೇ. 100 ಜನರಿಗೆ ಈ ಯೋಜನೆಗಳು ತಲುಪಬೇಕಿತ್ತು. ಆದ್ದರಿಂದ ಜನರ ಬಳಿ ಕ್ಷಮೆ ಕೇಳುತ್ತೇನೆ ಎಂದರು.

ಗ್ಯಾರೆಂಟಿ ಸುಳ್ಳು ಎಂದು ಹೇಳುತ್ತಿದ್ದವರು ಇಂದು ಅದೇ ಗ್ಯಾರೆಂಟಿಯ ಹಿಂದೆ ಬಿದ್ದಿದ್ದಾರೆ. ದೇಶದಲ್ಲೇ ಗ್ಯಾರೆಂಟಿಗಳನ್ನು ಕೊಡುವ ಕೆಲಸ ಆಗುತ್ತಿದೆ. ಈ ಮೂಲಕ ಬಡವರ ಸಶಕ್ತೀಕರಣದ ಕೆಲಸ ಆಗುತ್ತಿದೆ. ಆದ್ದರಿಂದ ಎಂದರು.

ರಾಜ್ಯ ಸರಕಾರದ ಈ ಗ್ಯಾರೆಂಟಿ ಯೋಜನೆಗಳನ್ನು ವಿರೋಧಿಸಿದವರು ಯಾರೂ ಇಲ್ಲ. ಸುಮಾರು 3ರಿಂದ 4 ಸಾವಿರ ಮಹಿಳೆಯರ ಜೊತೆ ಮಾತನಾಡಿದ್ದೇನೆ. ಅವರೆಲ್ಲರೂ ಯೋಜನೆಯ ಬಗ್ಗೆ ಹೊಗಳಿಯೇ ಮಾತನಾಡಿದ್ದಾರೆ. ಒಂದು ವೇಳೆ 1 % ಜನ ವಿರೋಧಿಸಬಹುದು. ಅದು ನಂಜಿಕಾರುವವರು ಎಂದು ಕುಟುಕಿದರು.

ಗ್ಯಾರೆಂಟಿ ಯೋಜನೆಯಿಂದ ಬರದ ಪ್ರಭಾವ ಕಡಿಮೆಯಾಗಿದೆ: ಹರೀಶ್ ಕುಮಾರ್

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಬದುಕು ಕೊಡುವ ಕೆಲಸವನ್ನು ರಾಜ್ಯ ಸರಕಾರ ಮಾಡಿದೆ. ಕೊಟ್ಟಿರುವ ಆಶ್ವಾಸನೆಗಳನ್ನು ಈಡೇರಿಸಿ, ರಾಜ್ಯದ ಜನರ ಮನಗೆದ್ದಿದೆ. ವರ್ಷಕ್ಕೆ 58ರಿಂದ 60 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಹಾಗೆಂದು ರಾಜ್ಯದ ಅಭಿವೃದ್ಧಿ ಕಾರ್ಯಕ್ಕೆ ತೊಡಕಾಗಿಲ್ಲ. ಆರ್ಥಿಕ ಚಾಣಕ್ಯ ಸಿದ್ದರಾಮಯ್ಯ ಇವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕಾಂಗ್ರೆಸಿನ ಗ್ಯಾರೆಂಟಿ ಯೋಜನೆಗಳಿಂದಾಗಿ ಬರದ ಪ್ರಭಾವವೂ ಅಷ್ಟಾಗಿ ಕಾಡುತ್ತಿಲ್ಲ ಎಂದರು.

ಇದೇ ಸಂದರ್ಭ ಫಲಾನುಭವಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಓ ಡಾ. ಆನಂದ್, ಸಹಾಯಕ ಆಯುಕ್ತ ಮುಬಿನ್ ಮೊಹಪಾತ್ರ, ತಹಸೀಲ್ದಾರ್ ಪುರಂದರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿದ್ಯುತ್ ತಂತಿ ಕಡಿದು ಬಿದ್ದು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ ಸಹಿತ ಇಬ್ಬರು ರಿಕ್ಷಾ ಚಾಲಕರು ಮೃತ್ಯು!!

ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ…

1 of 3