ಪುತ್ತೂರು: ಕಳೆದ 2 ವರ್ಷಗಳಿಂದ ಅಧ್ಯಕ್ಷರೇ ಇಲ್ಲದಿರುವ ದ.ರ. ಜಿಲ್ಲಾ ಕೃಷಿ ಕಾರ್ಮಿಕರ ಸಹಕಾರಿ ಸಂಘದ ಮಹಾಸಭೆಯನ್ನು ಸದಸ್ಯರಿಗೆ ನೋಟಿಸ್ ನೀಡದೇ, ಫೋರ್ಜರಿ ಸಹಿ ಹಾಕಿ ನಡೆಸಿರುವ ಬಗ್ಗೆ ಮೈಸೂರು ಪ್ರಾಂತ್ಯದ ಸಹಕಾರ ಸಂಘಗಳ ಜಿಂಟಿನಿಬಂಧಕರಿಗೆ ಹಾಗೂ ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು ನೀಡಲಾಗಿದೆ.
ಆರ್ಯಾವು ಗ್ರಾಮದ ಮೇಗಿನವಂಜ ನಿವಾಸಿ ಮಹಾವೀರ ಜೈನ್ ಎಂಬವರು ದೂರು ನೀಡಿದ್ದು, ಇವರು ಈ ಸಂಘದಲ್ಲಿ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿರುತ್ತೇನೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ. 2020ರಲ್ಲಿ ಸಂಘದ ಆಡಳಿತ ಮಂಡಳಿಗೆ ಅಯ್ಕೆಯಾಗಿದ್ದು, ನಂತರ ತನ್ನ ಫೋರ್ಜರಿ ಸಹಿ ಹಾಕಿ, ರಾಜೀನಾಮೆ ಪತ್ರ ಸಿದ್ಧವಡಿಸಿದ್ದಾರೆ. ಈ ರಾಜೀನಾಮೆ ಪತ್ರವನ್ನು ತನ್ನ ಒಪ್ಪಿಗೆ ಇಲ್ಲದೇ ಸಿದ್ಧಪಡಿಸಲಾಗಿದೆ ಎಂದು ಆರೋಪಿಸಿದ್ದಾರೆ.
ದಶ ಜಿಲ್ಲಾ ಕೃಷಿ ಕಾರ್ಮಿಕರ ಸಹಕಾರಿ ಸಂಘದ ಆಡಳಿತ ಮಂಡಳಿಯ ಅವಧಿ ಮುಗಿದಿದ್ದು ಸಂಘದ ಅಧ್ಯಕ್ಷರಾಗಿದ್ದ ಸುಮತಿ ಎನ್ ಹೆಗ್ಡೆ ಅವರು 2 ವರ್ಷಗಳ ಹಿಂದೆಯೇ ರಾಜೀನಾಮೆ ನೀಡಿರುತ್ತಾರೆ. ನಂತರ ಸಂಘದ ಅಧ್ಯಕ್ಷತೆಗೆ ಬದಲಿ ವ್ಯವಸ್ಥೆಯನ್ನೇ ಮಾಡಿರುವುದಿಲ್ಲ. ಮಾತ್ರವಲ್ಲ ಪೋರ್ಜರಿ ಸಹಿಯನ್ನು ಹಾಕಿ. ಮಹಾಸಭೆಯನ್ನು ನಡೆಸಲಾಗಿದೆ. ಈ ಮಹಾಸಭೆಯ ಬಗ್ಗೆ ಸಂಘದ ಸದಸ್ಯರಿಗೆ ಯಾವುದೇ ನೋಟಿಸನ್ನು ನೀಡಿರುವುದಿಲ್ಲ ಎಂದು ದೂರಿದ್ದಾರೆ.
ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ, ಹೊಸ ಆಡಳಿತ ಮಂಡಳಿ ರೂಪಿಸಲು ಚುನಾವಣೆ ನಡೆಸುವಂತೆ ಆದೇಶ ನೀಡುವಂತೆ ಮಹಾವೀರ ಜೈನ್ ಹೇಳಿಕೊಂಡಿದ್ದಾರೆ