Gl jewellers
ಸ್ಥಳೀಯ

ಬಹುಗ್ರಾಮ ಕುಡಿಯುವ ನೀರು ತನ್ನ ಅವಧಿಯಲ್ಲಾದ ಯೋಜನೆ: ಸಂಜೀವ ಮಠಂದೂರು| 300 ಬೆಡ್ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದ ಬಳಿಕವಷ್ಟೇ ಮೆಡಿಕಲ್ ಕಾಲೇಜಿಗೆ ಶಿಫಾರಸು!! ಸೀ ಫುಡ್ ಪಾರ್ಕ್ ಹಿಂದಕ್ಕೆ ಪಡೆಯಲು ಜನ ವಿರೋಧವೇ ಕಾರಣ!!

ತನ್ನ ಶಾಸಕತ್ವದ ಅವಧಿಯಲ್ಲಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ತನ್ನದೆಂದು ಬಿಂಬಿಸಿಕೊಳ್ಳುತ್ತಿರುವ ಅಶೋಕ್ ರೈ ನಡೆ ಖಂಡನಾರ್ಹ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ತನ್ನ ಶಾಸಕತ್ವದ ಅವಧಿಯಲ್ಲಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ತನ್ನದೆಂದು ಬಿಂಬಿಸಿಕೊಳ್ಳುತ್ತಿರುವ ಅಶೋಕ್ ರೈ ನಡೆ ಖಂಡನಾರ್ಹ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.

Pashupathi
Papemajalu garady
Karnapady garady

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ 780 ಕೋಟಿ ರೂ. ಮೊತ್ತದ ಬಹುಗ್ರಾಮ ಕುಡಿಯುವ ನೀರು ಯೋಜನೆ ಮಂಜೂರಾಗಿ ಕೆಲಸ ನಡೆಯುತ್ತಿದೆ. ಆದರೂ ಶಾಸಕ ಅಶೋಕ್ ರೈ ಅವರು 1110 ಕೋಟಿ ರೂಪಾಯಿ ಯೋಜನೆ ಪುತ್ತೂರಿಗೆ ಬಂದಿದೆ ಎಂದು ಹೇಳುತ್ತಿದ್ದಾರೆ. 1110 ಕೋಟಿ ರೂ. ಯೋಜನೆಯಲ್ಲಿ ಪುತ್ತೂರು ಕ್ಷೇತ್ರ ಮಾತ್ರವಲ್ಲದೆ, ಕಡಬ ಮತ್ತು ಸುಳ್ಯ ತಾಲೂಕಿನ ಯೋಜನೆಗಳೂ ಇವೆ. ಅಳಿಕೆ ವಲಯ ಯೋಜನೆ ಮತ್ತು ಆಲಂಕಾರು, ಕುಟ್ರುಪ್ಪಾಡಿ ವಲಯ ಯೋಜನೆಗಳ ಗುತ್ತಿಗೆಯೂ ಬೇರೆ ಬೇರೆ ಸಂಸ್ಥೆಗಳಿಗೆ ಹೋಗಿದೆ. ಅದೆಲ್ಲವೂ ಪುತ್ತೂರು ಕ್ಷೇತ್ರದ ಯೋಜನೆ ಎಂಬಂತೆ ಬಿಂಬಿಸುತ್ತಿರುವುದು ಖಂಡನೀಯ. ಒಂದು ವೇಳೆ ಅಶೋಕ್ ರೈ ಅವರು ತಾವೇ ಬಹುಗ್ರಾಮ ಕುಡಿಯುವ ನೀರು ಯೋಜನೆ ಮಂಜೂರು ಮಾಡಿದ್ದೇ ಆಗಿದ್ದಲ್ಲಿ ಅದರ ಶಂಕುಸ್ಥಾಪನೆ ಸಮಾರಂಭ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಮೆಡಿಕಲ್ ಕಾಲೇಜು:

ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ನೀಡಲು ಉದ್ದೇಶಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿರುವುದು ಸ್ವಾಗತಾರ್ಹ ಸಂಗತಿ. ಇದಕ್ಕಾಗಿ ಪುತ್ತೂರು ಸರಕಾರಿ ಆಸ್ಪತ್ರೆಯನ್ನು ಈ ವರ್ಷ ಮೇಲ್ದರ್ಜೆಗೆ ಏರಿಸುವುದಾಗಿ ಹೇಳಿರುವುದು ಕೂಡ ಸ್ವಾಗತಾರ್ಹ ಸಂಗತಿ. ಇವರಡನ್ನೂ ನಾನು ಸ್ವಾಗತಿಸುತ್ತೇನೆ. ಆದರೆ ಎಷ್ಟು ಹಾಸಿಗೆಯ ಆಸ್ಪತ್ರೆಯಾಗಿ ಮಾಡಲಾಗುವುದು ಎಂಬ ಉಲ್ಲೇಖವಿಲ್ಲ. ಅದೇ ರೀತಿ ಮೆಡಿಕಲ್ ಕಾಲೇಜು ಯಾವಾಗ ಮಾಡಲಾಗುವುದು ಎಂಬುದೂ ಇಲ್ಲ. 300 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಗೊಂಡ ಮೇಲಷ್ಟೇ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದವರು ಬಂದು ಪರಿಶೀಲಿಸಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಶಿಫಾರಸು ಮಾಡುತ್ತಾರೆ. ಅಲ್ಲಿಯವರೆಗೆ ಮೆಡಿಕಲ್ ಕಾಲೇಜು ಮಂಜೂರಾಗಲು ಸಾಧ್ಯವಿಲ್ಲ ಎಂದರು.
ನಾನು ಶಾಸಕನಾಗಿದ್ದಾಗ ಪುತ್ತೂರು ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಪ್ರಯತ್ನಿಸಿದ್ದೆ. ಇದಕ್ಕಾಗಿಯೇ ಆಸ್ಪತ್ರೆಗೆ ಹೆಚ್ಚುವರಿ ಜಮೀನು ಒದಗಿಸಿ 5.16 ಎಕರೆ ಜಾಗ ಲಭ್ಯವಾಗುವಂತೆ ಮಾಡಿದ್ದೆ. ಹಾಲಿ ಆಸ್ಪತ್ರೆಗೆ ಧಕ್ಕೆ ಆಗದಂತೆ ಪಕ್ಕದಲ್ಲೇ 300 ಹಾಸಿಗೆಗಳ ಹೊಸ ಆಸ್ಪತ್ರೆ ಸಂಕೀರ್ಣ ನಿರ್ಮಿಸುವುದು ನನ್ನ ಉದ್ದೇಶವಾಗಿತ್ತು. ಹಾಲಿ ಶಾಸಕರು ಒಂದು ವೇಳೆ 300 ಹಾಸಿಗೆಗಳ ಆಸ್ಪತ್ರೆ ಮಂಜೂರು ಮಾಡಿಸಿ ಅದನ್ನು ಸೇಡಿಯಾಪಿನ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಾಗದಲ್ಲಿ ನಿರ್ಮಿಸುವುದಾದರೂ ಅದನ್ನು ನಾನು ಸ್ವಾಗತಿಸುತ್ತೇನೆ. ಪುತ್ತೂರಿನ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ ಎಂದರು.
ಮೆಡಿಕಲ್ ಕಾಲೇಜಿಗೆಂದು ಶಕುಂತಳಾ ಶೆಟ್ಟಿ ಶಾಸಕರಾಗಿದ್ದಾಗ 40 ಎಕರೆ ಜಾಗ ಮಂಜೂರು ಮಾಡಿದ್ದು, ಆ ಜಾಗದಲ್ಲಿ ಸಂಜೀವ ಮಠಂದೂರು ಶಾಸಕರಾಗಿದ್ದಾಗ ಮೀನು ಕಾರ್ಖಾನೆ ಸ್ಥಾಪಿಸಲು ಮುಂದಾಗಿದ್ದರು ಎಂದು ಶಾಸಕ ಅಶೋಕ್ ರೈ ಮಾಡಿದ ಆರೋಪಕ್ಕೆ ಉತ್ತರಿಸಿದ ಅವರು, ಕೇಂದ್ರ ಸರಕಾರದ ಯೋಜನೆಯಲ್ಲಿ ಜಿಲ್ಲೆಗೆ ಸೀಫುಡ್ ಪಾರ್ಕ್ ಜಿಲ್ಲೆಗೆ ಮಂಜೂರಾಗಿತ್ತು. ಸಾವಿರಾರು ಉದ್ಯೋಗ ಸೃಷ್ಟಿಸಲಿರುವ ಹಿನ್ನೆಲೆಯಲ್ಲಿ ಅದನ್ನು ಸೇಡಿಯಾಪು ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿದ್ದೆ. ಆದರೆ ಜನ ವಿರೋಧ ಕಂಡು ನಿಲ್ಲಿಸಿದೆ. ಹಾಗೆಂದು ನಾನು ಮೆಡಿಕಲ್ ಕಾಲೇಜಿಗೆ ವಿರೋಧವಲ್ಲ. ಮೆಡಿಕಲ್ ಕಾಲೇಜು ದೂರಗಾಮಿ ಯೋಜನೆಯಾದ ಕಾರಣ ಭವಿಷ್ಯದಲ್ಲಿ ಬೇರೆ ಜಾಗ ಹುಡುಕಿಕೊಳ್ಳಬಹುದು. ಸೀ ಫುಡ್ ಪಾರ್ಕ್ ತಕ್ಷಣವೇ ಮಂಜೂರಾದ ಕಾರಣ ತುರ್ತಾಗಿ ಆ ಜಾಗ ನೀಡಲು ಮುಂದಾದೆ. ಜನ ವಿರೋಧ ಬಂದ ಕಾರಣ ಹಿಂದಕ್ಕೆ ಪಡೆದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಪುತ್ತೂರು ಪೇಟೆಯಲ್ಲಿ ನಂದಿ ರಥಯಾತ್ರೆ | ದೇಶಿ ನಂದಿಗೆ ಹಾರಾರ್ಪಣೆ, ಕೃಷ್ಣನ ವಿಗ್ರಹಕ್ಕೆ ಪುಷ್ಪಾರ್ಚನೆ

ಗೋಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್‌,…

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ