ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವದ ವತಿಯಿಂದ ಕಬಕ – ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಎದೆಹಾಲು ಕುಡಿಯುವ ಕೇಂದ್ರ ಹಾಗೂ ಶಿಶುಪಾಲನಾ ಘಟಕವನ್ನು ಗುರುವಾರ ಉದ್ಘಾಟಿಸಲಾಯಿತು.
ರೋಟರಿ ಗವರ್ನರ್ ಭೇಟಿ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ತಾಯಿ ಶ್ರೇಯಸ್ವಿ ಎಸ್.ಆರ್. ಹಾಗೂ ಮಗು ಇಶಾ ಲಕ್ಷ್ಮೀ ಫೀಡಿಂಗ್ ರೂಮನ್ನು ಉದ್ಘಾಟಿಸಿದರು.
ರೋಟರಿ ಗವರ್ನರ್ ವಿಕ್ರಂ ದತ್ತ ಮಾತನಾಡಿ, ಜಿಲ್ಲೆಯಲ್ಲಿ ರೋಟರಿ ಕೊಡುಗೆಯಾಗಿ ನೀಡುತ್ತಿರುವ ಎರಡನೇ ಘಟಕ ಇದು. ಅತೀ ಅವಶ್ಯವಾದ ಈ ಘಟಕ ನೀಡಿದ ಕ್ಲಬ್ಬಿಗೆ ಜಿಲ್ಲಾ ರೋಟರಿ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.
ರೋಟರಿಯ ಏಳು ಫೋಕಸ್ ಏರಿಯಾದಲ್ಲಿ ಒಂದಾದ ಫೀಡಿಂಗ್ ರೂಮ್, ರೈಲ್ವೇ ನಿಲ್ದಾಣದಲ್ಲಿ ಅಗತ್ಯವಾಗಿದೆ ಎಂದರು.
ಕ್ಲಬ್ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ ಮಾತನಾಡಿ, ತಾಯಿ ಹಾಲು ಅಮೃತ. ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ತಾಯಿ ಹಾಲು ಅತೀ ಅವಶ್ಯ. ಈ ಹಿನ್ನೆಲೆಯಲ್ಲಿ ಎದೆ ಹಾಲು ನೀಡುವ ಹಾಗೂ ಶಿಶು ಪಾಲನಾ ಕೇಂದ್ರವನ್ನು ಕೊಡುಗೆಯಾಗಿ ನೀಡುತ್ತಿದ್ದೇವೆ. ರೈಲ್ವೇ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಲಿ ಎಂದರು.

ರೈಲ್ವೇ ಮುಖ್ಯ ಟಿಕೇಟ್ ನಿರೀಕ್ಷಕ ವಿಠಲ್ ನಾಯಕ್ ಮಾತನಾಡಿ, ರೈಲ್ವೇ ಪ್ರಯಾಣಿಕರಿಗೆ ಈ ಫೀಡಿಂಗ್ ರೂಂ ಉಪಯುಕ್ತ. ಇಂದು ರೈಲ್ವೇಯ ಎಸಿ ಕೋಚ್ ನಲ್ಲಿ ಫೀಡಿಂಗ್ ರೂಂ ಇದೆ. ರೋಟರಿಯ ಎಲ್ಲರಿಗೂ ದನ್ಯವಾದ ಎಂದರು.
ಸ್ಟೇಷನ್ ಮಾಸ್ಟರ್ ಸ್ವತಂತ್ರ ಮಿಶ್ರಾ, ಸಂಕೇತ ಕಚೇರಿಯ
ಭಾವೇಶ್ ಕುಮಾರ್ ಭಾರತೀ, ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ, ಕಾರ್ಯದರ್ಶಿ ವಚನಾ ಜಯರಾಂ, ಕೋಶಾಧಿಕಾರಿ ಅಭೀಷ್, ಅಸಿಸ್ಟೆಂಟ್ ಗವರ್ನರ್ ಡಾ. ಹರ್ಷ ಕುಮಾರ್ ರೈ ಮಾಡಾವು, ಝೋನಲ್ ಲೆಫ್ಟಿನೆಂಟ್ ಪೀಟರ್ ವಿಲ್ಸನ್ ಪ್ರಭಾಕರ್, ಪೂರ್ವಾಧ್ಯಕ್ಷ ಪಶುಪತಿ ಶರ್ಮಾ, ನಿಯೋಜಿತ ಅಧ್ಯಕ್ಷ ಕುಸುಮಾರಾಜ್, ಸ್ಥಾಪಕಾಧ್ಯಕ್ಷ ರತ್ನಾಕರ್ ರೈ, arch klump society ಸದಸ್ಯ ವಿಶ್ವಾಸ್ ಶೆಣೈ, ಪೂರ್ವಾಧ್ಯಕ್ಷರಾದ ಚೇತನ್, ಉಮೇಶ್ ನಾಯಕ್ ಪುತ್ತೂರು, ನರಸಿಂಹ ಪೈ ಮೊದಲಾದವರು ಉಪಸ್ಥಿತರಿದ್ದರು.