ಪುತ್ತೂರು: ಗೋಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್, ನಂದಿ ರಥಯಾತ್ರೆ ಸಂಚಾಲನ ಸಮಿತಿ ಪುತ್ತೂರು ಇದರ ವತಿಯಿಂದ ಪುತ್ತೂರಿಗೆ ಆಗಮಿಸಿದ ನಂದಿ ರಥ ಯಾತ್ರೆಗೆ ದರ್ಬೆಯಲ್ಲಿ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು.
ದರ್ಬೆಯಲ್ಲಿ ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾಂಗಳವರು ದೇಶಿ ನಂದಿಗೆ ಹಾರಾರ್ಪಣೆ ಮಾಡಿ ಶ್ರೀ ಕೃಷ್ಣನ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿದರು. ಡಾ. ಸಚಿನ್ ಶಂಕರ್ ಹಾರಕೆರೆಯವರು ತೆಂಗಿನ ಕಾಯಿ ಒಡೆಯುವ ಮೂಲಕ ನಂದಿ ರಥಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭ ಶಂಖನಾದ, ಚೆಂಡೆಯ ಸದ್ದು, ಕುಣಿತ ಭಜನೆ ಮೆರವಣಿಗೆ ವಿಶೇಷ ಮೆರುಗು ನೀಡಿತು.
ದರ್ಬೆಯಿಂದ ಆರಂಭಗೊಂಡ ಮೆರವಣಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಪನ್ನಗೊಂಡು ಬಳಿಕ ನಟರಾಜ ವೇದಿಕೆಯಲ್ಲಿ ಪ್ರೇಮಲತಾ ರಾವ್, ವೀಣಾ ಕೊಳತ್ತಾಯ, ವತ್ಸಲರಾಜ್ಞಿ, ಭಾಗ್ಯಶ್ರೀ, ಈಶ್ವರಿ, ಚಂದ್ರಾವತಿ, ಪುಷ್ಪಲತಾ, ಪಾರ್ವತಿ ಭಟ್ ಸಹಿತ 200 ಮಂದಿ ಮಹಿಳೆಯರು ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರು. ಬಳಿಕ ಧಾರ್ಮಿಕ ಸಭೆ ನಡೆಯಿತು.
ಮಾಜಿ ಶಾಸಕ ಸಂಜೀವ ಮಠಂದೂರು, ಗೋಸೇವಾ ಗತಿವಿಧಿ ಕರ್ನಾಟಕ ಸಮಿತಿಯ ಪ್ರಕಾಶ್ಚಂದ್ರ ರೈ ಕೈಕಾರ, ನಂದಿ ರಥಯಾತ್ರೆ ಸಂಚಾಲನ ಸಮಿತಿ ಪುತ್ತೂರು ಇದರ ಕಾರ್ಯದರ್ಶಿ ದಿನೇಶ್ ಪಂಜಿಗ, ಕೋಶಾಧಿಕಾರಿ ಪ್ರಸನ್ನ ಮಾರ್ತ, ಸದಸ್ಯೆ ವಸಂತಲಕ್ಷ್ಮೀ ವಿಜಯಲಕ್ಷ್ಮೀ ಶಗ್ರಿತ್ತಾಯ, ವಿಶ್ವಹಿಂದು ಪರಿಷತ್ ಪುತ್ತೂರು ನಗರ ಪ್ರಖಂಡ ಅಧ್ಯಕ್ಷ ದಾಮೋದರ ಪಾಟಾಳಿ, ಬಿಜೆಪಿ ಮುಖಂಡ ಮುರಳಿಕೃಷ್ಣ ಹಸಂತಡ್ಕ, ಅಜಿತ್ ರೈ ಹೊಸಮನೆ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಸಂತೋಷ್ ಕೈಕಾರ, ಸಂತೋಷ್ ಬೋನಂತಾಯ, ನಾಗೇಂದ್ರ ಬಾಳಿಗ, ಶಶಿಧರ ನಾಯಕ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮತ್ತು ಕೃಷ್ಣವೇಣಿಪ್ರಸಾದ್ ಮುಳಿಯ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಮಾಜಿ ಸದಸ್ಯ ರಾಮಚಂದ್ರ ಕಾಮತ್, ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕರ್ ಗೋಪಾಲಕಷ ಭಟ್, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಎಸ್, ಪುಡಾ ಮಾಜಿ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಎಸ್ ಅಪ್ಪಯ್ಯ ಮಣಿಯಾಣಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಚ್ಚುತ ನಾಯಕ್, ಉದಯ ಕುಮಾರ್ ಹೆಚ್, ರಾಜೇಶ್ ಬನ್ನೂರು, ಡಾ. ರವೀಶ್ ಪಡುಮಲೆ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಪಿ.ಜಿ.ಜಗನ್ನಿವಾಸ ರಾವ್, ವಿದ್ಯಾಗೌರಿ, ದೀಕ್ಷಾ ಪೈ, ಇಂದಿರಾ ಪಿ, ಸಂತೋಷ್ ಬೊಳುವಾರು, ಪೂರ್ಣಿಮ, ವಿಜಯಲಕ್ಷ್ಮೀ ಶಗ್ರಿತ್ತಾಯ, ಶಿವಪ್ರಸಾದ್ ಇ, ರಾಮದಾಸ್ ಹಾರಾಡಿ, ಸತೀಶ್ ನಾಕ್ ಪರ್ಲಡ್ಕ, ಮನೀಶ್ ಬಿರ್ವಾ, ರವಿನಾರಾಯಣ, ಹರಿಣಿ ಪುತ್ತೂರಾಯ, ಯುವರಾಜ್ ಪೆರಿಯತ್ತೋಡಿ, ಹರೀಶ್ ಬಿಜೆತ್ರೆ, ನಿತೀಶ್ ಕುಮಾರ್ ಶಾಂತಿವನ, ನಾಗೇಶ್ ಟಿ.ಎಸ್, ನವೀನ್ ರೈ ಕೈಕಾರ, ಪ್ರವೀಣ್ ಸರಳಾಯ, ಶಶಿಧರ್ ಬಾಳಿಗ, ನಾಗೇಂದ್ರ ಬಾಳಿಗ, ನಿರಂಜನ್, ಶ್ರೀಧರ್ ಪಟ್ಟ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಮೋಹನ್ ರೈ ನರಿಮೊಗರು, ಶ್ರೀಧರ್ ತೆಂಕಿಲ, ನವೀನ್ ಪಡಿವಾಳ್, ಭಾಮಿ ಜಗದೀಶ್ ಶೆಣೈ, ವಿನಯ ಭಂಡಾರಿ, ಕಿಸಾನ್ ಸಂಘದ ಸುಬ್ರಾಯ, ಮಹೇಶ್ ಕೇರಿ, ವಿಶಾಖ್ ರೈ ಸಹಿತ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದರು.
ಆಲಡ್ಕ ಸದಾಶಿವ ಭಜನಾ ಮಂಡಳಿಯ ಸದಸ್ಯರು ಕುಣಿತ ಭಜನೆ ನೆರವೇರಿಸಿದರು.