Gl jewellers
ಸ್ಥಳೀಯ

ದೂರಿನ ಹಿನ್ನೆಲೆ: ತಾಲೂಕು ಕಚೇರಿಗೆ ಹಠಾತ್ ದಾಳಿ ನಡೆಸಿದ ಶಾಸಕ ಅಶೋಕ್ ಕುಮಾರ್ ರೈ!

ಪುತ್ತೂರು ತಾಲೂಕು ಕಚೇರಿಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಶನಿವಾರ ಬೆಳಿಗ್ಗೆ ಹಠಾತ್ ದಾಳಿ ನಡೆಸಿದ ಘಟನೆ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರು ತಾಲೂಕು ಕಚೇರಿಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಶನಿವಾರ ಬೆಳಿಗ್ಗೆ ಹಠಾತ್ ದಾಳಿ ನಡೆಸಿದ ಘಟನೆ ನಡೆಯಿತು.

Papemajalu garady
Karnapady garady

ಸಾರ್ವಜನಿಕ ದೂರಿನ‌ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.

ತಾಲೂಕು ಕಚೇರಿ ಸಿಬ್ಬಂದಿಗಳು ತಡವಾಗಿ ಕಚೇರಿಗೆ ಆಗಮಿಸುತ್ತಾರೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಭೇಟಿ ನೀಡಿದ ಶಾಸಕರು, ಕಚೇರಿಗಳನ್ನು ಪರಿಶೀಲನೆ ನಡೆಸಿದರು.

ಇಬ್ಬರು ಸಿಬ್ಬಂದಿಗಳು ಗೈರಾಗಿದ್ದರು ಎಂದು ತಿಳಿದುಬಂದಿದೆ.

ಉಳಿದಂತೆ ಎಲ್ಲಾ ಕಚೇರಿಗಳಲ್ಲೂ ಸಿಬಂದಿಗಳು, ಅಧಿಕಾರಿಗಳು ಹಾಜರಿದ್ದರು.

10 ಗಂಟೆಗೇ ಕಚೇರಿಯಲ್ಲಿರಬೇಕು: ಶಾಸಕರ ಸೂಚನೆ
ಎಲ್ಲಾ ಅಧಿಕಾರಿಗಳು,‌ ಸಿಬಂದಿಗಳು, ಬೆಳಿಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು. ಕಚೇರಿಗೆ ತಡವಾಗಿ ಬರುವುದನ್ನು ನಾನು ಸಹಿಸುವುದಿಲ್ಲ.‌ಜನರ ಕೆಲಸ ಮಾಡಬೇಕು. ಜನ ಕಚೇರಿಗೆ ಬರುವಾಗ ಅಧಿಕಾರಿ,ಸಿಬಂದಿಗಳು ಇರಬೇಕು , ದೂರುಗಳು ಬಾರದ ಹಾಗೇ ಅವರೇ ನೋಡಿಕೊಳ್ಳಬೇಕು. ಇವತ್ತು ಕಚೇರಿಯಲ್ಲಿ ಇಲ್ಲದ ಇಬ್ಬರಿಗೆ ಶೋಕಾಸ್ ನೋಟೀಸ್ ಜಾರಿ ಮಾಡುವಂತೆ ಸೂಚನೆ ನೀಡಿದ್ದೇನೆ, ಸಹಾಯಕ‌ ಕಮಿಷನರ್ ಗೂ ಈ ವಿಚಾರದಲ್ಲಿ ಸೂಚನೆ ನೀಡಿದ್ದೇನೆ, ತಹಶಿಲ್ದಾರ್ ಗೂ ಸೂಚನೆ ನೀಡಿದ್ದೇನೆ

ಅಶೋಕ್ ರೈ, ಶಾಸಕರು,ಪುತ್ತೂರು


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ