ನಾಲ್ಕು ಜಿಲ್ಲೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೆಸ್ಕಾಂ ಇಲಾಖೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಿ ಸಂಸ್ಥೆಗಳು ಕೋಟ್ಯಂತರ ರೂ. ವಿದ್ಯುತ್ ಶುಲ್ಕ ಪಾವತಿ ಬಾಕಿ ಇರಿಸಿಕೊಂಡಿದೆ.
2024ರ ಅಂತ್ಯಕ್ಕೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಒಟ್ಟು 241 ಕೋ.ರೂ. ವಿದ್ಯುತ್ ಶುಲ್ಕ ಪಾವತಿಗೆ ಬಾಕಿ ಇರಿಸಿಕೊಂಡಿದ್ದು, ಇದು ಗರಿಷ್ಠ ಪ್ರಮಾಣವಾಗಿದೆ. ಉಳಿದಂತೆ ನಗರಾಭಿವೃದ್ಧಿ ಇಲಾಖೆಯಿಂದ 21 ಕೋ.ರೂ., ಸಣ್ಣ ನೀರಾವರಿ ಇಲಾಖೆಯಿಂದ 16 ಕೋ.ರೂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 5.1 ಕೋ.ರೂ. ಸಹಿತ ಒಟ್ಟು 384 ಕೋ.ರೂ.ಗೂ ಅಧಿಕ ವಿದ್ಯುತ್ ಶುಲ್ಕ 2024ನೇ ಸಾಲಿನಲ್ಲಿ ಮೆಸ್ಕಾಂಗೆ ಪಾವತಿಸಲು ಬಾಕಿ ಉಳಿದಿದೆ.
ಜನಸಾಮಾನ್ಯರು ಇಂತಿಷ್ಟು ತಿಂಗಳೊಳಗೆ ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತದೆ. ಈ ನಿಯಮಾವಳಿ ಸರಕಾರಿ ಸಂಸ್ಥೆಗಳಿಗೂ ಅನ್ವಯ ಆಗುತ್ತದೆಯಾದರೂ, ಏಕಾಏಕಿ ವಿದ್ಯುತ್ ಕಡಿತ ಮಾಡಲು ಸಾಧ್ಯವಾಗುತ್ತಿಲ್ಲ. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 241 ಕೋ.ರೂ. ಬಾಕಿ ಉಳಿಸಿಕೊಂಡಿದ್ದು, ಸಂಪೂರ್ಣ ವಿದ್ಯುತ್ ಕಡಿತ ಮಾಡಿದರೆ ಸಾರ್ವಜನಿಕ ಸೇವೆಯಲೂ ವ್ಯತ್ಯಾಸ ಉಂಟಾಗುತ್ತದೆ. ಈಗಾಗಲೇ ಕೆಲವು ಸರಕಾರಿ ಶಾಲೆ, ಕಚೇರಿಗಳು ಹಾಗೂ ಆಸ್ಪತ್ರೆಗಳ ವಿದ್ಯುತ್ ಕಡಿತ ಮಾಡಿದ ಪರಿಣಾಮ ಸೇವೆಯಲ್ಲಿ ವ್ಯತ್ಯಯ ಉಂಟಾಗಿ, ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಬೇಕಾದ ಅನಿವಾರ್ಯ ಸ್ಥಿತಿ ಮೆಸ್ಕಾಂನದ್ದಾಗಿದೆ. ಆಯಾ ಇಲಾಖೆಯ ಮುಖ್ಯಸ್ಥರು ಹಾಗೂ ಜಿಲ್ಲಾಧಿಕಾರಿಗಳು ಕೂಡ ವಿದ್ಯುತ್ ಸಂಪರ್ಕ ಒದಗಿಸುವ ಬಗ್ಗೆ ಮನವಿ ಮಾಡುವ ಕಾರಣ ಕಠಿಣ ನಿರ್ಧಾರ ತೆಗೆದುಕೊಳ್ಳಲೂ ಮೆಸ್ಕಾಂಗೆ ಆಗುತ್ತಿಲ್ಲ.
ಲಾಭದಾಯಕ ಸಂಸ್ಥೆ:
ರಾಜ್ಯದ ಇತರ ವಿದ್ಯುಚ್ಛಕ್ತಿ ಕಂಪೆನಿಗಳಿಗೆ ಹೋಲಿಸಿದರೆ ಮೆಸ್ಕಾಂ ಲಾಭದಾಯಕ ಸಂಸ್ಥೆಯಾಗಿದ್ದು, ಈಗಾಗಲೇ 53 ಕೋ.ರೂ.ಗೂ ಅಧಿಕ ಲಾಭದಲ್ಲಿದೆ. ಆದರೆ ಇನ್ನೂ 400 ಕೋ.ರೂ.ಗೂ ಅಧಿಕ ವಿದ್ಯುತ್ ಶುಲ್ಕ ವಸೂಲಿಗೆ ಬಾಕಿ ಉಳಿದಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲೂ ಈ ಬಗ್ಗೆ ಹಲವಾರು ಬಾರಿ ಪ್ರಸ್ತಾಪವಾದರೂ ಪೂರ್ಣ ಪ್ರಮಾಣದಲ್ಲಿ ಮೊತ್ತ ಪಾವತಿಯಾಗುತ್ತಿಲ್ಲ. ಆಯಾ ಇಲಾಖೆಗೆ ಸರಕಾರದ ಅನುದಾನ ಲಭಿಸಿದಂತೆ ಹಂತಹಂತವಾಗಿ ಮೆಸ್ಕಾಂ ಬಿಲ್ ಪಾವತಿಸಲಾಗುವುದು ಎಂದು ಓರ್ವ ಅಧಿಕಾರಿ ತಿಳಿಸಿದ್ದಾರೆ.
ಕೇಂದ್ರ ಸರಕಾರಿ ಸಂಸ್ಥೆಗಳ ಬಾಕಿ:
ಕೇಂದ್ರ ಸರಕಾರ ವ್ಯಾಪ್ತಿಯ ಸಂಸ್ಥೆಗಳೂ 2024ನೇ ಸಾಲಿನಲ್ಲಿ 1.79 ಕೋ.ರೂ. ವಿದ್ಯುತ್ ಬಿಲ್ ಬಾಕಿ ಇರಿಸಿವೆ. ಈ ಪೈಕಿ ಬಿಎಸ್‌ಎನ್‌ಎಲ್ ಹಾಗೂ ಟೆಲಿಕಾಂ ಎಕ್ಸ್‌ಚೇಂಜ್‌ಗಳು 18.77, ಅಂಚೆ ಕಚೇರಿ 18.35, ಎಲ್ ಐಸಿ 12.10, ಇಎಸ್ ಐ 8.49 ಬಾಕಿ ಉಳಿಸಿಕೊಂಡಿದೆ. ಪರಿಸರ ತರಬೇತಿ ಸಂಸ್ಥೆ, ಆಡಳಿತಾತ್ಮಕ, ಚುನಾವಣೆ ಆಯೋಗ ಹಾಗೂ ಏರ್‌ಪೋರ್ಟ್‌ಗಳು ಸಕಾಲದಲ್ಲಿ ಬಿಲ್ ಪಾವತಿಸುತ್ತಿವೆ.
ಆದ್ಯತೆ ಮೇರೆಗೆ ಸಂಪರ್ಕ:
ವಿವಿಧ ಸರಕಾರಿ ಸಂಸ್ಥೆಗಳು ಮೆಸ್ಕಾಂಗೆ ಕೋಟ್ಯಂತರ ರೂ. ವಿದ್ಯುತ್ ಶುಲ್ಕ ಪಾವತಿಗೆ ಬಾಕಿ ಇರಿಸಿಕೊಂಡಿರುವುದು ನಿಜ. ಈ ಬಗ್ಗೆ ಈಗಾಗಲೇ ವಿವಿಧ ಇಲಾಖೆಗಳಿಗೆ ಪತ್ರ ಬರೆದು ಎಚ್ಚರಿಕೆಯನ್ನೂ ನೀಡಲಾಗಿದೆ. ಸಾರ್ವಜನಿಕ ಸೇವೆಯಲಿ ಯಾವುದೇ