pashupathi
ರಾಜ್ಯ ವಾರ್ತೆ

ನದಿಯಲ್ಲಿ ಮುಳುಗಿಸಿ ಗಂಡನನ್ನೇ ಕೊಂದ ಖತರ್ನಾಕ್ ಪತ್ನಿ: 11 ತಿಂಗಳ ಬಳಿಕ ಕೊಲೆ ರಹಸ್ಯ ಬಯಲು..!

tv clinic
ಶವ ಪತ್ತೆಯ ಜಾಡು ಹಿಡಿದು, ತನಿಖೆ ಕೈಗೊಂಡಾಗ ಕೃಷ್ಣಾ ನದಿಯಲ್ಲಿ ಮೃತಪಟ್ಟಿದ್ದು ಮಲ್ಲಪ್ಪ ಕಂಬಾರ ಎಂದು ಗೊತ್ತಾಗಿತ್ತು. ಮಲ್ಲಪ್ಪ ಅವರ ಪತ್ನಿ ದಾನವ್ವ, ಅವಳ ಪ್ರಿಯಕರ ಪ್ರಕಾಶ ಬೆನ್ನಾಳಿ, ರಾಮಪ್ಪ ಮಾದರ ಎಂಬವರು ಸೇರಿ ಕೃಷ್ಣಾ ನದಿಯಲ್ಲಿ ಮಲ್ಲಪ್ಪನನ್ನು ಮುಳುಗಿಸಿ ಕೊಲೆ ಮಾಡಿದ್ದಾರೆ' ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ:  11 ತಿಂಗಳ ಬಳಿಕ ಬೆಳಗಾವಿಯ ಅಥಣಿ ತಾಲೂಕು ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಕೃಷ್ಣಾ ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

akshaya college

ಈ ಬಗ್ಗೆ ಎಸ್ಪಿ ಡಿ.4 ರಂದು ಮಾಹಿತಿ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ, ಅವಳ ಪ್ರಿಯಕರ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. 2023ರ ಡಿಸೆಂಬರ್ 27ರಂದು ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿತ್ತು. ಈ ಮಧ್ಯೆ, ರಾಯಬಾಗ ತಾಲೂಕಿನ ಇಟನಾಳದಲ್ಲಿ ಯುವಕನೊಬ್ಬ ಕಾಣೆಯಾಗಿರುವ ವಿಷಯ ಸುದ್ದಿಯಾಗಿತ್ತು. ಆದರೆ, ಕಾಣೆಯಾಗಿರುವ ಬಗ್ಗೆ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿರಲಿಲ್ಲ ಎಂದು ಎಸ್‌ಪಿ ವಿವರಿಸಿದರು.

ಶವ ಪತ್ತೆಯ ಜಾಡು ಹಿಡಿದು, ತನಿಖೆ ಕೈಗೊಂಡಾಗ ಕೃಷ್ಣಾ ನದಿಯಲ್ಲಿ ಮೃತಪಟ್ಟಿದ್ದು ಮಲ್ಲಪ್ಪ ಕಂಬಾರ ಎಂದು ಗೊತ್ತಾಗಿತ್ತು. ಮಲ್ಲಪ್ಪ ಅವರ ಪತ್ನಿ ದಾನವ್ವ, ಅವಳ ಪ್ರಿಯಕರ ಪ್ರಕಾಶ ಬೆನ್ನಾಳಿ, ರಾಮಪ್ಪ ಮಾದರ ಎಂಬವರು ಸೇರಿ ಕೃಷ್ಣಾ ನದಿಯಲ್ಲಿ ಮಲ್ಲಪ್ಪನನ್ನು ಮುಳುಗಿಸಿ ಕೊಲೆ ಮಾಡಿದ್ದಾರೆ’ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.

‘ಒಂದೂವರೆ ವರ್ಷದ ಹಿಂದೆ ದಾನವ್ವ ಕಾಣೆಯಾದ ಕುರಿತು ಅವರ ತಂದೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದಾನವ್ವ ಪ್ರಕಾಶ ಬೆನ್ನಾಳಿ ಜತೆ ಓಡಿಹೋಗಿದ್ದು ಪತಿ ಮಲ್ಲಪ್ಪ ಅವರಿಗೆ ತಿಳಿದಿತ್ತು ಎನ್ನಲಾಗಿದೆ. ಕೆಲ ದಿನಗಳ ನಂತರ ದಾನವ್ವ ಮನೆಗೆ ವಾಪಸ್ ಆಗಿದ್ದರು. ಓಡಿ ಹೋಗಿದ್ದ ವಿಚಾರಕ್ಕೆ ಮನೆಯಲ್ಲಿ ದಂಪತಿ ಮಧ್ಯೆ ಪ್ರತಿದಿನವೂ ಗಲಾಟೆಯಾಗುತ್ತಿತ್ತು. ಪತ್ನಿಯ ಸಹವಾಸ ಬಿಡುವಂತೆ ಪ್ರಕಾಶನಿಗೆ ಮಲ್ಲಪ್ಪ ಎಚ್ಚರಿಕೆ ಕೊಟ್ಟಿದ್ದರು. ಹಾಗಾಗಿ ದಾನವ್ವ ಮತ್ತು ಪ್ರಕಾಶನು ರಾಮಪ್ಪ ಎಂಬವನ ನೆರವಿನಿಂದ ಕಳೆದ ಡಿಸೆಂಬರ್ ನಲ್ಲಿ ಆಕೆಯ ಪತಿ ಮಲ್ಲಪ್ಪನನ್ನು ಕೊಲೆ ಮಾಡಿದ್ದಾರೆ’ ಎಂದು ವಿಚಾರಣೆಯ ವೇಳೆ ಬಯಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

108 ಆ್ಯಂಬುಲೆನ್ಸ್ ಸೇವೆ ಬಲಪಡಿಸಲು ಹೊಸ ಯೋಜನೆ!! ಆಶಾ ಮೆಂಟರ್ಸ್ ಜವಾಬ್ದಾರಿ ಆರೋಗ್ಯ ಕೇಂದ್ರದ ಸಿಬಂದಿ ಹೆಗಲಿಗೆ!

108 ಆರೋಗ್ಯ ಕವಚ ಸೇವೆಯನ್ನು ಜಿವಿಕೆ ಸಂಸ್ಥೆಯಿಂದ ಹಿಂಪಡೆದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ…