ರಾಜ್ಯ ವಾರ್ತೆ

ಡಿ.3–ವಿಶ್ವ ಅಂಗವಿಕಲರ ದಿನ, ಬೆಂಗಳೂರಿನಲ್ಲಿ ಸಿಎಂ ಸನ್ಮಾನ; ಪ್ಯಾರಾ ಏಷ್ಯಾ ಪೆಸಿಫಿಕ್‌ ಕ್ರೀಡಾಪಟು ಉಮೇಶ್ ಕುಂದರ್‌ಗೆ ರಾಜ್ಯಪ್ರಶಸ್ತಿ

ಉಡುಪಿ ತಾಲ್ಲೂಕು ಮಂದರ್ತಿ ಹೆಗ್ಗುಂಜೆ ಗ್ರಾಮದ ಉಮೇಶ್‌ ಕುಂದರ್‌ ಅವರು ವಿಶೇಷ ಕ್ರೀಡಾಪಟುವಾಗಿ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದು, ಇದೀಗ ಅವರಿಗೆ ರಾಜ್ಯಪ್ರಶಸ್ತಿ ಅರಸಿ ಬಂದಿದೆ. ಅಂತರರಾಷ್ಟ್ರೀಯ ಅಂಗವಿಕಲ ದಿನದ ಪ್ರಯುಕ್ತ ಡಿಸೆಂಬರ್ 3ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಮೇಶ್ ಕುಂದರ್‌ ಅವರನ್ನು ಸನ್ಮಾನಿಸಲಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಉಡುಪಿ ತಾಲ್ಲೂಕು ಮಂದರ್ತಿ ಹೆಗ್ಗುಂಜೆ ಗ್ರಾಮದ ಉಮೇಶ್‌ ಕುಂದರ್‌ ಅವರು ವಿಶೇಷ ಕ್ರೀಡಾಪಟುವಾಗಿ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದು, ಇದೀಗ ಅವರಿಗೆ ರಾಜ್ಯಪ್ರಶಸ್ತಿ ಅರಸಿ ಬಂದಿದೆ. ಅಂತರರಾಷ್ಟ್ರೀಯ ಅಂಗವಿಕಲ ದಿನದ ಪ್ರಯುಕ್ತ ಡಿಸೆಂಬರ್ 3ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಮೇಶ್ ಕುಂದರ್‌ ಅವರನ್ನು ಸನ್ಮಾನಿಸಲಿದ್ದಾರೆ.

1994ರಿಂದ 2009ರ ನಡುವೆ 100 ಮೀಟರ್‌, 200 ಮೀಟರ್‌, 400 ಮೀಟರ್ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಜಾವೆಲಿನ್ ಎಸೆತ ಮೊದಲಾದ ಕ್ರೀಡಾ ವಿಭಾಗಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಉಮೇಶ್‌ ಅವರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹಲವು ಪದಕಗಳನ್ನು ಗಳಿಸಿದ್ದು, 1999ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಪ್ಯಾರಾ ಏಷ್ಯಾ ಪೆಸಿಫಿಕ್‌ ಕ್ರೀಡಾಕೂಟದಲ್ಲಿ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಈ ಸಾಧನೆಯನ್ನು ಗಮನಿಸಿ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರೇ ಉಮೇಶ್ ಅವರನ್ನು ಸನ್ಮಾನಿಸಿದ್ದರು. 2008ರಲ್ಲಿ ನಡೆದ ಅಂತರರಾಷ್ಟ್ರೀಯ ವಿಕಲಚೇತನರ ಅಥ್ಲೆಟಿಕ್ಸ್‌ನಲ್ಲಿ ಉದ್ದ ಜಿಗಿತದಲ್ಲಿ ಬೆಳ್ಳಿ ಪದಕ ಗಳಿಸಿದ್ದರು.

ಕಿರಿಯ ಕ್ರೀಡಾಪಟುವಾಗಿರುವ ಉಮೇಶ್ ಕುಂದರ್‌ ಇದೀಗ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ವಿಶೇಷ ಚೇತನರಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ಉಮೇಶ್‌ ಅವರ ’ವೈಯಕ್ತಿಕ ಕ್ಷೇತ್ರ’ದಲ್ಲಿನ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರ ಅವರನ್ನು ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿದ್ದು, ಈ ಮೂಲಕ ಉಡುಪಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

ಕರ್ನಾಟಕ ನಿವೃತ್ತ  ನೌಕರರ ರಾಜ್ಯಮಟ್ಟದ ಪ್ರತಿಭಟನಾ ಸಮಾವೇಶ ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ

ಸಲು ಹಾಗೂ ಆರ್ಥಿಕ ಸೌಲಭ್ಯವನ್ನು ನೀಡುವಲ್ಲಿ ಪರಿಷ್ಕೃತ ಆದೇಶ ಹೊರಡಿಸಬೇಕೆಂದು ನಡೆಸುತ್ತಿರುವ…

1 of 2