ರಾಜ್ಯ ವಾರ್ತೆ

ಒಂದು ಹಗ್ ಮಾಡು ಯಾರಿಗೂ ಹೇಳಲ್ಲ!ಹಠಾತ್ ಮನೆ ಒಳ ಪ್ರವೇಶಿಸಿ ಬಾಗಿಲು ಮುಚ್ಚಿದ್ದ ಪೊಲೀಸ್ ಕಾನ್ಸ್ಟೇಬಲ್!!

ಒಂದೇ ಒಂದು ಹಗ್ ಮಾಡು, ಯಾರಿಗೂ ಹೇಳುವುದಿಲ್ಲ’ ಎಂದು ಪಾಸ್​ಪೋರ್ಟ್ ವೆರಿಫಿಕೇಷನ್ ನೆಪದಲ್ಲಿ ಪೊಲೀಸ್ ಕಾನ್​ಸ್ಟೇಬಲ್ ಒಬ್ಬರು ಮಹಿಳಾ ಟೆಕ್ಕಿಗೆ ಕಿರುಕುಳ ನೀಡಿದ ಆರೋಪ ಬೆಂಗಳೂರಿನ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದೀಗ ಮಹಿಳಾ ಟೆಕ್ಕಿಯ ಆರೋಪದ ಬೆನ್ನಲ್ಲೇ, ಅಸಭ್ಯ ವರ್ತನೆ ತೋರಿದ ಕಾನ್​ಸ್ಟೇಬಲ್ ಕಿರಣ್ ಎಂಬಾತನನ್ನು ಅಮಾನತುಗೊಳಿಸಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

‘ಒಂದೇ ಒಂದು ಹಗ್ ಮಾಡು, ಯಾರಿಗೂ ಹೇಳುವುದಿಲ್ಲ’ ಎಂದು ಪಾಸ್​ಪೋರ್ಟ್ ವೆರಿಫಿಕೇಷನ್ ನೆಪದಲ್ಲಿ ಪೊಲೀಸ್ ಕಾನ್​ಸ್ಟೇಬಲ್ ಒಬ್ಬರು ಮಹಿಳಾ ಟೆಕ್ಕಿಗೆ ಕಿರುಕುಳ ನೀಡಿದ ಆರೋಪ ಬೆಂಗಳೂರಿನ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದೀಗ ಮಹಿಳಾ ಟೆಕ್ಕಿಯ ಆರೋಪದ ಬೆನ್ನಲ್ಲೇ, ಅಸಭ್ಯ ವರ್ತನೆ ತೋರಿದ ಕಾನ್​ಸ್ಟೇಬಲ್ ಕಿರಣ್ ಎಂಬಾತನನ್ನು ಅಮಾನತುಗೊಳಿಸಲಾಗಿದೆ.

ಬಾಪೂಜಿನಗರದ ಯುವತಿಯೊಬ್ಬರು ಇತ್ತೀಚಗೆ ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ನಂತರ, ಪಾಸ್​ಪೋರ್ಟ್ ವೆರಿಫಿಕೇಷನ್​ಗೆಂದು ಪೊಲೀಸ್ ಕಾನ್​ಸ್ಟೇಬಲ್ ಕಿರಣ್ ಯುವತಿಯ ಮನೆಗೆ ತೆರಳಿದ್ದ. ಎರಡ್ಮೂರು ಬಾರಿ ಕಿರಣ್ ಯುವತಿಯ ಮನೆಗೆ ಹೋಗಿದ್ದ, ಅಲ್ಲದೆ ಅಸಭ್ಯ ವರ್ತನೆ ತೋರಿದ್ದ ಎಂದು ಆರೋಪಿಸಲಾಗಿದೆ.

ಹಠಾತ್ ಮನೆ ಒಳ ಪ್ರವೇಶಿಸಿ ಬಾಗಿಲು ಮುಚ್ಚಿದ ಪೊಲೀಸ್
ಪಾಸ್​ಪೋರ್ಟ್ ವೆರಿಫಿಕೇಷನ್​ ನೆಪದಲ್ಲಿ ಯುವತಿಯ ಮನೆಗೆ ಬಂದ ಪೊಲೀಸ್ ಕಾನ್​ಸ್ಟೇಬಲ್ ಕಿರಣ್, ಮನೆ ಒಳ ಪ್ರವೇಶಿಸಿ ಅರ್ಧ ಬಾಗಿಲು ಮುಚ್ಚಿದ್ದಾನೆ. ನಂತರ ಯುವತಿ ಬಳಿ, ‘‘ನಿಮ್ಮಣ್ಣ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ಇದನ್ನೇ ನೆಪವಾಗಿಟ್ಟುಕೊಂಡು ನಿನ್ನ ಪಾಸ್​ಪೋರ್ಟ್ ಕ್ಯಾನ್ಸಲ್ ಮಾಡಿಸುತ್ತೇನೆ. ನೀನು ನನಗೆ ಸಹಕರಿಸಬೇಕು. ಬಾಗಿಲು ಹಾಕು’’ ಎಂದು ಯುವತಿ ಬಳಿ ಪೊಲೀಸ್ ಕಾನ್​ಸ್ಟೇಬಲ್ ಆಗ್ರಹಿಸಿದ್ದ ಎಂದು ದೂರಲಾಗಿದೆ. ಅಲ್ಲದೆ, ಯುವತಿ ಒಪ್ಪದಿದ್ದಾಗ ತಾನೇ ಹೋಗಿ ಬಾಗಿಲು ಮುಚ್ಚಿದ್ದಾನೆ. ಅಲ್ಲದೆ, ಯಾರಿಗೂ ಹೇಳಬೇಡ, ಒಂದೇ ಒಂದ್ ಸಲ ಹಗ್ ಮಾಡುತ್ತೇನೆ ಎಂದಿದ್ದಾಗಿ ಆರೋಪಿಸಲಾಗಿದೆ.

ಯುವತಿಯ ಅಣ್ಣನ ಕಾಣುತ್ತಿದ್ದಂತೆ ವರಸೆ ಬದಲು!
ಯುವತಿ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಂತೆಯೇ ಆಕೆಯ ಅಣ್ಣ ಮತ್ತೊಂದು ಕೊಠಡಿಯಲ್ಲಿ ಇರುವುದು ಪೊಲೀಸ್ ಕಾನ್​​ಸ್ಟೇಬಲ್ ಗಮನಕ್ಕೆ ಬಂದಿದೆ. ಆಗ ವರಸೆ ಬದಲಾಯಿಸಿದ ಕಿರಣ್, ‘‘ನೀನು ಒಳಗೆ ಇದ್ದಿ ಎಂದೇ ನಾನೆ ಹಿಂಗೆ ಮಾತನಾಡಿದ್ದು, ನಿನ್ನ ತಂಗಿ ನನ್ನ ತಂಗಿ ಇದ್ದಹಾಗೆ’’ ಎಂದಿದ್ದ. ಈ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿಗೆ ಯುವತಿ ದೂರು ನೀಡಿದ್ದರು. ನಂತರ ಡಿಸಿಪಿ ಗಿರೀಶ್ ತನಿಖೆ ನಡೆಸಿ ಪೇದೆ ಕಿರಣ್​ನನ್ನು ಅಮಾನತುಗೊಳಿಸಿದ್ದಾರೆ.‌


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

ಬೌನ್ಸರ್ ಜತೆ ಪೊಲೀಸರ ಸಭೆ, ಇದೇ ಮೊದಲು!! ಬೌನ್ಸರ್’ಗಳಿಗೆ ನೀಡಿದ ಕಿವಿಮಾತೇನು? ಪಡೆದುಕೊಂಡ ಸಲಹೆಗಳೇನು?

ಹೊಸ ವರ್ಷ ಆಚರಣೆಗೆ ದಿನಗಣನೆ ಶುರುವಾಗಿದೆ. ಈ ಬಾರಿ ಹೆಚ್ಚಿನ ಭದ್ರತೆಗಾಗಿ ಬೆಂಗಳೂರು ಕೇಂದ್ರ…

1 of 2