ಇಷ್ಟು ದಿನಗಳ ಕಾಲ ಸರ್ಕಾರ ನಲ್ಲಿ ನೀರಿಗೆ ಶುಲ್ಕವನ್ನು ವಿಧಿಸುತ್ತಿತ್ತು. ಆದರೆ ಇನ್ನು ಮುಂದೆ ಬೋರ್ವೆಲ್ ನೀರಿಗೂ ಕೂಡ ಶುಲ್ಕ ವಿಧಿಸಲು ಚಿಂತನೆ ನಡೆಸಿದೆ. ಕೇಂದ್ರ ಸರ್ಕಾರ ಈ ಪ್ರಸ್ತಾವನೆಯನ್ನು ಮುಂದಿಟ್ಟಿದ್ದು ರಾಜ್ಯ ಸರ್ಕಾರ ಇದಕ್ಕೆ ಅನುಮತಿ ನೀಡಿದೆ ಎನ್ನಲಾಗಿದೆ.
ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಆದರೆ ಬೋರ್ವೆಲ್ ಕೊರೆಸುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಬೋರ್ವೆಲ್ ನೀರು ದುರ್ಬಳಕೆ ಆಗುತ್ತಿದೆ. ಇದಕ್ಕೆ ಇತಿಶ್ರೀ ಹಾಡಲು ನಿರ್ಧರಿಸಿರುವ ಸರ್ಕಾರ, ನಗರ ಪ್ರದೇಶಗಳಲ್ಲಿ ಕೊಳವೆ ಬಾವಿಯಿಂದ ತೆಗೆಯುವ ನೀರಿನ ಬಳಕೆ ಪ್ರಮಾಣವನ್ನು (Digital Telemetry) ಅಳವಡಿಸಿ ದರ ನಿಗದಿ ಮಾಡಲು ಮುಂದಾಗಿದೆ. ಇನ್ನು ಸರ್ಕಾರದ ಈ ಕ್ರಮಕ್ಕೆ ತಜ್ಞರು ಸಹಮತ ವ್ಯಕ್ತಪಡಿಸಿದ್ದಾರೆ.
ಕೊಳವೆ ಬಾವಿ ಬಳಕೆ ಶುಲ್ಕದಿಂದ ಯಾರಿಗೆಲ್ಲ ವಿಯಾಯಿತಿ?
ವೈಯಕ್ತಿಕ ಗೃಹೋಪಯೋಗಿ ಬಳಕೆಗೆ ಸೇನೆ ಹಾಗೂ ಸಶಸ್ತ್ರ ಪಡೆಗಳು ಹಾಗೂ ಸಂಸ್ಥೆಗಳು ಕೃಷಿ ಚಟುವಟಿಕೆಗಳು
ದಿನಕ್ಕೆ 10 ಕ್ಯೂಬಿಕ್ ಗಿಂತ ಕಡಿಮೆ ಬಳಕೆ ಮಾಡುವಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೆ, 20 KLD ವರೆಗೆ ಕುಡಿಯುವ ಹಾಗೂ ಗೃಹೋಪಯೋಗಿ ಬಳಕೆಗೆ, ಇತ್ಯಾದಿ
ಈ ವಿಚಾರವಾಗಿ ಕೇಂದ್ರ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಯನ್ನು ಒಪ್ಪಿಕೊಂಡಿರುವ ರಾಜ್ಯ ಸರ್ಕಾರ, ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೂಡ ನೀಡಿದೆ. ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕರಿಂದಲೂ ಸಹಮತ ವ್ಯಕ್ತವಾಗಿದೆ.