pashupathi
ರಾಜ್ಯ ವಾರ್ತೆ

ಬೆಳಗಾವಿ ಜಿಲ್ಲಾಧಿಕಾರಿಯ ಕಾರು ಜಪ್ತಿ!! ಗುತ್ತಿಗೆದಾರನಿಗೆ ಬಿಲ್ ಪಾವತಿ ಮಾಡದ್ದಕ್ಕೆ ಆದೇಶ ಹೊರಡಿಸಿದ ನ್ಯಾಯಾಲಯ!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ: ಅನಿರೀಕ್ಷಿತ ಘಟನೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಅವರ ಕಾರನ್ನು ಜಪ್ತಿ ಮಾಡಿರುವ ಘಟನೆ ನಡೆದಿದೆ.

akshaya college

ಬ್ಯಾರೇಜ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಬಾಕಿ ಬಿಲ್ ಪಾವತಿ ಮಾಡದೇ ಇರುವುದಕ್ಕೆ ದಂಡ ಸಹಿತ 1.31 ಕೋಟಿ ರೂ. ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪಾವತಿಸದ ಹಿನ್ನೆಲೆಯಲ್ಲಿ ವಾರಂಟ್ ಸಹ ಜಾರಿಯಾಗಿತ್ತು ಎಂದು ಗುತ್ತಿಗೆದಾರರ ಪರ ವಕೀಲ ಓ.ಬಿ. ಜೋಶಿ ತಿಳಿಸಿದ್ದಾರೆ.

ಸಣ್ಣ ನೀರಾವರಿ ಇಲಾಖೆಗೆ ಸೇರಿದ ದೂಧಗಂಗಾ ನದಿಯ ಬ್ಯಾರೇಜ್ ನಿರ್ಮಾಣದ ಗುತ್ತಿಗೆಯನ್ನು ನಾರಾಯಣ ಕಾಮತ್ ಅವರಿಗೆ 1992-93ರಲ್ಲಿ ನೀಡಲಾಗಿತ್ತು. ಕಾಮಗಾರಿಗೆ ಬೇಕಿರುವ ಅನುದಾನ, ಸಿಮೆಂಟ್ ಅನ್ನು ಇಲಾಖೆ ನೀಡುವುದಾಗಿ ತಿಳಿಸಿತ್ತು. ಆದರೆ, ಕಾಮಗಾರಿ ಆರಂಭವಾಗಿ ಮೂರು ವರ್ಷಗಳಾದರೂ ಅನುದಾನ ಕೊಡಲಿಲ್ಲ. ಇದರಿಂದಾಗಿ ನಾರಾಯಣ 1995ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಗುತ್ತಿಗೆದಾರನಿಗೆ ₹35 ಲಕ್ಷ ಪಾವತಿಸುವಂತೆ ಆದೇಶ ನೀಡಿತ್ತು. ಸರ್ಕಾರ ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು. ಆಗ ವಿಚಾರಣೆ ಮಾಡಿದ ಹೈಕೋರ್ಟ್, ಮರುವಿಚಾರಣೆ ಮಾಡುವಂತೆ ಆದೇಶಿಸಿತ್ತು. ಆಗ ಮರುವಿಚಾರಣೆ ಮಾಡಿದ ಕೆಳ ನ್ಯಾಯಾಲಯ, 2025ರ ಜೂನ್ ತಿಂಗಳೊಳಗೆ ಒಟ್ಟು ಬಾಕಿ ಮೊತ್ತದಲ್ಲಿ ಶೇ. 50ರಷ್ಟು (ಬಡ್ಡಿ ಸಹಿತವಾಗಿ) ಗುತ್ತಿಗೆದಾರನಿಗೆ ಪಾವತಿಸುವಂತೆ ತೀರ್ಪು ಕೊಟ್ಟಿತ್ತು ಎಂದು ಹೇಳಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

108 ಆ್ಯಂಬುಲೆನ್ಸ್ ಸೇವೆ ಬಲಪಡಿಸಲು ಹೊಸ ಯೋಜನೆ!! ಆಶಾ ಮೆಂಟರ್ಸ್ ಜವಾಬ್ದಾರಿ ಆರೋಗ್ಯ ಕೇಂದ್ರದ ಸಿಬಂದಿ ಹೆಗಲಿಗೆ!

108 ಆರೋಗ್ಯ ಕವಚ ಸೇವೆಯನ್ನು ಜಿವಿಕೆ ಸಂಸ್ಥೆಯಿಂದ ಹಿಂಪಡೆದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ…