tamanvi
ರಾಜ್ಯ ವಾರ್ತೆ

ಮಂಗಳೂರು – ಬೆಂಗಳೂರಿಗೂ ಬರಲಿರೆ ವಂದೇ ಭಾರತ್ ಟ್ರೈನ್!

GL
ಬೆಂಗಳೂರು ಹಾಗೂ ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಸಂಬಂಧ 33 ಕಿಮೀ ವಿದ್ಯುತ್ ಕಾಮಗಾರಿ ಬಾಕಿ ಇದ್ದು, 2026ರ ಫೆಬ್ರವರಿ ಒಳಗೆ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲು ಉದ್ದೇಶಿಸಲಾಗಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ಬೆಂಗಳೂರು ಹಾಗೂ ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಸಂಬಂಧ 33 ಕಿಮೀ ವಿದ್ಯುತ್ ಕಾಮಗಾರಿ ಬಾಕಿ ಇದ್ದು, 2026ರ ಫೆಬ್ರವರಿ ಒಳಗೆ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ರೈಲ್ವೆ ಮತ್ತು ಜಲ ಶಕ್ತಿ ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದರು.

ನಗರದ ಜಿಲ್ಲಾಕಾರಿ ಕಚೇರಿಯಲ್ಲಿ ಶುಕ್ರವಾರ ಸಂಜೆ ರೈಲ್ವೆ ಹಾಗೂ ಕೆಪಿಟಿಸಿಎಲ್ ಹಿರಿಯ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ವಂದೇ ಭಾರತ್ ರೈಲು ಸಂಚಾರಕ್ಕೆ ಅಗತ್ಯವಿರುವ ವಿದ್ಯುತ್ ಸಂಪರ್ಕದ ಕಾಮಗಾರಿಯಲ್ಲಿ 22 ಕಿಮೀ ಪೂರ್ಣಗೊಂಡಿದೆ. ಉಳಿದ 32ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ. ಬೆಂಗಳೂರು, ತುಮಕೂರು, ಹಾಸನ, ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚರಿಸಲಿದೆ.” ಎಂದು ಹೇಳಿದರು.

ಹಾಸನ-ಮಂಗಳೂರು ನಡುವಿನ ರೈಲ್ವೆ ಮಾರ್ಗದಲ್ಲಿ 57 ಸುರಂಗ, 700 ಸೇತುವೆಗಳಿವೆ. ಡಬ್ಲಿಂಗ್ ಮಾಡಲು ಸರ್ವೆ ಮಾಡಿದ್ದು. 50 ಸಾವಿರ ಕೋಟಿ ರೂ. ಅಗತ್ಯವಿದೆ. ಈ ಸಂಬಂಧ ಡಿಪಿಆರ್ ಮಾಡಿ ಟೆಂಡ‌ರ್ ಕರೆಯಲಾಗುವುದು.” ಎಂದು ತಿಳಿಸಿದರು.

“ಮಳೆಗಾಲದಲ್ಲಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿತ ಹಾಗೂ ಮರ ಬಿದ್ದು ಆಗುತ್ತಿದ್ದ ತೊಂದರೆಯನ್ನು ಮುಂದಿನ ನಾಲೈದು ತಿಂಗಳಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ” ಎಂದು ಹೇಳಿದರು.

“ಬೇಲೂರು-ಹಾಸನ ರೈಲ್ವೆ ಮಾರ್ಗಕ್ಕೆ ಅಗತ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಜುಲೈ 20ರೊಳಗೆ ಹಸ್ತಾಂತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಡೂರು. ಚಿಕ್ಕಮಗಳೂರು, ಬೇಲೂರು ಮಾರ್ಗದ 68 ಕಿಮೀ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.” ಎಂದು ವಿವರಿಸಿದರು.

“ಯೋಜನೆಗೆ ನೂರು ರೂ. ವೆಚ್ಚವಾದರೆ ಅಷ್ಟರಲ್ಲೇ ಪೂರ್ಣಗೊಳಿಸಬೇಕೆ ಹೊರತು, ವಿಳಂಬ ಮಾಡಿ ಸಾವಿರ ರೂ.ಗೆ ಹೆಚ್ಚಿಸುವುದಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಜತೆಗೆ ತುರ್ತಾಗಿ ಭೂಸ್ವಾಧೀನ ಮಾಡಿ ಹಸ್ತಾಂತರಿಸುವಂತೆ ಸೂಚಿಸಿದ್ದೇನೆ” ಎಂದರು.

“ಧರ್ಮಸ್ಥಳಕ್ಕೆ ರೈಲ್ವೆ ಮಾರ್ಗ ಕಲ್ಪಿಸುವ ಆಸಕ್ತಿ ನನಗೂ ಇದೆ. ಆದರೆ ಅರಣ್ಯ ಇಲಾಖೆಯದ್ದೇ ದೊಡ್ಡ ಸಮಸ್ಯೆಯಾಗಿದೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಂದ ಪತ್ರ ಪಡೆದು ಅನುಮತಿ ಪಡೆಯಲು ಪ್ರಯತ್ನಿಸುತ್ತೇನೆ.” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

“ರೈಲ್ವೆ ಟಿಕೆಟ್ ನೀಡಿಕೆಯಲ್ಲಿ ಈ ಹಿಂದೆ ಆಗುತ್ತಿದ್ದ ಅಕ್ರಮಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ. ಇದು ಎಚ್ಚರಿಕೆ ಗಂಟೆಯೂ ಆಗಿದೆ.” ಎಂದರು.

ವರ್ಷಾಂತ್ಯಕ್ಕೆ ಸಂಪೂರ್ಣ ವಿದ್ಯುತ್‌ ಮಾರ್ಗ:

“ರಾಜ್ಯದ ರೈಲ್ವೆ ಮಾರ್ಗದಲ್ಲಿ 2025ರ ಡಿಸೆಂಬ‌ರ್ ವೇಳೆಗೆ ಶೇ. 100ರಷ್ಟು ವಿದ್ಯುತ್ ಸಂಪರ್ಕವಾಗಲಿದೆ. ಹುಬ್ಬಳ್ಳಿ ಅಂಕೋಲ ರೈಲ್ವೆ ಮಾರ್ಗಕ್ಕೆ ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಸಿಕ್ಕಿದ್ದು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ದೊರೆಯಬೇಕಿದೆ. ಈ ಯೋಜನೆಗೆ ಸುಪ್ರೀಂ ಕೋರ್ಟ್ ಕೂಡ ಹಸಿರು ನಿಶಾನೆ ತೋರಿದೆ” ಎಂದು ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದರು.

ಹತ್ತು ವಂದೇ ಭಾರತ್‌ ರೈಲುಗಳು ಸಂಚರಿಸುವ ಮೂಲಕ ರಾಜ್ಯ ರೈಲ್ವೆಯಲ್ಲಿ ಹೊಸ ಕ್ರಾಂತಿಯೇ ಆಗಿದೆ. ಹಿಂದಿನ ಸರಕಾರ ರೈಲ್ವೆಗೆ 800 ಕೋಟಿ ರೂ. ನೀಡುತ್ತಿತ್ತು. ನರೇಂದ್ರ ಮೋದಿ ನೇತೃತ್ವದ ಸರಕಾರ 7,560 ಕೋಟಿ ರೂ. ರೈಲ್ವೆ ಬಜೆಟ್ ಹೊರತಾಗಿಯೂ ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸುಬ್ರಹ್ಮಣ್ಯ ಮಾರ್ಗದಲ್ಲಿ ವಂದೇ ಭಾರತ್ ಹಾಗೂ ಸ್ವೀಪರ್ ಕೋಚ್ ರೈಲು ಸೌಲಭ್ಯ ಕಲ್ಪಿಸಲು ಚಿಂತನೆ ನಡೆದಿದೆ. ಹಾಸನ, ಅರಸೀಕೆರೆ, ಸಕಲೇಶಪುರ ರೈಲ್ವೆ ನಿಲ್ದಾಣವನ್ನು ಆಧುನೀಕರಣಗೊಳಿಸಲಾಗುತ್ತಿದೆ. ಅದೇ ರೀತಿ ಆಲೂರು ನಿಲ್ದಾಣವನ್ನು ಆಧುನೀಕರಣಗೊಳಿಸಲಾಗುತ್ತಿದೆ. ಅದೇ ರೀತಿ ಆಲೂರು ನಿಲ್ದಾಣವನ್ನು ಅಭಿವೃದ್ದಡಿಸಲಾಗುವುದು.

ಆಲೂರಿನಲ್ಲಿ ರೈಲು ನಿಲುಗಡೆಗೆ ಸೂಚಿಸಲಾಗಿದ್ದು, ಆದಾಯ ಪರಿಗಣಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸೋಮಣ್ಣ ತಿಳಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts