ನಟ ಕಮಲ್ ಹಾಸನ್ ಕ್ಷಮೆ ಕೇಳಲ್ಲ ಎಂಬ ವಿಚಾರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಕಮಲ್ ಹಾಸನ್ ಒಂದು ಕಾಲದಲ್ಲಿ ನಾಯಕ ನಟರಾಗಿದ್ರು, ಒಂದು ಕಾಲದಲ್ಲಿ ಅವರನ್ನು ಎಲ್ಲರು ಇಷ್ಟ ಪಡುತ್ತಿದ್ರು. ಆದರೆ ಇವತ್ತು ಚಾಲ್ತಿಯಲ್ಲಿಲ್ಲದ ನಾಣ್ಯ ಅವರು ಅಂತ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ. ಇದು ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಬೆಂಕಿ ಹಚ್ಚೋ ಕೆಲಸ ಅಂತ ಶೋಭಾ ಕರಂದ್ಲಾಜೆ ಕಮಲ್ ಹಾಸನ್ ಕನ್ನಡ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಕಮಲ್ ಹಾಸನ್‌ಗೆ ಪೊಲಿಟಿಕಲ್ ಪಾರ್ಟಿಯಲ್ಲೂ ಸಕ್ಸಸ್ ಸಿಕ್ಕಿಲ್ಲ, ಸಿನಿಮಾದಲ್ಲೂ ಸಿಕ್ಕಿಲ್ಲ. ಪ್ರಚಾರಕ್ಕೆ, ನಮಗೆ ಅವಮಾನ ಮಾಡಲು ಮಾತಾಡಿದ್ದಾರೆ ಅಂತ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಕಮಲ್ ಹಾಸನ್ ಮಾತನ್ನು ನಾನು ಖಂಡಿಸುತ್ತೇನೆ ಅಂತ ಅವರು ಪ್ರತಿಕ್ರಿಯಿಸಿದ್ದಾರೆ.
ಯಾವುದೇ ರಾಜ್ಯದ ಭಾಷಿಕರು ಆಗಿರಬಹುದು, ನಾವೆಲ್ಲರೂ ಮೊದಲು ಭಾರತೀಯರು, ನಾವೆಲ್ಲರೂ ಒಂದಾಗಿ ಬಾಳಬೇಕಿದೆ ಅಂತ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಹೆಚ್ಚು ಬೆಂಕಿ ಹಚ್ಚುವ ಕೆಲಸ ಆಗೋದು ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ. ಒಂದು ಭಾಷೆಯ ವಿಷಯ ಮತ್ತೆ ಮತ್ತೊಂದು ಕಾವೇರಿ ವಿಷಯ. ಚಾಲ್ತಿಯಲ್ಲಿರದ ಕಮಲ್ ಹಾಸನ್ ಬಗ್ಗೆ ವ್ಯಾಲ್ಯೂ ಕೊಡುವ ಅವಶ್ಯಕತೆ ಇಲ್ಲ ಅಂತ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕರ್ನಾಟಕ ಫಿಲ್ಮ್ ಚೇಂಜರ್ ಮನವಿಗೂ ಕಮಲ್ ಡೋಂಟ್ ಕೇರ್:
ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎನ್ನುವ ಮೂಲಕ ವಿವಾದ ಹುಟ್ಟು ಹಾಕಿದ ಕಮಲ್ ಹಾಸನ್ ಇಷ್ಟೆಲ್ಲ ರಾದ್ಧಾಂತ ನಡೆದ ಮೇಲೆಯೂ ಕ್ಷಮೆ ಕೇಳುವ ಯೋಚನೆ ಮಾಡುತ್ತಿಲ್ಲ. ಅವರು ಇತ್ತೀಚೆಗೆ ಕ್ಷಮೆ ಕೇಳುವ ಬಗ್ಗೆ ಪ್ರತಿಕ್ರಿಯಿಸಿ ಉದ್ಧಟತನದಿಂದ ಮಾತನಾಡಿದ್ದಾರೆ. ಕನ್ನಡ ಭಾಷೆಯ ಕುರಿತಾದ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾನು ತಪ್ಪು ಮಾಡಿಲ್ಲ ಕ್ಷಮೆ ಕೇಳಲ್ಲ ಎಂದು ಹೇಳಿದ್ದಾರೆ. ಇದು ಪ್ರಜಾಪ್ರಭುತ್ವ ರಾಷ್ಟ್ರ, ನನಗೆ ಕಾನೂನಿನ ಮೇಲೆ ನಂಬಿಕೆ ಇದೆ ಎಂದಿದ್ದಾರೆ.
ಫಿಲಂ ಚೇಂಬರ್ ಮನವಿಗೂ ಸ್ಪಂದಿಸದ ಕಮಲ್ ಹಾಸನ್ ಮತ್ತೆ ಉದ್ಧಟತನದಿಂದಲೇ ಮಾತನಾಡಿದ್ದಾರೆ. ಪ್ರದರ್ಶನ ನಿರ್ಬಂಧ ಹೇರಲು ಸೂಚಿಸಿದ್ದ ಸರ್ಕಾರದ ಲೆಟರ್ ಗೂ ನಟ ಡೋಂಟ್ ಕೇರ್ ಎಂದಿದ್ದು ಕಾನೂನಿನ ಮೇಲೆ ನಂಬಿಕೆ ಇದೆ ಎಂದಿದ್ದಾರೆ.