ಕ್ರೀಡೆ

ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ

tv clinic
ವೆಸ್ಟ್ ಇಂಡೀಸ್ ತಂಡದ ದೈತ್ಯ ಬ್ಯಾಟರ್ ಎಂದೇ ಗುರುತಿಸಿಕೊಂಡಿದ್ದ ನಿಕೋಲಸ್ ಪೂರನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀ‌ರ್ ನಿವೃತ್ತಿ ಘೋಷಿಸಿದ್ದಾರೆ. 29ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಅಚ್ಚರಿ ಮೂಡಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಕಿಂಗ್‌ಸ್ಟನ್: ವೆಸ್ಟ್ ಇಂಡೀಸ್ ತಂಡದ ದೈತ್ಯ ಬ್ಯಾಟರ್ ಎಂದೇ ಗುರುತಿಸಿಕೊಂಡಿದ್ದ ನಿಕೋಲಸ್ ಪೂರನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀ‌ರ್ ನಿವೃತ್ತಿ ಘೋಷಿಸಿದ್ದಾರೆ. 29ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಅಚ್ಚರಿ ಮೂಡಿಸಿದೆ.

core technologies

ಇತ್ತೀಚೆಗಷ್ಟೇ ವಿಂಡೀಸ್‌ನ ಕ್ರಿಕೆಟ್ ರಾಜಕೀಯದ ಬಗ್ಗೆ ಕೋಲ್ಕತಾ ನೈಟ್ ರೈಡರ್ಸ್ ಆಟಗಾರ ಆಂಡ್ರೆ ರಸ್ಸೆಲ್ ಪರೋಕ್ಷವಾಗಿ ಬೇಸರ ಹೊರಹಾಕಿದ್ದರು. ಈ ಬೆನ್ನಲ್ಲೇ ನಿಕೋಲಸ್ ಪೂರನ್ ನಿವೃತ್ತಿ ಘೋಷಣೆ ಮಾಡಿದ್ದಾರೆ.

akshaya college

ನಿಕೋಲಸ್ ತಮ್ಮ ನಿರ್ಧಾರದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು, ಇದು ಬಹಳ ಕಷ್ಟದ ನಿರ್ಧಾರ. ಆದರೆ ತುಂಬಾ ಆಲೋಚನೆ ಮತ್ತು ಚಿಂತನೆಯ ನಂತರ, ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ನಾವು ಬಹಳ ಪ್ರೀತಿಸುವ ಈ ಆಟವು ನನಗೆ ತುಂಬಾ ಸಂತೋಷ, ಮರೆಯಲಾಗದ ನೆನಪುಗಳನ್ನು ನೀಡಿದೆ. ಆ ಮೆರೂನ್ ಜೆರ್ಸಿಯನ್ನು ಧರಿಸಿ, ರಾಷ್ಟ್ರಗೀತೆಗೆ ನಿಂತು, ನಾನು ಮೈದಾನಕ್ಕೆ ಕಾಲಿಟ್ಟ ಪ್ರತಿ ಬಾರಿಯೂ ನನ್ನೆಲ್ಲವನ್ನೂ ನೀಡಿದ್ದೇನೆ. ನನ್ನ ಪಾಲಿಗೆ ಈ ಕ್ಷಣಗಳೇನು ಎಂದು ಪದಗಳಲ್ಲಿ ವಿವರಿಸುವುದು ಕಷ್ಟ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ನಿಕೋಲಸ್ ಪೂರನ್ ವೆಸ್ಟ್ ಇಂಡೀಸ್ ಪರ 61 ಏಕದಿನ ಪಂದ್ಯಗಳನ್ನಾಡಿದ್ದು, ಈ ವೇಳೆ 39.66 ಸರಾಸರಿಯಲ್ಲಿ 1983 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕಗಳು ಮತ್ತು 11 ಅರ್ಧಶತಕಗಳು ಸೇರಿವೆ. ಹಾಗೆಯೇ ವಿಂಡೀಸ್ ಪರ 106 ಟಿ20 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಪೂರನ್ ಒಟ್ಟು 2275 ರನ್ ಗಳಿಸಿದ್ದಾರೆ. ಈ ವೇಳೆ 13 ಅರ್ಧಶತಕಗಳನ್ನು ಬಾರಿಸಿದ್ದಾರೆ. ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಸ್ಫೋಟಕ ದಾಂಡಿಗನಾಗಿ ಗುರುತಿಸಿಕೊಂಡಿದ್ದ ಪೂರನ್‌ಗೆ ವೆಸ್ಟ್ ಇಂಡೀಸ್ ಪರ ಟೆಸ್ಟ್ ಪಂದ್ಯವಾಡುವ ಅವಕಾಶ ದೊರೆತಿರಲಿಲ್ಲ. ಈ ಅವಕಾಶಕ್ಕೂ ಮುನ್ನವೇ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದಾಗ್ಯೂ ಅವರು ಲೀಗ್ ಕ್ರಿಕೆಟ್‌ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತ | ಬೌಲಿಂಗ್ ನಲ್ಲಿ ಸೌತ್ ಆಫ್ರಿಕಾವನ್ನು ಕಟ್ಟಿಹಾಕಿದ ಭಾರತದ ವನಿತೆಯರು

ಬಹುನಿರೀಕ್ಷಿತ ಐಸಿಸಿ ವುಮೆನ್ಸ್ ಇಂಟರ್ ನ್ಯಾಷನಲ್ ವರ್ಲ್ಡ್ ಕಪ್ ನಲ್ಲಿ ಭಾರತದ ವನಿತೆಯರು…

ಸವಾಲು, ಸಮಸ್ಯೆ ಬದುಕಿನ ಸಾಧನೆಗೆ ಸ್ಫೂರ್ತಿ | ರಾಮಕುಂಜದಲ್ಲಿ ಮೈಸೂರು ವಿಭಾಗ ಮಟ್ಟದ ಕಬಡ್ಡಿ ಉದ್ಘಾಟಿಸಿ ಭಾಗೀರಥಿ ಮುರುಳ್ಯ

ಕ್ರೀಡೆಯಲ್ಲಿ ಭಾಗವಹಿಸುವುದು ಬಹುಮಾನ ಗಿಟ್ಟಿಸಿಕೊಳ್ಳುವ ಲೆಕ್ಕಚಾರಕ್ಕೆ ಸೀಮಿತವಾಗದೆ ಪ್ರತಿಭೆ…