ಮುಂಬೈ: ರಾಯಗಢದ ರೆವ್‌ದಂಡಾ ಬೀಚ್‌ನಲ್ಲಿ ಫೆರಾರಿ ಕಾರು ಚಾಲನೆ ಮಾಡುತ್ತಿದ್ದ ದಂಪತಿ ಮರಳಿನಲ್ಲಿ ಸಿಕ್ಕಿಹಾಕಿಕೊಂಡಿದ್ದು, ಕಾರನ್ನು ಎತ್ತಿನ ಬಂಡಿಯಿಂದ ಎಳೆದು ರಕ್ಷಣೆ ಮಾಡಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಾತ್ಯಂತ ವೈರಲ್ ಆಗಿದೆ.
ಬೀಚ್‌ನಲ್ಲಿ ಎಂಜಾಯ್ ಮಾಡಲು ತೆರಳುವ ಬಹುತೇಕರು ಕಡಲ ಕಿನಾರೆಗೆ ವಾಹನ ತೆಗೆದುಕೊಂಡು ಹೋಗುತ್ತಾರೆ. ಹಲವು ಕಡೆ ನಿರ್ಬಂಧ ವಿಧಿಸಲಾಗಿದೆ. ಆದರೂ ಪ್ರವಾಸಿಗರು ಕಡಲ ಕಿನಾರೆ ವರೆಗೆ ಕಾರಿನಲ್ಲಿ ತೆರಳಿ ಬಳಿಕ ಮಸ್ತಿ ಮಾಡುವ ದೃಶ್ಯಗಳು ಹೊಸದೇನಲ್ಲ. ಹೀಗೆ ಮಸ್ತಿ ಮಾಡಲು ಬೀಚ್‌ಗೆ ಬಂದ ಗುಂಪೊಂದು ನೇರವಾಗಿ ಕಾರನ್ನು ಕಡಲ ಕಿನಾರೆಗೆ ತಂದಿದೆ. ಆದರೆ ಮರಳಿನಿಂದ ಕೂಡಿದ ತೀರ ಪ್ರದೇಶದಲ್ಲಿ ಕಾರು ಮುಂದಕ್ಕೆ ಚಲಿಸದೆ ನಿಂತು ಬಿಟ್ಟಿದೆ. ಮರಳಿನಲ್ಲಿ ಚಕ್ರಗಳು ಹೂತು ಹೋಗಿದೆ. ಆದರೆ ಈ ಕಾರನ್ನು ಪಕ್ಕದಲ್ಲಿ ಸಾಗುತ್ತಿದ್ದ ಎತ್ತಿನ ಗಾಡಿ ಸಲಿಸಾಗಿ ಎಳೆದ ದೃಶ್ಯ ವೈರಲ್ ಆಗಿದೆ.
ಮುಂಬೈನ ಅಲಿಬಾಗ್ ಬೀಚ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಮರಳಿನಲ್ಲಿ ಫೆರಾರಿ ಕ್ಯಾಲಿಫೋರ್ನಿಯಾ ಟಿ ಕಾರಿನ ಚಕ್ರಗಳು ಬಹುಚೇಕ ಹೂತು ಹೋಗಿದೆ. ಇದರಿಂದ ಫೆರಾರಿ ಕಾರು ಮುಂದಕ್ಕೆ ಚಲಿಸಲು ಸಾಧ್ಯವಾಗಿಲ್ಲ. ಯವಕರ ಗುಂಪು ಅದೆಷ್ಟೆ ಪ್ರಯತ್ನಿಸಿದರೂ ಫೆರಾರಿ ಕಾರನ್ನು ಮರಳಿನಿಂದ ಹೊರತೆಗೆಯಲು ಸಾಧ್ಯವಾಗಲಿಲ್ಲ.ಕಾರು ಸ್ಟಾರ್ಟ್ ಮಾಡಿ ಇನ್ನುಳಿದ ಯುವಕರು ತಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಇವರ ಯಾವ ಪ್ರಯತ್ನಗಳು ಕೈಗೂಡಲಿಲ್ಲ.
ಡಿಸೆಂಬರ್ 28 ರಂದು ನಡೆದ ಈ ಘಟನೆಯ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಒಬ್ಬ ಬಳಕೆದಾರನು “ಅಶ್ವಶಕ್ತಿ ವಿಫಲವಾದಾಗ, ಬುಲ್ ಪವರ್ ಮೇಲುಗೈ ಸಾಧಿಸುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬ ಬಳಕೆದಾರರು, “ಲ್ಯಾಂಬೊರ್ಗಿನಿಯು ಫೆರಾರಿಯನ್ನು ರಕ್ಷಣೆ ಮಾಡುತ್ತಿದೆ,” ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.