ಕಚೇರಿಯಲ್ಲಿ ತೂಕಡಿಸುತ್ತಿದ್ದ ಉದ್ಯೋಗಿ ಕೆಲಸದ ನಡುವೆ ಡೆಸ್ಕ್ ಮೇಲೆ ಮಲಗಿದ್ದಾನೆ. ಕಂಪನಿ ಉದ್ಯೋಗಿಯ ವಜಾಗೊಳಿಸಿತ್ತು. ಕಂಪನಿ ವಿರುದ್ದ ಕಾನೂನು ಹೋರಾಟ ಮಾಡಿದ ಈತನಿಗೆ ಕಂಪನಿ ಬರೋಬ್ಬರಿ 4 ಕೋಟಿ ರೂ ಪರಿಹಾರ ನೀಡಿದೆ. ಘಟನೆ ಚೀನಾದ ಝಂಗ್ರೂ ಪ್ರಾಂತ್ಯದಲ್ಲಿ ನಡೆದಿದೆ.
ಝಾಂಗ್ ಅನ್ನೋ ಉದ್ಯೋಗಿ ಕಳೆದ 20 ವರ್ಷದಿಂದ ಕೆಮಿಕಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. 2004ರಲ್ಲಿ ಕೆಮಿಕಲ್ ಕಂಪನಿಗೆ ಸೇರಿಕೊಂಡಿದ್ದ. ಕೆಲಸ ಒತ್ತಡ, ಹೆಚ್ಚುವರಿ ಕೆಲಸ ಸೇರದಂತೆ ಹಲವು ಸವಾಲುಗಲನ್ನು ಝಾಂಗ್ ಪ್ರತಿ ದಿನ ನಿಭಾಯಿಸುತ್ತಿದ್ದ. ತಡರಾತ್ರಿವರೆಗೂ ಕೆಲಸ ಮಾಡಿ ತೆರಳಿದ್ದ ಝಾಂಗ್ ಮರುದಿನ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದ.
ಸರಿಯಾಗಿ ನಿದ್ದೆ ಇಲ್ಲದ ಕಾರಣ ಝಾಂಗ್ ಸುಮಾರು 1 ಗಂಟೆಗಳ ಕಾಲ ನಿದ್ರಿಸಿದ್ದಾನೆ. ಬಳಿಕ ಎದ್ದು ಕೆಲಸ ಮುಂದುವರಿಸಿದ್ದಾನೆ. ಮರುದಿನ ಬೆಳಗ್ಗೆ ಝಾಂಗ್ ಕೆಲಸಕ್ಕೆ ಬಂದಾಗ ಕಂಪನಿ ಮ್ಯಾನೇಜೆಂಟ್ ಗರಂ ಆಗಿತ್ತು.
1ಗಂಟೆಗೂ ಹೆಚ್ಚು ಕಾಲ ನಿದ್ದೆಗೆ ಜಾರಿರುವುದು ಕಂಪನಿ ಆಕ್ರೋಶಕ್ಕೆ ಕಾರಣಾಗಿದೆ. ತಕ್ಷಣವೆ ಝಾಂಗ್‌ಗೆ ಇಮೇಲ್ ಮೂಲಕ ಕಾರಣ ನೀಡಿ ಕೆಲಸದಿಂದ ವಜಾ ಮಾಡಿದೆ. 2004ರಲ್ಲಿ ಕೆಲಸಕ್ಕೆ ಹಾಜರಾಗುವಾಗ ಕಂಪನಿಯ ಒಪ್ಪಂದ, ಷರತ್ತುಗಳಿಗೆ ಸಹಿ ಹಾಕಿದ್ದೀರಿ. ಆದರೆ ಕಚೇರಿ ಸಮಯದಲ್ಲಿ, ಕರ್ತವ್ಯದ ನಡುವೆ ಗಂಟೆಗಳ ಕಾಲ ಮಲಗಿದ್ದೀರಿ.ಈ ಮೂಲಕ ಕಂಪನಿಯ ಶೂನ್ಯ ಸಹಿಷ್ಣುತೆಗೆ ನಿಯಮವನ್ನು ಉಲ್ಲಘಿಸಿದ್ದೀರಿ. ಕಂಪನಿಯ ಸಮಯ ವ್ಯರ್ಥ ಮಾಡಿದ್ದೀರಿ. ಇದರಿಂದ ಉತ್ಪಾದಕತೆ ಕಡಿಮೆಯಾಗಿದೆ. ಇಂತಹ ನಡವಳಿಕೆಯನ್ನು ಕಂಪನಿ ಸಹಿಸಿಕೊಳ್ಳುವುದಿಲ್ಲ. ಹೀಗಾಗಿ ಅಮಾನತು ಮಾಡಿರುವುದಾಗಿ ಇಮೇಲ್ ಮಾಡಲಾಗಿತ್ತು.
ನಿದ್ದೆ ಮಾಡಿದ ಕಾರಣಕ್ಕೆ ಏಕಾಏಕಿ ಕೆಲಸದಿಂದ ತೆಗೆದುಹಾಕಿದ ಕಂಪನಿ ವಿರುದ್ದ ಝಾಂಗ್ ಕಾನೂನು ಹೋರಾಟಕ್ಕೆ ಮುಂದಾಗಿದ್ದಾನೆ. ವೇತನ ಎಷ್ಟು ಬಾರಿ ಹೆಚ್ಚಿಸಿದ್ದೀರಿ ಎಂದು ಪ್ರಶ್ನಿಸಿದೆ. ಮಲಗಿದ ಕಾರಣಕ್ಕೆ ಕೆಲಸದಿಂದ ತೆಗೆದು ಹಾಕಕಲು ಕಾರಣವೇ ಅಲ್ಲ. ಹೀಗಾಗಿ ಮರು ಮಾತನಾಡದೇ ಉದ್ಯೋಗಿಗೆ 4 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.