pashupathi
ವಿಶೇಷ

ಐಫೆಲ್ ಟವರ್ ಮೀರಿಸುವ ಭಾರತದ ಅತೀ ಎತ್ತರದ ರೈಲ್ವೇ ಬ್ರಿಡ್ಜ್! ಜಗತ್ತಿನ ಅತಿ ಎತ್ತರದ ಸೇತುವೆ ನಾಳೆ ಲೋಕಾರ್ಪಣೆ!

tv clinic
ಪ್ಯಾರಿಸ್‌ನ ಐಫೆಲ್ ಟವರ್‌ಗಿಂತ 35 ಮೀ. ಎತ್ತರದ  ಅತಿದೊಡ್ಡ ರೈಲ್ವೆ ಸೇತುವೆ ಎಂದು ಪರಿಗಣಿಸಲ್ಪಟ್ಟ ಚೆನಾಬ್ (Chenab Rail Bridge) 272 2.ಕಿ.ಮೀ ಉದ್ದದ ಯೋಜನೆಯ ಉಧಂಪುರ-ಶ್ರೀನಗರ-ಬರಾಮುಲ್ಲಾ ರೈಲ್ವೆ ಲಿಂಕ್‌ನ ಒಂದು ಭಾಗವಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪ್ಯಾರಿಸ್‌ನ ಐಫೆಲ್ ಟವರ್‌ಗಿಂತ 35 ಮೀ. ಎತ್ತರದ  ಅತಿದೊಡ್ಡ ರೈಲ್ವೆ ಸೇತುವೆ ಎಂದು ಪರಿಗಣಿಸಲ್ಪಟ್ಟ ಚೆನಾಬ್ (Chenab Rail Bridge) 272 2.ಕಿ.ಮೀ ಉದ್ದದ ಯೋಜನೆಯ ಉಧಂಪುರ- ಶ್ರೀನಗರ- ಬರಾಮುಲ್ಲಾ ರೈಲ್ವೆ ಲಿಂಕ್‌ನ ಒಂದು ಭಾಗವಾಗಿದೆ.

akshaya college

ರೈಲ್ವೆ ಸೇತುವೆಯು ಚೆನಾಬ್ ನದಿಯಿಂದ 359 ಮೀ (1,178 ಅಡಿ) ಎತ್ತರದಲ್ಲಿ ಚೆನಾಬ್ ನದಿಯನ್ನು ವ್ಯಾಪಿಸಿದೆ. ಇದು ಪ್ಯಾರಿಸ್‌ನ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಾಗಿದೆ. ವಾಸ್ತುಶಿಲ್ಪದ ಅದ್ಭುತ ಚೆನಾಬ್ ರೈಲು ಸೇತುವೆಯು ಭೂಕಂಪ ಮತ್ತು ಗಾಳಿಯ ಪರಿಸ್ಥಿತಿಗಳನ್ನು ತಡೆದುಕೊಳ್ಳಲು ವಿನ್ಯಾಸಗೊಳಿಸಲಾದ 1,315 ಮೀಟರ್ ಉದ್ದದ ಉಕ್ಕಿನ ಕಮಾನು ಸೇತುವೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಜಮ್ಮುಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದು, ವಿಶ್ವದ ಅತ್ಯಂತ ಎತ್ತರದ ರೈಲ್ವೇ ಕಮಾನು ಸೇತುವೆಯಾದ ಚೆನಾಬ್ ಸೇತುವೆ ಸೇರಿದಂತೆ 46,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ.

ದೇಶದ ಮೊದಲ ಕೇಬಲ್ ಆಧಾರಿತ ರೈಲ್ವೇ ಸೇತುವೆಯಾದ ಅಂಜಿ ಸೇತುವೆ ಹಾಗೂ ಉಧಂಪುರ-ಶ್ರೀನಗರ- ಬಾರಾಮುಲ್ಲಾ ರೈಲು ಲಿಂಕ್ ಯೋಜನೆಯನ್ನೂ ಅವರು ಉದ್ಘಾಟಿಸಲಿದ್ದಾರೆ. ಜತೆಗೆ ವೈಷ್ಟೋದೇವಿ ಕಟ್ರಾ-ಶ್ರೀನಗರ ನಡುವೆ ಸಾಗುವ ವಂದೇ ಭಾರತ್ ರೈಲಿಗೆ ಹಸುರು ನಿಶಾನೆಯನ್ನು ತೋರಲಿದ್ದಾರೆ.

ಜಮ್ಮು ಮತ್ತು ಶ್ರೀನಗರ ನಡುವಿನ ಸಂಪರ್ಕವನ್ನು ಹೆಚ್ಚಿಸುವಲ್ಲಿ ಈ ಸೇತುವೆ ಮುಖ್ಯ ಪಾತ್ರ ವಹಿಸುತ್ತದೆ. ಸೇತುವೆಯ ಮೇಲೆ ಚಲಿಸುವ ವಂದೇ ಭಾರತ್ ರೈಲಿನ ಮೂಲಕ, ಕತ್ರಾ ಮತ್ತು ಶ್ರೀನಗರ ನಡುವೆ ಪ್ರಯಾಣಿಸಲು ಪ್ರಸ್ತುತ ರಸ್ತೆಯ ಮೂಲಕ 6-7 ಗಂಟೆಗಳಿಗೆ ಹೋಲಿಸಿದರೆ ಕೇವಲ 3 ಗಂಟೆಗಳು ಬೇಕಾಗುತ್ತದೆ. ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಬಕ್ಕಲ್ ಮತ್ತು ಕೌರಿ ನಡುವಿನ ಕಮಾನು ಸೇತುವೆಯು ನದಿಪಾತ್ರದಿಂದ 1,178 ಎತ್ತರದಲ್ಲಿದೆ, ಇದು ಕತ್ರಾದಿಂದ ಬನಿಹಾಲ್‌ಗೆ ನಿರ್ಣಾಯಕ ಸಂಪರ್ಕವನ್ನು ರೂಪಿಸುತ್ತದೆ. ಇದು 35,000 ಕೋಟಿ ರೂ. ಮೌಲ್ಯದ ಕನಸಿನ ಯೋಜನೆಯಾದ ಉಧಂಪುರ-ಶ್ರೀನಗರ-ಬರಾಮುಲ್ಲಾ ರೈಲ್ವೆ ಲಿಂಕ್ (USBRL)ನ ಭಾಗವಾಗಿದೆ.

ಚೆನಾಬ್ ಸೇತುವೆಯು ಗಂಟೆಗೆ 260 ಕಿ.ಮೀ. ವೇಗದ ಗಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು 120 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತದೆ. ಅತಿ ಎತ್ತರದ ರೈಲ್ವೆ ಸೇತುವೆಯ ನಿರ್ಮಾಣವು ಇತ್ತೀಚಿನ ಇತಿಹಾಸದಲ್ಲಿ ಭಾರತದಲ್ಲಿ ಯಾವುದೇ ರೈಲ್ವೆ ಯೋಜನೆ ಎದುರಿಸಿದ ಅತಿದೊಡ್ಡ ನಾಗರಿಕ ಎಂಜಿನಿಯರಿಂಗ್‌ ಸವಾಲಾಗಿತ್ತು.

ನದಿಯಿಂದ ಮೇಲಕ್ಕೆ ಸೇತುವೆಯ ಎತ್ತರ: 1,179 ಅಡಿ

ಸೇತುವೆಯ ಒಟ್ಟು ಉದ್ದ: 1,315 ಮೀ.

ಬಳಕೆಯಾದ ಉಕ್ಕಿನ ಪ್ರಮಾಣ: 28,000+ ಟನ್

ಕಾಂಕ್ರೀಟ್: 66,000 ಕ್ಯು.ಮೀ.

ನಿರ್ಮಾಣಕ್ಕಾದ ವೆಚ್ಚ: 1,486 ಕೋಟಿ ರೂ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts