Friday, November 22
Share News

ಪುತ್ತೂರು: ನಗರದ ಪಡೀಲು ಪರಿಸರದಲ್ಲಿ ಸುತ್ತಾಡುತ್ತಾ ಸಾರ್ವಜನಿಕರನ್ನು ಭಯಭೀತಿಗೊಳಿಸುತ್ತಿದ್ದ ಸುಮಾರು 35 ವರ್ಷ ವಯೋಮಾನದ ಯುವಕನೋರ್ವನನ್ನು ಪುತ್ತೂರು ನಗರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ವಿನೋದ್ ಡಿ ಟಿ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಇದರ ಮಾಜಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ರಕ್ಷಣೆ ಮಾಡಿ ಮಾನಸಿಕ ಚಿಕಿತ್ಸೆಗಾಗಿ ಮಂಗಳೂರಿನ ಜಿಲ್ಲಾಸ್ಪತ್ರೆಗೆ ರವಾನಿಸಿಲಾಗಿದೆ.

ಆಗಸ್ಟ್ 18 ಆದಿತ್ಯವಾರದಂದು ಬೆಳಗ್ಗೆ ಸುಮಾರು 10 ಗಂಟೆಯ ಸಮಯದಲ್ಲಿ ಪುತ್ತೂರಿನ ಪಡೀಲು ಎಂಬಲ್ಲಿ ನೀಲಿ ಬಣ್ಣದ ಸೆಕ್ಯೂರಿಟಿ ಗಾರ್ಡ್ ಅಂಗಿಯನ್ನು ಧರಿಸಿ ಸುತ್ತಮುತ್ತಲ ಮನೆಗಳಿರುವ ಪರಿಸರದಲ್ಲಿ ವಿಚಿತ್ರ ವರ್ತನೆಗಳನ್ನು ಮಾಡುತ್ತಾ ವಿಚಿತ್ರ ಹಾವಭಾವಗಳಿಂದ ಸ್ಥಳೀಯ ಮಹಿಳೆಯರು ಹಾಗೂ ಮಕ್ಕಳಿಗೆ ಭಯವನ್ನುಂಟು ಮಾಡುತ್ತಾ ಓಡಾಟ ಮಾಡುತ್ತಿರುವ ವ್ಯಕ್ತಿಯನ್ನು ಗಮನಿಸಿದ ಸ್ಥಳೀಯ ಸುರೇಶ್ ಪಡೀಲ್ ಎಂಬವರು ದೂರು ನೀಡಿದ್ದರು. ಸ್ಥಳಕ್ಕೆ ಆಗಮಿಸಿ ಮಾನಸಿಕ ಅಸ್ವಸ್ಥ ಯುವಕನನ್ನು ಹತೋಟಿಗೆ ತಂದ ಪುತ್ತೂರು ನಗರ ಸಿಬ್ಬಂದಿಗಳಾದ ವಿನೋದ್ ಅವರು ರೋಟರಿ ಕ್ಲಬ್ ಪುತ್ತೂರು ಯುವ ಇದರ ಮಾಜಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರ ಸಹಕಾರದಿಂದ ಮಾನಸಿಕ ಚಿಕಿತ್ಸೆಗಾಗಿ ಮಂಗಳೂರಿನ ಜಿಲ್ಲಾ ಆಸ್ಪತ್ರೆಗೆ ರವಾನಿಸಿದರು.

ಅಸ್ವಸ್ಥ ಯುವಕ ಹಿಂದಿ ಹಾಗೂ ತಮಿಳು ಭಾಷೆ ಬಲ್ಲವನಾದ ಈತ ತನ್ನ ಹೆಸರು ಚಿನ್ನು ನಾಯ್ಕ್ ಎಂದು ಹೇಳುತ್ತಿದ್ದ. ಸುಮಾರು 35 ವರ್ಷ ವಯೋಮಾನದವನಾಗಿದ್ದಾನೆ.

ಹೆಚ್ಚುವರಿ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸುವಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ಅಧಿಕಾರಿಗಳಾದ ಡಾ. ಪ್ರಶಾಂತ್ ಭಟ್ ಹಾಗೂ 108 ವಾಹನ ಸಿಬ್ಬಂದಿಗಳು ಸಹಕರಿಸಿದರು. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ವಾಹನ ಚಾಲಕರಾದ ಸಂತೋಷ ಗಂಧರಗಿ ಹಾಗೂ ಸುಧಾಕರ್ ಬನ್ನೂರು ಸಹಕರಿಸಿದರು.


Share News

Comments are closed.

Exit mobile version