tamanvi
ಧಾರ್ಮಿಕ

ಬನ್ನೂರು: ನಾಳೆ ಸಾಮೂಹಿಕ ಶನೀಶ್ವರ ಪೂಜೆ, ವಾರ್ಷಿಕೋತ್ಸವ ಸಮಾರಂಭ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬನ್ನೂರು ಶಾಲಾ ಬಳಿಯ ಸ್ಫೂರ್ತಿ ಮೈದಾನದಲ್ಲಿರುವ ಶ್ರೀ ಶನೀಶ್ವರ ದೇವರ ಸನ್ನಿಧಿಯಲ್ಲಿ 21ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಫೆ. 14ರಂದು ಶನಿವಾರ ನಡೆಯಲಿದೆ.

Shani-pooja

ಕೆಮ್ಮಿಂಜೆ ವೇ।ಮೂ। ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ಈ ಪೂಜೆ ನಡೆಯಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಬೆಳಗ್ಗೆ 9 ಗಂಟೆಗೆ ಗಣಪತಿ ಹೋಮ, 10 ಗಂಟೆಗೆ ಶ್ರೀ ಶನೀಶ್ವರ ಪೂಜೆ ಹಾಗೂ 12.30ಕ್ಕೆ ಶ್ರೀ ದೇವರಿಗೆ ಮಹಾಮಂಗಳಾರತಿ ನಡೆಯಲಿದೆ. ಪ್ರಸಾದ ವಿತರಣೆಯ ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಲಿದೆ.

ಮಧ್ಯಾಹ್ನ 1 ಗಂಟೆಯ ನಂತರ ಶ್ರೀ ಶನೀಶ್ವರ ಕುಣಿತ ಭಜನಾ ಮಂಡಳಿ ಇವರಿಂದ ಕುಣಿತ ಭಜನೆ ನಡೆಯಲಿದೆ. ರಾತ್ರಿ 11 ಗಂಟೆಯಿಂದ ಶ್ರೀ ಶನೇಶ್ವರ ಯಕ್ಷ ಬಳಗ ಸ್ಫೂರ್ತಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಜಾಂಬವತಿ ಕಲ್ಯಾಣ ಬಬ್ರುವಾಹನ ಕಾಳಗ’ ಎಂಬ ಯಕ್ಷಗಾನ ಕೂಡ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಾರ್ಷಿಕೋತ್ಸವ ಸಮಾರಂಭ

ಬನ್ನೂರಿನ ಜಿಲ್ಲಾ ಪ್ರಶಸ್ತಿ ವಿಜೇತ ಸಂಸ್ಥೆಯಾದ ಸ್ಫೂರ್ತಿ ಮಹಿಳಾ ಮಂಡಲ, ಸ್ಫೂರ್ತಿ ಬಾಲಸಭಾ ಇದರ 36ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಫೆ. 14ರಂದು ಸಂಜೆ 7 ಗಂಟೆಗೆ ನಡೆಯಲಿದೆ. ಸ್ಫೂರ್ತಿ ಯುವಕ ಮಂಡಲದ ಅಧ್ಯಕ್ಷ ದೀಪಕ್ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಯು. ಆರ್ ಪ್ರಾಪರ್ಟಿಸ್ ಉದ್ಯಮಿ ಶ್ರೀ ಉಜ್ವಲ್ ಪ್ರಭು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಶಾಸಕ ಸನ್ಮಾನ್ಯ ಅಶೋಕ್ ಕುಮಾರ್ ರೈ, ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಭಾರತ ಸರ್ಕಾರದ ಕ್ರೀಡಾ ಸಚಿವಾಲಯದ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ. ಟಿ. ಕೆ, ಬನ್ನೂರು ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಜಯಕುಮಾರ್ ಜೈನ್ ಪುತ್ತೂರು, ಪುತ್ತೂರು ಕಂಪಾನಿಯೋ ವೆಲ್‌ನೆಸ್ ಸೆಂಟರ್‌ನ ಪ್ರಭಾಕರ ಸಾಲಿಯಾನ್ ಬಾಕಿಲಗುತ್ತು, ಚಿಕ್ಕ ಮುಡ್ನೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಸುಂದರ ಪೂಜಾರಿ ಬಡಾವು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪ್ರಶಸ್ತಿ ಪ್ರಧಾನ, ಸನ್ಕಾನ, ಅಭಿನಂದನೆ, ಗೌರವಾರ್ಪಣೆ

ಸತೀಶ ಮಡಿವಾಳ ಪುತ್ತೂರು, ಇವರಿಗೆ ಸ್ಪೂರ್ತಿಶ್ರೀ ಪ್ರಶಸ್ತಿ ಪ್ರಧಾನ ನಡೆಯಲಿದೆ. ಈ ಸಂಧರ್ಭದಲ್ಲಿ ನಿವೃತ್ತ ವಾಣಿಜ್ಯ ತೆರಿಗೆ ಇಲಾಖೆಯ ಗೋಪಾಲ, ವಿಶ್ರಾಂತ ಮುಖ್ಯ ಶಿಕ್ಷಕಿ ಜೂಲಿಯಾನ್ ವಾಸ್, ಉರಗ ತಜ್ಞ ತೇಜಸ್ ಕರ್ಮಲ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಹಿರಿಯ ಸಾಹಿತಿ ನಾರಾಯಣ ರಾಯ್ ಕುಕ್ಕುವಳ್ಳಿ ಇವರಿಗೆ ಗೌರವಾರ್ಪಣೆ ನಡೆಯಲಿದೆ.

ಬನ್ನೂರು ಶಾಲಾ ವಿದ್ಯಾರ್ಥಿಗಳಾದ ಪದ್ಮಿತಾ ಕೆ, ಯಜ್ನೇಶ್ ಬಿ ಇವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು, ಎಸ್‌ಎಸ್‌ಎಲ್‌ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನ ಕಾರ್ಯಕ್ರಮವೂ ನಡೆಯಲಿದೆ. ಸಂಜೆ 5.30ರಿಂದ ಅಂಗನವಾಡಿ ಪುಟಾಣಿಗಳಿಂದ ಶಾಲಾ ಮಕ್ಕಳಿಂದ ಸಂಘ ಸಂಸ್ಥೆಗಳ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಧರ್ಮಸ್ಥಳ: ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವದ 44ನೆ ವರ್ಧಂತ್ಯುತ್ಸವ | ನಾಳೆ ಬಾಹುಬಲಿಸ್ವಾಮಿ ಮೂರ್ತಿಗೆ ಪಾದಾಭಿಷೇಕ

ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿಮೂರ್ತಿಯ ಪ್ರತಿಷ್ಠಾಪಕರು ಹಾಗೂ ಧರ್ಮಾಧಿಕಾರಿ…