ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ನರಿಮೊಗರು ಗ್ರಾಮದ ಶಾಖೆ ನ. 16ರಂದು ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಉದ್ಘಾಟನೆಗೊಂಡಿತು.
ಎಸ್.ಪಿ.ವೈ.ಎಸ್.ಎಸ್.ನ ಜಿಲ್ಲಾ ಸಮಿತಿಯ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮವನ್ನು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ ಉದ್ಘಾಟಿಸಿದರು.
ಸಮಿತಿಯ ಶ್ರೀ ಮಹಾಲಿಂಗೇಶ್ವರ ಶಾಖಾ ಶಿಕ್ಷಕ ಭಾಸ್ಕರ್ ಪ್ರೇರಣಾದಾಯಕ ಮಾತನಾಡಿದರು.
ಜಯಶೀಲ ಮತ್ತು ತಂಡದಿಂದ ಭಜನೆ ನಡೆಯಿತು. ರಾಜೇಶ್, ತಿಮ್ಮಯ್ಯ, ಅರುಣ, ಶಶಿಕಲಾ ಅನುಭವ ಹಂಚಿಕೊಂಡರು.
ಆರಾಧ್ಯ ಪ್ರಾರ್ಥಿಸಿ, ಸಮಿತಿಯ ತಾಲೂಕು ಸಂಚಾಲಕ ಕೃಷ್ಣಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಲ್ಪ ಸ್ವಾಗತಿಸಿ, ಹರಿಣಾಕ್ಷಿ ವಂದಿಸಿದರು. ಶೃತಿ ಕಾರ್ಯಕ್ರಮ ನಿರೂಪಿಸಿದರು.



























