ಧಾರ್ಮಿಕ

ಅಯೋಧ್ಯೆಗೆ ದುಬಾರಿ ಆಭರಣಗಳ ಕೊಡುಗೆ! ಅಮೂಲ್ಯ ಆಭರಣಗಳ ದಾನ: ವಿ.ಎಚ್.ಪಿ. ಹೇಳಿಕೆ

tv clinic
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಗುಜರಾತ್ ಮೂಲದ ವಜ್ರ ವ್ಯಾಪಾರಿ 11 ಕಿರೀಟಗಳು ಮತ್ತು ಚಿನ್ನದ ಬಿಲ್ಲು ಮತ್ತು ಬಾಣ ಸೇರಿದಂತೆ ದುಬಾರಿ ಆಭರಣಗಳ ಸಂಗ್ರಹವನ್ನು ದಾನ ಮಾಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಗುಜರಾತ್ ಮೂಲದ ವಜ್ರ ವ್ಯಾಪಾರಿ 11 ಕಿರೀಟಗಳು ಮತ್ತು ಚಿನ್ನದ ಬಿಲ್ಲು ಮತ್ತು ಬಾಣ ಸೇರಿದಂತೆ ದುಬಾರಿ ಆಭರಣಗಳ ಸಂಗ್ರಹವನ್ನು ದಾನ ಮಾಡಿದ್ದಾರೆ.

core technologies

ಗುಜರಾತ್‌ನ ವಜ್ರ ವ್ಯಾಪಾರಿಯೊಬ್ಬರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ 11  ವಜ್ರ ಖಚಿತ ಕಿರೀಟಗಳು, ಚಿನ್ನದ ಬಿಲ್ಲು, ಬಾಣ ಸೇರಿದಂತೆ ಹಲವಾರು ಅಮೂಲ್ಯ ಆಭರಣಗಳನ್ನು ದೇಣಿಗೆ ನೀಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ತಿಳಿಸಿದೆ.

akshaya college

ವಜ್ರ ವ್ಯಾಪಾರಿ ಮುಖೇಶ್ ಪಟೇಲ್ 11 ವಜ್ರ ಖಚಿತ ಕಿರೀಟಗಳು, 30 ಕಿಲೋಗ್ರಾಂಗಳಷ್ಟು ಬೆಳ್ಳಿ, 300 ಗ್ರಾಂ ಚಿನ್ನ ಮತ್ತು ಮಾಣಿಕ್ಯಗಳನ್ನು ದಾನ ಮಾಡಿದರು. ಈ ವಸ್ತುಗಳನ್ನು ವಿಶೇಷ ಚಾರ್ಟಡ್್ ವಿಮಾನದಲ್ಲಿ ಅಯೋಧ್ಯೆಗೆ ಸಾಗಿಸಲಾಯಿತು ಎಂದು ನ್ಯೂವಾಡಿಯಾ ತಿಳಿಸಿದ್ದಾರೆ.

11 ವಜ್ರಖಚಿತ ಕಿರೀಟಗಳು, 30 ಕೆ.ಜಿ. ಬೆಳ್ಳಿ, 300ಗ್ರಾಂ ಚಿನ್ನ ಮತ್ತು ಮಾಣಿಕ್ಯ(rubies)ಗಳನ್ನು ದೇಣಿಗೆ ನೀಡಿದ್ದಾರೆ. ಇವುಗಳ ಜತೆಗೆ, ಹಾರಗಳು, ಕಿವಿಯೋಲೆಗಳು, ಹಣೆಯ ತಿಲಕ, ರಾಮಾಯಣದ ನಾಲ್ವರು ಸಹೋದರರನ್ನು (ರಾಮ, ಲಕ್ಷ್ಮಣ, ಭರತ, ಶತ್ರುಘ್ನ)ಪ್ರತಿನಿಧಿಸುವ ನಾಲ್ಕು ದೊಡ್ಡ ಮತ್ತು ಮೂರು ಸಣ್ಣ ಬಿಲ್ಲುಗಳು, ನಾಲ್ಕು ಬತ್ತಳಿಕೆಗಳು, ಮೂರು ಗದೆಗಳು ಮತ್ತು ರೇಷ್ಮೆಯಿಂದ ಮಾಡಿದ ಬೀಸಣಿಕೆಯನ್ನು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಸಿದ್ಧ ಉದ್ಯಮಿಯಾಗಿರುವ ಪಟೇಲ್, ಸೂರತ್‌ನಲ್ಲಿ ಗ್ರೀನ್ ಲ್ಯಾಬ್ ಎಂಬ ಆಭರಣ ಸಂಸ್ಥೆಯ ಮಾಲೀಕರಾಗಿದ್ದಾರೆ. ಅವರು ತಮ್ಮ ಧಾರ್ಮಿಕ ದೇಣಿಗೆ ದಾನಗಳಿಗೆ ಹೆಸರುವಾಸಿಯಾಗಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಹಿಂದಾರು ಸಾಯಿ ಭಗವಾನ್ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ | ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಕಾರ್ಯಕ್ರಮ

ಪುತ್ತೂರು : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ನೇತ್ರಾವತಿ ವಲಯ, ಪುತ್ತೂರು ತಾಲೂಕು ಇದರ…

ಪುತ್ತೂರಿನಲ್ಲಿ ಆರೋಗ್ಯದ ಕಡೆಗೆ ಯೋಗದ ನಡಿಗೆ | ಎಸ್.ಪಿ.ವೈ.ಎಸ್.ಎಸ್.ನಿಂದ ನಡೆಯುತ್ತಿರುವ ಯೋಗ ಜೀವನ ದರ್ಶನ

ಪುತ್ತೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ರಾಜ್ಯ ರಾಷ್ಟ್ರೀಯ ಯೋಗ ಶಿಕ್ಷಕರ…