ಪುತ್ತೂರು : ಇಲ್ಲಿನ ಕೊಂಬೆಟ್ಟು ಕಾಲೇಜಿನ ವಿದ್ಯಾರ್ಥಿನಿಗೆ ಚೂರಿ ಇರಿತ ಎಂಬ ಸುಳ್ಳು ಪ್ರಕರಣ ದಾಖಲಾದ ವಿದ್ಯಾರ್ಥಿಯ ಮನೆಗೆ ಆ.21ರಂದು ಅರುಣ್ ಪುತ್ತಿಲ ಭೇಟಿ ನೀಡಿ ಧೈರ್ಯ ತುಂಬಿದರು.
ವಿದ್ಯಾರ್ಥಿಯ ಮಿತ್ತೂರಿನಲ್ಲಿರುವ ಮನೆಗೆ ಭೇಟಿ ನೀಡಿ, ವಿದ್ಯಾರ್ಥಿ ಶಾಲಾ ಚಟುವಟಿಕೆಯಲ್ಲಿ ಮೊದಲಿನಂತೆ ತೊಡಗಿಸಿಕೊಳ್ಳುವಂತೆ ಹೇಳಿದರು.
ನಿನ್ನೆ ನಾಟಕೀಯ ಪ್ರಹಸನದಲ್ಲಿ ವಿದ್ಯಾರ್ಥಿನಿಯ ಹಾಗೂ ಅವರ ಸಂಗಡಿಗರ ನಡೆಯಿಂದ ಮಾಡದ ತಪ್ಪಿಗೆ ವಿದ್ಯಾರ್ಥಿ ರಾತ್ರಿಯವರೆಗೆ ಪೊಲೀಸ್ ವಶದಲ್ಲಿದ್ದು ಮಾನಸಿಕವಾಗಿ ನೊಂದಿದ್ದನ್ನು. ನಂತರ ರಾತ್ರಿ ಕೆಲವು ಸಮಾಜಘಾತುಕ ಶಕ್ತಿಗಳು ವಿದ್ಯಾರ್ಥಿಗಳ ಫೋಟೋ ಹಂಚಿಕೊಂಡು ಇವರೇ ಮುಂದಿನ ಟಾರ್ಗೇಟ್ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಪುತ್ತೂರಿನ ಈ ಸುಳ್ಳು ಕಥೆ ಸೃಷ್ಟಿ ದೊಡ್ಡ ಅವಾಂತರಕ್ಕೆ ಕಾರಣವಾಗುತ್ತಿತ್ತು. ಪೊಲೀಸರ ಕ್ಷಿಪ್ರ ತನಿಖೆಯಿಂದ ಇಡೀ ತಂಡದ ನಾಟಕ ಪ್ರದರ್ಶನಕ್ಕೆ ತಿಲಾಂಜಲಿ ಇಡುವಂತಾಯಿತು ಎಂದು ಪುತ್ತಿಲ ಪರಿವಾರದ ಪ್ರಕಟಣೆ ತಿಳಿಸಿದೆ.