Friday, November 22
Share News

ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಕೊಲೆಯಾದ ಅನಂತರದ ಯಾವುದೇ ಗಲಭೆಗಳಲ್ಲಿ ನಾವು ಭಾಗಿಯಾಗಿಲ್ಲ. ನಮ್ಮ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು 13 ಮಂದಿ ಯುವಕರು ಸುಳ್ಯದ ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಪ್ರವೀಣ್ ನೆಟ್ಟಾರು ಕೊಲೆಯಾದ ಮರುದಿನ ಅಂತಿಮ ನಮನದ ವೇಳೆ ಜನಪ್ರತಿನಿಧಿಗಳು ಆಗಮಿಸಿದಾಗ ಗಲಾಟೆ ನಡೆದಿತ್ತು. ಈ ಘಟನೆಯಲ್ಲಿ ಆರೋಪಿಗಳೆಂದು ಗುರುತಿಸಿದ 13 ಮಂದಿ ಭಾಗಿಯಾಗಿಲ್ಲ ಎಂದು ಪ್ರಾರ್ಥನೆ ಸಲ್ಲಿಸಿದರು.

ನಂದಕುಮಾರ್‌, ಕಮಲಾಕ್ಷ, ಅರುಣ್‌ ರೈ, ಪದ್ಮನಾಭ ತಡಗಜೆ, ಪ್ರಶಾಂತ್‌, ಆನಂದ ಯು., ಧರ್ಮಪಾಲ, ಚಿದಾನಂದ ಬಾಳಿಲ, ಹರೀಶ್‌ ಬಾಳಿಲ, ಡಿಪಿನ್‌ ಎಡಮಂಗಲ, ಶಿವಾನಂದ, ಹರ್ಷಿತ್‌, ನಿತೀಶ್‌ ಕೆ. ಅವರ ಮೇಲೆ ಕೇಸು ದಾಖಲಿಸಲಾಗಿತ್ತು.

ಹಿಂದೂ ಮುಖಂಡ ಶಿವ ಪೂಜಾರಿ ಅವರ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಿದರು. ದೈವಸ್ಥಾನದ ಅರ್ಚಕ ತಿಮ್ಮಪ್ಪ ನಾವೂರು ಉಪಸ್ಥಿತರಿದ್ದರು.


Share News

Comments are closed.

Exit mobile version