ಬೆಂಗಳೂರು: ಇಂದಿನಿಂದ ವಿಧಾನಸಭೆ ಅಧಿವೇಶನ. ಈ ಅಧಿವೇಶನಕ್ಕೆ ಸಿಎಂ ಸಿದ್ದರಾಮಯ್ಯ ಅವರು ವ್ಹೀಟ್ ಚೇರಿನಲ್ಲಿ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ರ್ಯಾಂಪ್ ವ್ಯವಸ್ಥೆ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಡಿ ನೋವಿನ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ವಿಧಾನಸಭೆ ಪ್ರವೇಶ ತನಕ ವ್ಹೀಲ್ ಚೇರ್ನಲ್ಲಿ ಹೋಗಲು ರ‍್ಯಾಂಪ್ ವ್ಯವಸ್ಥೆ ಮಾಡಲಾಗಿದೆ.
ಮುಖ್ಯಮಂತ್ರಿಗಳು ವ್ಹೀಲ್ ಚೇರ್ ಮೂಲಕ ಹೋಗಲು ವಿಧಾನಸೌಧ ಲಾಂಜ್, ವಿಧಾನಸಭೆ ಆಡಳಿತ ಪಕ್ಷದ ಮೊಗಸಾಲೆ ಮತ್ತು ವಿಧಾನಸಭೆ ಪ್ರವೇಶ ದ್ವಾರದ ಮೂರು ಕಡೆ ರ್ಯಾಂಪ್ ಹಾಕಲಾಗಿದೆ. ಇನ್ನು, ರಾಜ್ಯಪಾಲರ ಸ್ವಾಗತಿಸಲು ವಿಧಾನಸಭೆ ಪೂರ್ವ ಮೊಗಸಾಲೆ ಮೂಲಕ ಪ್ರವೇಶಿಸಲು ರ‍್ಯಾಂಪ್ ಅಳವಡಿಸಲಾಗಿದೆ.