tamanvi
ರಾಜಕೀಯ

ಗೃಹಲಕ್ಷ್ಮೀ ಯೋಜನೆಗೆ ಜೀವಿತ ಪ್ರಮಾಣ ಪತ್ರ ಕಡ್ಡಾಯ: ಅಶೋಕ್ ಕಿಡಿ

GL

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಪಡೆಯಲು ಮನೆ ಒಡತಿಯರು ಜೀವಿತ ಪ್ರಮಾಣ ಪತ್ರ  ಕೊಡಬೇಕು ಎಂಬ ಸರ್ಕಾರದ ಹೊಸ ನಿಯಮಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಈ ಸರ್ಕಾರ ಬಂದ ಮೇಲೆ 2 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಈಗ ಸರ್ಕಾರದ ಬಳಿ ಹಣ ಇಲ್ಲ. ಇಡೀ ರಾಜ್ಯದಲ್ಲಿ ರೇಷನ್ ಕಾರ್ಡ್ ಕಟ್ ಮಾಡ್ತಾ ಇದ್ದಾರೆ. ಈ ಮೂಲಕ ಗ್ಯಾರಂಟಿ ಕಟ್ ಮಾಡೋಕೆ ಮುಂದಾಗಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

ಫುಟ್ ಪಾತ್ ವ್ಯಾಪಾರಿಗಳ ಕಾರ್ಡ್ ರದ್ದು ಮಾಡಿದ್ದಾರೆ. ಕಾಂಗ್ರೆಸ್ ತುಘಲಕ್ ಸರ್ಕಾರ ಮಾಡ್ತಿದೆ. ಇದು ಪಾಪರ್ ಸರ್ಕಾರ ಮಾತ್ರವಲ್ಲದೆ, ಬಡವರ ವಿರೋಧಿ ಆಗಿ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts