ರಾಜಕೀಯ

ಮನರೇಗಾ ಹೆಸರು ಬದಲಾವಣೆ ವಿರೋಧಿಸಿ ನಡೆಯುವ ಕಾಂಗ್ರೆಸ್ ಪಾದಯಾತ್ರೆ ಮಂಗಳವಾರ ಪುತ್ತೂರಿಗೆ | ಸುಳ್ಯದಿಂದ ಮೂಲ್ಕಿವರೆಗೆ ನಡೆಯಲಿರುವ ಕಾಂಗ್ರೆಸ್ ಪಾದಯಾತ್ರೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಹೆಸರು ಬದಲಾಯಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸುಳ್ಯದಿಂದ ಮೂಲ್ಕಿವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಮಂಗಳವಾರ ಪುತ್ತೂರಿಗೆ ಆಗಮಿಸಲಿದೆ.

chennai-shopping
maithri

ಸುಳ್ಯದಲ್ಲಿ ಬೆಳಿಗ್ಗೆ ಆರಂಭವಾಗುವ ಪಾದಯಾತ್ರೆ ಸಂಜೆ ಅಮ್ಚಿನಡ್ಕಕ್ಕೆ ತಲುಪಲಿದೆ. ಅಲ್ಲಿಂದ ಕುಂಬ್ರಕ್ಕೆ ಆಗಮಿಸಿ ಸಾರ್ವಜನಿಕ ಸಭೆ ನಡೆಯಲಿದೆ. ಜಿಲ್ಲೆಯ ಹಾಗೂ ತಾಲೂಕಿನ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪುನಃ ಮಂಗಳವಾರ ಬೆಳಿಗ್ಗೆ ಕುಂಬ್ರದಿಂದ ಹೊರಡುವ ಪಾದಯಾತ್ರೆ ಮಧ್ಯಾಹ್ನ ಸುಭದ್ರ ಸಭಾಭವನ ತಲುಪಲಿದೆ. ಮಧ್ಯಾಹ್ನ ಊಟದ ಬಳಿಕ ಹೊರಟು ಸಂಜೆ ವೇಳೆಗೆ ನೇರಳಕಟ್ಟೆ ತಲುಪಲಿದೆ. ಅಲ್ಲಿಂದ ನಂತರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳು ಪಾದಯಾತ್ರೆಯನ್ನು ಮುಂದುವರಿಸಲಿದ್ದಾರೆ.

ಗುರುವಾರ ಸಂಜೆ ಮೂಲ್ಕಿಯಲ್ಲಿ ಕಾಂಗ್ರೆಸ್ ಪಾದಯಾತ್ರೆ ಸಮಾಪನಗೊಳ್ಳಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts