Thursday, November 21
Share News

ಛತ್ತೀಸ್‌ಗಢದ ದಾಂತೇವಾಡದ ಗೀದಾಮ್

ನಗರದಲ್ಲಿ ನೀರಿನ ಬಾವಿಗಳಲ್ಲಿ ಪೆಟ್ರೋಲ್ ಸಿಕ್ಕಿದ್ದು, ಗ್ರಾಮಸ್ಥರು ಅದನ್ನು ಬಕೆಟ್‌ಗಳಲ್ಲಿ ತುಂಬಿಕೊಂಡು ಹೋಗಿರುವ ಅಚ್ಚರಿಯ ಘಟನೆ ನಡೆದಿದೆ. ಶುಕ್ರವಾರ ಮುಂಜಾನೆ ಎಂದಿನಂತೆ ಗ್ರಾಮಸ್ಥರು ನೀರು ಸಂಗ್ರಹಿಸಲು ಹೋದಾಗ ಪೆಟ್ರೋಲ್ ಪತ್ತೆಯಾಗಿದೆ. ಸುದ್ದಿ ತಿಳಿದ ಅಕ್ಕಪಕ್ಕದ ಹಳ್ಳಿಗಳ ಜನರೂ ಬಂದು  ಸಂಗ್ರಹಿಸಿದ್ದಾರೆ.

ಪೊಲೀಸರಿಗೂ ಮಾಹಿತಿ ಸಿಕ್ಕಿದ್ದರಿಂದ ಸ್ಥಳಕ್ಕೆ ಧಾವಿಸಿ ಬಂದರು. ತನಿಖೆಗೆ ನಡೆಸಿದಾಗ ಕುತೂಹಲಕಾರಿ ವಿಚಾರ ಗೊತ್ತಾಯಿತು. ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ಭೂಗತ ಟ್ಯಾಂಕ್‌ನಲ್ಲಿ ಸಂಗ್ರಹಿಸಿದ್ದ ಪೆಟ್ರೋಲ್ ಕಾಣೆಯಾಗಿದ್ದರ ಬಗ್ಗೆ ದೂರು ನೀಡಿದ್ದರು. ತನಿಖೆ ಬಳಿಕ ಟ್ಯಾಂಕ್ ಬಿರುಕು ಬಿಟ್ಟದ್ದರಿಂದ ಪೆಟ್ರೋಲ್ ಸೋರಿಕೆಯಾಗಿ ಬಾವಿಗಳಿಗೆ ಸೇರಿದೆ ಎಂದು ಖಚಿತವಾಯಿತು.

ನೀರು ಮಿಶ್ರಿತ ಪೆಟ್ರೋಲ್‌ನಿಂದ ಗ್ರಾಮದಲ್ಲಿ ಬೆಂಕಿ ಆಕಸ್ಮಿಕ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅಲ್ಲಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ನೀರಿನಲ್ಲಿ ಪೆಟ್ರೋಲ್‌ ಮಿಶ್ರಣ ತಿಳಿಯಾಗುವ ವರೆಗೆ ವಿದ್ಯುತ್ ಪೂರೈಕೆ ಮಾಡದಿರಲು ತೀರ್ಮಾನಿಸಲಾಗಿದೆ.


Share News

Comments are closed.

Exit mobile version