ಸಮಾನ ಮನಸ್ಕ ಒಕ್ಕಲಿಗ ಯುವಕರು ಬಡ ಕುಟುಂಬಗಳಿಗೆ ಆರ್ಥಿಕ, ಸಾಮಾಜಿಕ ಬಲವರ್ಧನೆ ಉದ್ದೇಶದಿಂದ ನೂತನವಾಗಿ ಪ್ರಾರಂಭಿಸಲಾದ ಒಕ್ಕಲಿಗ ಗೌಡ ಸೇವಾವಾಹಿನಿ ದ.ಕ., ಕರ್ನಾಟಕ ಟ್ರಸ್ಟ್ ನ ಚೊಚ್ಚಲ ಸಹಾಯಾರ್ಥ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ನ. 16ರಂದು ಆದಿಚುಂಚನಗಿರಿಯ ಮಂಗಳೂರಿನ ಕಾವೂರು ಶಾಖಾ ಮಠಾಧೀಶರಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿಗಳು ಈ ನೆರವಿನ ಹಸ್ತದ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಒಕ್ಕಲಿಗ ಸಮಾಜದ ವಿಟ್ಲ ಮುಡ್ನೂರು ಗ್ರಾಮದ ಆಲಂಗಾರು ನಿವಾಸಿ ಪಾಂಬಾರು ತೀರ್ಥರಾಮ ಗೌಡರ ಮನೆಯು ಕಳೆದ ಬಾರಿಯ ಮಳೆಗಾಲದಲ್ಲಿ ಬಾರಿ ಮಳೆಗೆ ನೆಲಸಮ ಆಗುವ ಹಂತದಲ್ಲಿದ್ದು
ಪ್ರಸ್ತುತ ಆ ಮನೆಯಲ್ಲಿ ವಾಸ ಮಾಡಲು ಅಸಾಧ್ಯವಾಗಿದ್ದು, ಅವರಿಗೆ ನೂತನ ಮನೆ ನಿರ್ಮಾಣಕ್ಕೆ ಕೆಂಪುಕಲ್ಲನ್ನು ಸೇವಾ ವಾಹಿನಿಯು ನೀಡಲು ಮುಂದಾಗಿದ್ದು ಅದರಂತೆ 2500 ಕೆಂಪು ಕಲ್ಲನ್ನು ನೂತನ ಮನೆ ನಿವೇಶನಕ್ಕೆ ಪೂರೈಸಿದೆ. ಇದರ ಸಾಂಕೇತಿಕ ಹಸ್ತಾಂತರ ಕಾರ್ಯಕ್ರಮ ಇಂದು ನವೆಂಬರ್ 16 ರಂದು ಸಂಜೆ 4 ಗಂಟೆಗೆ ಜರಗಲಿದೆ.
ಒಕ್ಕಲಿಗ ಸಮಾಜದ ಅಭಿವೃದ್ಧಿಯ ಕನಸನ್ನು ಕಾಣುತ್ತಿರುವ ಸಮಾನಮನಸ್ಕ ದಾನಿಗಳ ನೆರವಿನೊಂದಿಗೆ ತಲಾ 6000 ರೂಪಾಯಿಗಳ ಸಹಾಯಹಸ್ತದ ಸಂಗ್ರಹದೊಂದಿಗೆ ಸೇವಾ ವಾಹಿನಿ ಈ ಚೊಚ್ಚಲ ಕಾರ್ಯಕ್ರಮ ಆಯೋಜಿಸಿದೆ.
ಎರಡನೇ ನೆರವಿನ ಹಸ್ತವಾಗಿ ಮುಂದಿನ ತಿಂಗಳು ಸುಳ್ಯ ತಾಲೂಕು ಪಂಬೆತ್ತಾಡಿ ಗ್ರಾಮದ ಜಾಕೆ ಜಯರಾಮ ಗೌಡರಿಗೆ ನೀಡಲು ಮುಂದಾಗಿದೆ.