pashupathi
ದೇಶ

ಭಾರತದಲ್ಲಿ 124 ವರ್ಷಗಳಲ್ಲಿಯೇ ಹೆಚ್ಚಿನ ತಾಪಮಾನ ಕಂಡ ಫೆಬ್ರವರಿ ತಿಂಗಳು: ಭಾರತೀಯ ಹವಾಮಾನ ಇಲಾಖೆ

tv clinic
ಭಾರತದಲ್ಲಿ ಕಳೆದ 124 ವರ್ಷಗಳಲ್ಲಿಯೇ ಫೆಬ್ರವರಿ ತಿಂಗಳು ಹೆಚ್ಚಿನ ತಾಪಮಾನ ದಾಖಲಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಸರಾಸರಿ ತಾಪಮಾನವು 22 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿತ್ತು ಎಂದು ಅಧಿಕೃತ ಅಂಕಿಅಂಶಗಳು ತೋರಿಸಿವೆ.

ಈ ಸುದ್ದಿಯನ್ನು ಶೇರ್ ಮಾಡಿ

ಭಾರತದಲ್ಲಿ ಕಳೆದ 124 ವರ್ಷಗಳಲ್ಲಿಯೇ ಫೆಬ್ರವರಿ ತಿಂಗಳು ಹೆಚ್ಚಿನ ತಾಪಮಾನ ದಾಖಲಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಸರಾಸರಿ ತಾಪಮಾನವು 22 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿತ್ತು ಎಂದು ಅಧಿಕೃತ ಅಂಕಿಅಂಶಗಳು ತೋರಿಸಿವೆ.

akshaya college

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಫೆಬ್ರವರಿಯಲ್ಲಿ ಸರಾಸರಿ ತಾಪಮಾನವು 1.34 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಿದೆ. ಸಾಮಾನ್ಯವಾಗಿ 20.70 ಡಿಗ್ರಿ ಸೆಲ್ಸಿಯಸ್ ನಷ್ಟು ಇರುತ್ತಿದ್ದ ತಾಪಮಾನವು 22.04 ಡಿಗ್ರಿ ಸೆಲ್ಸಿಯಸ್‌ಗೆ

ದೇಶದಲ್ಲಿ ಗರಿಷ್ಠ ತಾಪಮಾನವು 1.49 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಿದ್ದು, ಸಾಮಾನ್ಯವಾಗಿ ಇರುತ್ತಿದ್ದ 27.58 ಡಿಗ್ರಿ ಸೆಲ್ಸಿಯಸ್ ತಾಪಮಾನವು ಈ ಬಾರಿ 29.07 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಫೆಬ್ರವರಿಯಲ್ಲಿ ಸರಾಸರಿ ಕನಿಷ್ಠ ತಾಪಮಾನವು 15.02 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಇದು ಈ ಹಿಂದೆ ದಾಖಲಾಗುತ್ತಿದ್ದ ಸಾಮಾನ್ಯ ತಾಪಮಾನ 13.82 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದೆ.

ಫೆಬ್ರವರಿಯಲ್ಲಿ ಉತ್ತರ ಮತ್ತು ವಾಯುವ್ಯ ಭಾರತದಲ್ಲಿ ಈ ಬಾರಿ ಚಳಿಯ ರಾತ್ರಿಗಳಿಗಿಂತ ಹೆಚ್ಚು ತಾಪಾಮಾನವಿದ್ದ ರಾತ್ರಿಗಳು ಕಂಡು ಬಂದಿದೆ. ಅಲ್ಲದೇ ಉತ್ತರ ಭಾರತದ ನದಿ ತೀರದ ಬಯಲು ಪ್ರದೇಶಗಳಲ್ಲಿ ಮಂಜಿನ ವಾತಾವರಣವೂ ಕಡಿಮೆಯಾಗಿರುವುದು ಭಾರತೀಯ ಹವಾಮಾನ ಇಲಾಖೆಯ ಅಂಕಿ ಅಂಶಗಳಲ್ಲಿ ದಾಖಲಾಗಿದೆ.

ಈ ಕುರಿತು ಶುಕ್ರವಾರ ಭಾರತೀಯ ಹವಾಮಾನ ಇಲಾಖೆಯು ಬಿಡುಗಡೆ ಮಾಡಿರುವ ಬೇಸಿಗೆ ಋತುವಿನ ಮುನ್ಸೂಚನೆಯಲ್ಲಿ ಭಾರತದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಮಾರ್ಚ್ ನಿಂದ ಮೇ ವರೆಗೆ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಹೇಳಿದೆ. ಜಮ್ಮು ಹಿಮಾಚಲ ಪ್ರದೇಶ, ಪಂಜಾಬ್, ದಿಲ್ಲಿ, ರಾಜಸ್ಥಾನ, ಉತ್ತರ ಪ್ರದೇಶದ ಬಯಲು ಪ್ರದೇಶಗಳು, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಕರಾವಳಿ – ಉತ್ತರ ಮತ್ತು ಪೂರ್ವ ಮಹಾರಾಷ್ಟ್ರ, ಗೋವಾ ಮತ್ತು ಕರಾವಳಿ ಕರ್ನಾಟಕದಲ್ಲಿ ಈ ಅವಧಿಯಲ್ಲಿ ಹೆಚ್ಚಿನ ತಾಪಮಾನವು ದಾಖಲಾಗಲಿದೆ ಎಂದು ಹೇಳಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts