ದೇಶ

ಕುಂಬಮೇಳ: 300 ಕಿ.ಮೀ ಟ್ರಾಫಿಕ್ ಜಾಮ್

ಪ್ರಯಾಗ್‌'ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಹೋಗುವ ರಸ್ತೆಗಳನಲ್ಲಿ 300 ಕಿಲೋಮೀಟರ್ ಉದ್ದ ವಾಹನಗಳ ಸಮುದ್ರವು ಪಾರ್ಕಿಂಗ್ ಸ್ಥಳಗಳಾಗಿ ಪರಿವರ್ತಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಉತ್ತರ ಪ್ರದೇಶ: ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್ ಆಗಿದ್ದು,

akshaya college

ಮಹಾಕುಂಭಮೇಳಕ್ಕೆ ಹೋಗುವ ರಸ್ತೆಗಳಲ್ಲಿ 300 ಕಿ.ಮೀ ಸಂಚಾರ ದಟ್ಟಣೆ ಆಗಿದೆ.

ಉತ್ತರ ಪ್ರದೇಶದ ಪ್ರಯಾಗ್‌’ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಹೋಗುವ ರಸ್ತೆಗಳನಲ್ಲಿ 300 ಕಿಲೋಮೀಟರ್ ಉದ್ದ ವಾಹನಗಳ ಸಮುದ್ರವು ಪಾರ್ಕಿಂಗ್ ಸ್ಥಳಗಳಾಗಿ ಪರಿವರ್ತಿಸಿದೆ.

ಈ ಮಧ್ಯೆ, ನಿಲ್ದಾಣದ ಹೊರಗೆ ವಿಪರೀತ ಜನಸಂದಣಿಯಿಂದಾಗಿ ಪ್ರಯಾಗರಾಜ್ ನ ಸಂಗಮ್ ರೈಲು ನಿಲ್ದಾಣವನ್ನು ಮುಚ್ಚಲಾಗಿದೆ. ಭಾನುವಾರ ಸಂಜೆ 6 ಗಂಟೆಯವರೆಗೆ 1.42 ಕೋಟಿಗೂ ಹೆಚ್ಚು ಭಕ್ತರು ಗಂಗಾ ಮತ್ತು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಎಂದು ಮಹಾಕುಂಭದ ಆಡಳಿತ ಬಿಡುಗಡೆ ಮಾಡಿದ ಅಂಕಿ- ಅಂಶಗಳು ತಿಳಿಸಿವೆ. ಇದುವರೆಗೆ 42 ಕೋಟಿಗೂ ಹೆಚ್ಚು ಭಕ್ತರು ಗಂಗಾ ಮತ್ತು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಎಂದು ಅಂಕಿ- ಅಂಶಗಳು ಹೇಳುತ್ತಿವೆ.

ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಯಲ್ಲಿ ಭಾಗವಹಿಸಲು ಉತ್ಸುಕರಾಗಿರುವ ಲಕ್ಷಾಂತರ ಯಾತ್ರಾರ್ಥಿಗಳು ಭಾನುವಾರ ಜಾತ್ರೆ ಸ್ಥಳದಿಂದ ನೂರಾರು ಕಿಲೋಮೀಟರ್ ದೂರದಲ್ಲಿರುವ ತಮ್ಮ ಕಾರುಗಳಲ್ಲಿ ಸಿಲುಕಿಕೊಂಡಿದ್ದಾರೆ.

ಪ್ರಯಾಣದ ಸಂಕಷ್ಟದಿಂದ ಜನರು ಕೂಡ ಆಕ್ರೋಶಿತರಾಗಿದ್ದು, ಇನ್ನಷ್ಟು ಉತ್ತಮ ವ್ಯವಸ್ಥೆ ಮಾಡಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಮಂದಿ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಬಿದ್ದು ಅನುಭವಿಸಿದ ಕರಾಳ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಕುಟುಂಬವೊಂದು ಬರೀ ನಾಲ್ಕು ಕಿ.ಮೀ. ಪ್ರಯಾಣಕ್ಕೆ ಬರೋಬ್ಬರಿ 24 ತಾಸು ಬೇಕಾಯಿತು ಎಂದು ಬರೆದುಕೊಂಡಿದೆ.

ಅನೇಕ ಮಂದಿ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಬಿದ್ದಾಗ ಸರಿಯಾಗಿ ಆಹಾರ, ಶೌಚಾಲಯ ಸಿಗದೆ ಒದ್ದಾಡಿದ ಬಗ್ಗೆ ಬರೆದುಕೊಂಡಿದ್ದಾರೆ.

ಸಮಾಜವಾದಿ ಪಾರ್ಟಿ ಮುಖಂಡ ಅಖಿಲೇಶ್ ಯಾದವ್ ಕುಂಭಮೇಳದ ಟ್ರಾಫಿಕ್ ನಿಯಂತ್ರಣ ವ್ಯವಸ್ಥೆ ಅತ್ಯಂತ ಕಳಪೆಯಾಗಿದೆ ಎಂದು ಟೀಕಿಸಿದ್ದಾರೆ. ಕುಂಭಮೇಳ ಪ್ರವೇಶದ 30 ಕಿ.ಮೀ. ದೂರದಿಂಲೇ ಜನರು ಇಳಿದು ನಡೆಯಬೇಕಾಗಿದೆ. ಟ್ರಾಫಿಕ್ ಜಾಮ್ ಅಗುವ ಬಗ್ಗೆ ಗೊತ್ತಿದ್ದರೂ ಉತ್ತರ ಪ್ರದೇಶ ಸರಕಾರ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡಿಲ್ಲ. ವಿಐಪಿಗಳಿಗೆ ಬೇಗ ಪ್ರವೇಶ ಸಿಗುತ್ತದೆ. ಜನಸಾಮಾನ್ಯರು ಮಾತ್ರ ನಡೆದುಕೊಂಡೇ ಹೋಗುವ ಅನಿವಾರ್ಯತೆಯಿದೆ ಎಂದು ಟ್ವಿಟ್ ಮಾಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts