ದೇಶ

1 ಗಂಟೆಯಲ್ಲಿ ಹೂವಾಗಿ ಅರಳಿದ 76 ಕಲ್ಲಂಗಡಿ!!ಗಣರಾಜ್ಯೋತ್ಸವ ದಿನದಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಬರೆದ ಶಿರಸಿ ಬನವಾಸಿಯ ವಿದ್ಯಾರ್ಥಿನಿಯ ಹೊಸ ದಾಖಲೆ!! ಆಂಧ್ರ ಪ್ರದೇಶದ ಹಿಂದಿನ ದಾಖಲೆಯನ್ನು ಪುಡಿಗಟ್ಟಿದ ಗ್ರಾಮೀಣ ಪ್ರತಿಭೆ!

76 ಕಲ್ಲಂಗಡಿಗಳಲ್ಲಿ ವಿವಿಧ ವಿನ್ಯಾಸದ ಹೂಗಳನ್ನು ಕೆತ್ತುವ ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ಅಂದ ಹಾಗೇ, ಇದಕ್ಕೆ ತೆಗೆದುಕೊಂಡಿದ್ದು ಕೇವಲ ಒಂದು ಗಂಟೆ.

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಜನವರಿ 26ರ ಶುಭದಿನ ಭಾರತ ಗಣರಾಜ್ಯವಾಗಿ 76 ವರ್ಷದ ಸಂಭ್ರಮ. ಈ ಸಂಭ್ರಮದ ದಿನ ಅಚ್ಚಳಿಯದೇ ಉಳಿಯುವಂತಹ ಹೊಸದೊಂದು ಸಾಧನೆಯೊಂದನ್ನು ಶಿರಸಿ ಬನವಾಸಿಯ ವಿದ್ಯಾರ್ಥಿನಿ ಪೂಜಾ ನಾಯ್ಕ್ ಇತಿಹಾಸದ ಪುಟಗಳಲ್ಲಿ ದಾಖಲಿಸಿದ್ದಾರೆ.

akshaya college

76 ಕಲ್ಲಂಗಡಿಗಳಲ್ಲಿ ವಿವಿಧ ವಿನ್ಯಾಸದ ಹೂಗಳನ್ನು ಕೆತ್ತುವ ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ಅಂದ ಹಾಗೇ, ಇದಕ್ಕೆ ತೆಗೆದುಕೊಂಡಿದ್ದು ಕೇವಲ ಒಂದು ಗಂಟೆ.

ಬೆಂಗಳೂರಿನ ಚೆನ್ನೈಸ್ ಅಮಿರ್ತಾ ಇನ್’ಸ್ಟಿಟ್ಯೂಷನ್ ಆಫ್ ಹೋಟೆಲ್ ಮ್ಯಾನೇಜ್’ಮೆಂಟಿನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪೂಜಾ ನಾಯ್ಕ್ ಅವರ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲಾಯಿತು.

ಈ ಹಿಂದೆ ಆಂಧ್ರಪ್ರದೇಶದ ಸಂಸ್ಥೆಯೊಂದು ಒಂದು ಗಂಟೆಯಲ್ಲಿ 30 ಕಲ್ಲಂಗಡಿ ಹಣ್ಣಿನಲ್ಲಿ ಹೂಗಳ ವಿನ್ಯಾಸವನ್ನು ರಚಿಸಿ ಸಾಧನೆ ಮಾಡಿತ್ತು. ಇದೀಗ ಈ ದಾಖಲೆಯನ್ನು ಅಮಿರ್ತಾ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಪೂಜಾ ನಾಯ್ಕ್ ಅವರು ಹಿಂದಿಕ್ಕಿದ್ದಾರೆ. ಅಂದರೆ ನಿಮಿಷವೊಂದಕ್ಕೆ ಒಂದಕ್ಕಿಂತಲೂ ಹೆಚ್ಚು ಕಲ್ಲಂಗಡಿಯಲ್ಲಿ ಹೂವನ್ನು ಕೆತ್ತುವ ಮೂಲಕ ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ.

ಶಿರಸಿಯ ಹೊಂಚಳ್ಳಿ ಹಾಗೂ …. ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದ ಪೂಜಾ, ಪಿಯು ವಿದ್ಯಾಭ್ಯಾಸವನ್ನು ….ನಲ್ಲಿ ಪೂರೈಸಿದರು. ನಂತರ ಹೋಟೆಲ್ ಮ್ಯಾನೇಜ್’ಮೆಂಟ್ ಕ್ಷೇತ್ರವನ್ನು ಆಯ್ದುಕೊಂಡು, ಚೆನ್ನೈಸ್ ಅಮಿರ್ತಾ ಇನ್’ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್’ಮೆಂಟ್ ಸೇರಿಕೊಂಡರು. ಮುಂದೆ ವರ್ಲ್ಡ್ ಕ್ಯುಲಿನರಿ ಕಾಂಪಿಟೀಷನ್ (ವಿಶ್ವ ಪಾಕಶಾಲಾ ಸ್ಪರ್ಧೆ)ನಲ್ಲಿ ಭಾಗವಹಿಸಿ, ಭಾರತದ ಹೆಸರನ್ನು ವಿಶ್ವ ಮಟ್ಟದಲ್ಲಿ ರಾರಾಜಿಸುವಂತೆ ಮಾಡುವ ಗುರಿ ಇಟ್ಟುಕೊಂಡಿದ್ದಾರೆ.

ಈಗಾಗಲೇ ದುಬೈ, ಮಲೇಷ್ಯಾದಲ್ಲಿ ನಡೆದಿರುವ ಪಾಕಶಾಲಾ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಹೆಗ್ಗಳಿಕೆ ಇವರದು. 2 ಅಂತಾರಾಷ್ಟ್ರೀಯ, 5 ರಾಷ್ಟ್ರೀಯ ಪದಕಗಳನ್ನು ಗೆದ್ದುಕೊಂಡಿರುವ ಪ್ರತಿಭಾವಂತೆ ಈಕೆ.

ಭಾನುವಾರ ಅಮಿರ್ತಾ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟಿನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಸದಸ್ಯರೂ, ಕರ್ನಾಟಕ ಲೋಕಾಯುಕ್ತದ ನಿವೃತ್ತ ವಿಜಿಲೆನ್ಸ್ ನಿರ್ದೇಶಕರೂ ಆಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಶ್ರೀ ಡಿ.ಎನ್. ಮುನಿಕೃಷ್ಣ ಹಾಗೂ ಐ.ಬಿ.ಆರ್.ನ ಅಡ್ಜುಡಿಕೇಟರ್ ಶ್ರೀ ಹರೀಶ್ ಆರ್. ಮುಖ್ಯ ಅತಿಥಿಯಾಗಿದ್ದರು. ಸಂಸ್ಥೆಯ ಅಧ್ಯಕ್ಷರಾದ ಭೂಮಿನಾಥನ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts