Gl
ದೇಶ

ಗಾಝಾ ಮೇಲೆ ಇಸ್ರೇಲ್ ದಾಳಿ: 45,000 ದಾಟಿದ ಮೃತರ ಸಂಖ್ಯೆ

ಕಳೆದ 15 ತಿಂಗಳುಗಳಿಂದ ಇಸ್ರೇಲ್‌ ನಡೆಸುತ್ತಿರುವ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 45,000 ಮೀರಿದೆ ಎಂದು ಫೆಲೆಸ್ತೀನ್ ನ ಆರೋಗ್ಯ ಸಚಿವಾಲಯ ಮಾಹಿತಿಯನ್ನು ನೀಡಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಗಾಝಾ: ಕಳೆದ 15 ತಿಂಗಳುಗಳಿಂದ ಇಸ್ರೇಲ್‌ ನಡೆಸುತ್ತಿರುವ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 45,000 ಮೀರಿದೆ ಎಂದು ಫೆಲೆಸ್ತೀನ್ ನ ಆರೋಗ್ಯ ಸಚಿವಾಲಯ ಮಾಹಿತಿಯನ್ನು ನೀಡಿದೆ.

rachana_rai
Pashupathi

ಇಸ್ರೇಲ್ ದಾಳಿಗೆ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ. ಕಳೆದ 15 ತಿಂಗಳಿನಿಂದ ಇಸ್ರೇಲ್ ನ ದಾಳಿಗೆ ಗಾಝಾದಲ್ಲಿ 17,000 ಮಕ್ಕಳು ಮೃತಪಟ್ಟಿದ್ದಾರೆ. ಈ ಅಂಕಿ-ಅಂಶಗಳಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ 11,000 ಫೆಲೆಸ್ತೀನಿಯರ ಬಗ್ಗೆ ಉಲ್ಲೇಖವಿಲ್ಲ ಎಂದು ಹೇಳಲಾಗಿದೆ.

akshaya college

ಪ್ರಸ್ತುತ ಗಾಝಾದಲ್ಲಿನ ಸ್ಥಿತಿಯು ಶೋಚನೀಯವಾಗಿದೆ. ಶಾಲೆಗಳು, ಆಶ್ರಯ ಕೇಂದ್ರಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ಎಲ್ಲವನ್ನೂ ಗುರಿಯಾಗಿಸಿ ಇಸ್ರೇಲ್ ಪಡೆಗಳು ದಾಳಿ ನಡೆಸಿದೆ ಎಂದು ಅಲ್ ಜಝೀರಾದ ದೀರ್ ಎಲ್- ಬಾಲಾಹ್ ನ ವರದಿಗಾರ ಹಿಂದ್ ಖ್ದರಿ ಹೇಳಿದ್ದಾರೆ.

ಗಾಝಾದಲ್ಲಿ ಶೆಲ್ ದಾಳಿಗಳು ಮತ್ತು ವಾಯುದಾಳಿಗಳು ನಿರಂತರವಾಗಿ ಮುಂದುವರಿದಿದೆ, ಅಮಾಯಕ ನಾಗರಿಕರನ್ನು ಹೆಲಿಕಾಪ್ಟರ್ ಗಳಲ್ಲಿ ಬೆನ್ನತ್ತಿ ಗುಂಡಿಕ್ಕಿ ಹತ್ಯೆ ಮಾಡಲಾಗುತ್ತಿದೆ. ಆದರೆ, ರಕ್ಷಣಾ ತಂಡಗಳು ಆ ಪ್ರದೇಶಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಸೋಮವಾರ ಕೂಡ ಇಸ್ರೇಲ್ ಗಾಝಾದ ಅಮಾಯಕ ನಾಗರಿಕರನ್ನು ಗುರಿಯಾಗಿಸಿಕೊಂಡು ನರಮೇಧವನ್ನು ಮುಂದುವರಿಸಿದೆ. ಕಳೆದ 24 ಗಂಟೆಗಳಲ್ಲಿ ಗಾಝಾದಲ್ಲಿ 52 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts