ದೇಶ

ತಾಂತ್ರಿಕ ತೊಂದರೆ: ವಂದೇ ಭಾರತ್  ರೈಲು ಹಳಿಯಲ್ಲೇ ಬಾಕಿ!

ತಾಂತ್ರಿಕ ತೊಂದರೆಯಿಂದ ತಿರುವನಂತಪುರಂನಿಂದ ಕಾಸರಗೋಡಿಗೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹಳಿಯಲ್ಲೇ ಬಾಕಿಯಾದ ಘಟನೆ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ತಿರುವನಂತಪುರಂ: ತಾಂತ್ರಿಕ ತೊಂದರೆಯಿಂದ ತಿರುವನಂತಪುರಂನಿಂದ ಕಾಸರಗೋಡಿಗೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹಳಿಯಲ್ಲೇ ಬಾಕಿಯಾದ ಘಟನೆ ನಡೆದಿದೆ.

ಬುಧವಾರ ತಿರುವನಂತಪುರಂ ನಿಂದ ಹೊರಟಿದ್ದ ರೈಲು ಶೊರ್ನೂರು ಸ್ಟೇಷನ್‌ ಬಳಿಕ ಮುಂದಕ್ಕೆ ಬರುತ್ತಿದ್ದಂತೆ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ. ಪರಿಣಾಮ ರೈಲಿನ ಬಾಗಿಲು ಮತ್ತು ಎಸಿ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇದರಿಂದ ಪ್ರಯಾಣಕರು ರೈಲಿನೊಳಗಡೆ ಬಾಕಿಯಾಗಿದ್ದರು.

SRK Ladders

ಬಳಿಕ ಡೀಸೆಲ್ ಇಂಜಿನ್ ಬಳಸಿ ರೈಲನ್ನು ಮತ್ತೆ ಶೊರ್ನೂರು ಸ್ಟೇಷನ್ ಗೆ ಕೊಂಡೊಯ್ಯಲಾಯಿತು.

ರೈಲಿನ ತಾಂತ್ರಿಕ ತೊಂದರೆಗೆ ಕಾರಣ ಹುಡುಕಲಾಗುತ್ತದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts