ದೇಶರಾಜ್ಯ ವಾರ್ತೆ

ವಾಯುಪಡೆ ಯುದ್ದ ವಿಮಾನ ಪತನ!!

ಭಾರತೀಯ ವಾಯಪಡೆಯ ಮಿಗ್-29 ಯುದ್ಧ ವಿಮಾನವು ಉತ್ತರ ಪ್ರದೇಶದ ಆಗ್ರಾದಲ್ಲಿ ಪತನಗೊಂಡಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಆಗ್ರಾ: ಭಾರತೀಯ ವಾಯಪಡೆಯ ಮಿಗ್-29 ಯುದ್ಧ ವಿಮಾನವು ಉತ್ತರ ಪ್ರದೇಶದ ಆಗ್ರಾದಲ್ಲಿ ಪತನಗೊಂಡಿದೆ.

akshaya college

ಜೆಟ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಹಾರಾಟದ ವೇಳೆ ಜೆಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಜೆಟ್‌ನಲ್ಲಿದ್ದ ಪೈಲಟ್ ಜನವಸತಿ ಪ್ರದೇಶದ ಮೇಲೆ ವಿಮಾನ ಬೀಳದಂತೆ ತಡೆದು ಕೆಳಗೆ ಜಿಗಿದಿದ್ದಾರೆ. ಹೀಗಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಆಂತರಿಕ ತನಿಖೆಗೆ ಆದೇಶಿಸಿದ್ದಾರೆ.

ಈ ಹಿಂದೆ ಸೆ.2 ರಂದು ಮಿಗ್ -29 ಯುದ್ಧವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ರಾಜಸ್ಥಾನದ ಬಾಢಮೇರ್ ನಲ್ಲಿ ಪತನಗೊಂಡಿತ್ತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts