ದೇಶ

ದೇಶದಲ್ಲೇ ಮೊದಲು: ಯುಪಿ ಮಹಿಳಾ ಪೊಲೀಸರಿಂದ ಎನ್‌ಕೌಂಟರ್!!

ಈ ಸುದ್ದಿಯನ್ನು ಶೇರ್ ಮಾಡಿ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಅತೀ ಹೆಚ್ಚು ಎನ್‌ಕೌಂಟರ್ ನಡೆದಿದೆ. ಗ್ಯಾಂಗ್‌ಸ್ಟರ್, ರೌಡಿಗಳು ಸೇರಿದಂತೆ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಯೋಗಿ ಸರ್ಕಾರ ಶೂನ್ಯ ಸಹಿಷ್ಣುತೆ ತೋರಿದ್ದಾರೆ. ಕ್ರಿಮಿನಲ್ ಅದೆಷ್ಟೇ ವೀರನಾಗಿದ್ದರೂ ಯುಪಿ ಪೊಲೀಸರು ಬುಲೆಟ್ ಗುರಿಯಿಟ್ಟು ಕತೆ ಮುಗಿಸಿದ್ದಾರೆ.

ಇದೀಗ ಇದೇ ಉತ್ತರ ಪ್ರದೇಶದಲ್ಲಿ ಮಹಿಳಾ ಪೊಲೀಸರ ತಂಡ ದೇಶದಲ್ಲೇ ಮೊದಲ ಎನ್‌ಕೌಂಟರ್ ನಡೆಸಿದೆ. ಈ ಮೂಲಕ ಕ್ರಿಮಿನಲ್‌ನ ಬಂಧಿಸಿದ ಘಟನೆ ನಡೆದಿದೆ.

ಪೊಲೀಸರ ಮೇಲೆ ಗುಂಡು ಹಾರಿಸಿದ ಕ್ರಿಮಿನಲ್

ಯುಪಿಯ ಘಾಝಿಯಾಬಾದ್‌ನಲ್ಲಿ ಮಹಿಳಾ ಪೊಲೀಸರ ತಂಡ ಎನ್‌ಕೌಂಟರ್ ನಡೆಸಿದೆ. ಚೆಕ್ ಪಾಯಿಂಟ್‌ನಲ್ಲಿದ್ದ ಮಹಿಳಾ ಪೊಲೀಸರಿಗೆ ಇದೇ ಚೆಕ್ ಪಾಯಿಂಟ್ ಮೂಲಕ ಕ್ರಿಮಿನಲ್ ಜಿತೇಂದ್ರ ಸಾಗುತ್ತಿರುವ ಮಾಹಿತಿ ಸಿಕ್ಕಿತ್ತು. ಹೀಗಾಗಿ ಮಹಿಳಾ ಪೊಲೀಸರ ತಂಡ ಜಿತೇಂದ್ರನ ಹಿಡಿಯಲು ಸಜ್ಜಾಗಿದ್ದರು. ಚೆಕ್ ಪೋಸ್ಟ್ ಬಳಿ ಜಿತೇಂದ್ರ ಸ್ಕೂಟರ್ ಮೂಲಕ ಬರುತ್ತಿದ್ದಂತೆ ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ಜಿತೇಂದ್ರ ಸ್ಕೂಟರ್ ನಿಲ್ಲಿಸದೆ ತೆರಳುವ ಪ್ರಯತ್ನ ಮಾಡಿದ್ದಾನೆ. ಬ್ಯಾರಿಕೇಡ್ ಹಾಕುತ್ತಿದ್ದಂತೆ ಸ್ಕೂಟರ್‌ಗೆ ಬಡಿದಿದೆ. ಇತ್ತ ನಿಯಂತ್ರಣ ಕಳೆದುಕೊಂಡ ಕ್ರಿಮಿನಲ್ ಜಿತೇಂದ್ರ ನೆಲಕ್ಕೆ ಬಿದ್ದಿದ್ದಾನೆ.

ಪೊಲೀಸರ ಮೇಲೆ ಗುಂಡಿನ ದಾಳಿ

ನೆಲಕ್ಕೆ ಬಿದ್ದ ಜಿತೇಂದ್ರ ಪೊಲೀಸರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದಾರೆ. ಮೊದಲೆ ಎಲ್ಲಾ ಪರಿಸ್ಥಿತಿಗೂ ಸಜ್ಜಾಗಿದ್ದ ಮಹಿಳಾ ಪೊಲೀಸರು ತಕ್ಷಣವೇ ಪ್ರತಿದಾಳಿ ನಡೆಸಿದ್ದಾರೆ. ನೆಲಕ್ಕೆ ಬಿದ್ದ ಬೆನ್ನಲ್ಲೇ ರಿವಾಲ್ವರ್ ತೆಗೆದು ದಾಳಿ ಆರಂಭಿಸಿದ ಜಿತೇಂದ್ರನ ಮೇಲೆ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ಜಿತೇಂದ್ರನ ಮೊಣಕಾಲಿನ ಕೆಳಗೆ ಗುಂಡಿನ ದಾಳಿ ನಡೆಸಿದ್ದಾರೆ. ಎರಡೂ ಕಾಲಿಗೆ ಗುಂಡಿನ ಮಳೆ ಸುರಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಜಿತೇಂದ್ರನಿ ಕುಸಿದು ಬಿದ್ದಿದ್ದಾನೆ. ಮಹಿಳಾ ಪೊಲೀಸರ ತಂಡ, ಜಿತೇಂದ್ರನಿಂದ ರಿವಾಲ್ವರ್ ಕಸಿದು, ಬಂಧಿಸಿದ್ದಾರೆ.

ಜಿತೇಂದ್ರನ ಬಳಿಯಿಂದ ಪಿಸ್ತೂಲ್, ಸ್ಕೂಟರ್‌ನಲ್ಲಿ ಇಟ್ಟಿದ್ದು ಟ್ಯಾಬ್, ಸ್ಮಾರ್ಟ್‌ಫೋನ್ ವಶಕ್ಕೆ ಪಡೆಯಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಏಪ್ರಿಲ್ 1ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಗೆ ಬ್ರೇಕ್: ಫಾಸ್ಟ್‌ಟ್ಯಾಗ್, ಯುಪಿಐ ಮೂಲಕವೇ ಟೋಲ್ ಪಾವತಿ

ನವದೆಹಲಿ: ದೇಶದಾದ್ಯಂತ ಇರುವ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಡಿಜಿಟಲ್ ಪಾವತಿಯನ್ನು…

ಮಧ್ಯಪ್ರಾಚ್ಯ ಉದ್ವಿಗ್ನತೆ : ಸಂಕಷ್ಟದಲ್ಲಿನ ಕನ್ನಡಿಗರ ನೆರವಿಗೆ ಉಡುಪಿ ಜಿಲ್ಲಾಡಳಿತದಿಂದ ತುರ್ತು ಸಹಾಯವಾಣಿ

ಮಂಗಳೂರು: ಮಧ್ಯಪ್ರಾಚ್ಯದ ಕೆಲವು ರಾಷ್ಟ್ರಗಳಲ್ಲಿ ಉಂಟಾಗಿರುವ ಅಸ್ಥಿರತೆ ಹಾಗೂ ಅಂತರಾಷ್ಟ್ರೀಯ…

ರೊಟ್ವೀಲರ್, ಪಿಟ್‌ಬುಲ್ ನಾಯಿಗಳಿಗೆ ನಿಷೇಧ!! ನಾಯಿ ದಾಳಿ ಪ್ರಕರಣಗಳ ಹಿನ್ನೆಲೆಯಲ್ಲಿ ಮಹತ್ವದ ನಿರ್ಣಯ ಕೈಗೊಂಡ ಪಾಲಿಕೆ!

ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ರೊಟ್ವೀಲರ್ ಮತ್ತು ಪಿಟ್‌ಬುಲ್ ತಳಿಯ ನಾಯಿಗಳನ್ನು…