ದೇಶ

ರಷ್ಯಾ, ಜಪಾನ್‌ನಲ್ಲಿ ಭೂಕಂಪ, ಸುನಾಮಿ ಎಚ್ಚರಿಕೆ, ಹೈ ಅಲರ್ಟ್ ಘೋಷಣೆ!!

ಈ ಸುದ್ದಿಯನ್ನು ಶೇರ್ ಮಾಡಿ

ಜಪಾನ್‌ನ ಹವಾಮಾನ ಸಂಸ್ಥೆಯ ಪ್ರಕಾರ, ಬುಧವಾರ ಬೆಳಗ್ಗೆ 8:25 ಕ್ಕೆ (ಭಾರತೀಯ ಕಾಲಮಾನ ಬೆಳಗ್ಗೆ 4.55) 8.0 ರ ಆರಂಭಿಕ ತೀವ್ರತೆಯೊಂದಿಗೆ ರಷ್ಯಾ ಹಾಗೂ ಜಪಾನ್‌ನಲ್ಲಿ ಭೂಕಂಪ ಸಂಭವಿಸಿದೆ.

ನಾಲ್ಕು ದೊಡ್ಡ ದ್ವೀಪಗಳ ಉತ್ತರದ ಭಾಗವಾದ ಹೊಕ್ಕೊಡೊದಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದುವಿದ್ದು, ಸ್ವಲ್ಪ ಮಾತ್ರ ಅನುಭವವಾಯಿತು ಎಂದು ಜಪಾನ್‌ನ NHK ದೂರದರ್ಶನ ವರದಿ ಮಾಡಿದೆ.

ಈ ಮಧ್ಯೆ, ರಷ್ಯಾದ ಕಮ್ಮಟ್ಕಾ ಪರ್ಯಾಯ ದ್ವೀಪದ ಬಳಿ ಸಂಭವಿಸಿದ ರಿಕ್ಟರ್ ಮಾಪಕದಲ್ಲಿ 8.0 ರಷ್ಟಿದ್ದ ಭಾರಿ ಭೂಕಂಪದ ನಂತರ ಜಪಾನ್ ಬುಧವಾರ ತನ್ನ ಪೆಸಿಫಿಕ್ ಕರಾವಳಿಗೆ ಸುನಾಮಿ ಎಚ್ಚರಿಕೆ ನೀಡಿದೆ.

ಇದರ ಅಲೆಗಳು 3 ಮೀಟರ್ ಎತ್ತರದವರೆಗೆ ಇರಬಹುದು ಎಂದು ಹೇಳಿದೆ.

ಜಪಾನ್‌ನ ಪೆಸಿಫಿಕ್ ಕರಾವಳಿಯಲ್ಲಿ 3 ಮೀಟರ್‌ಗಳಷ್ಟು ಎತ್ತರದ ಸುನಾಮಿಯ ಬಗ್ಗೆ ಜಪಾನಿನ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದ್ದು, ಎಚ್ಚರಿಕೆ ನೀಡಿದ ಅರ್ಧ ಗಂಟೆಗಿಂತ ಕಡಿಮೆ ಅವಧಿಯಲ್ಲಿ ಉತ್ತರ ಜಪಾನಿನ ಕರಾವಳಿಯಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಸುನಾಮಿ ಎಚ್ಚರಿಕೆಯನ್ನು ಅಮೆರಿಕದ ಹವಾಯಿ ರಾಜ್ಯಕ್ಕೂ ವಿಸ್ತರಿಸಲಾಗಿದ್ದು, ರಾಷ್ಟ್ರೀಯ ಹವಾಮಾನ ಸೇವೆಯ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಪ್ರಬಲವಾದ ಭೂಕಂಪದಿಂದ ಸುನಾಮಿ ಸೃಷ್ಟಿಯಾಗಿದ್ದು, ಅದು ಎಲ್ಲಾ ಹವಾಯಿಯನ್ ದ್ವೀಪಗಳ ಕರಾವಳಿಯಲ್ಲಿ ಹಾನಿಯನ್ನುಂಟುಮಾಡಬಹುದು ಎಂದು ಹೇಳಿದೆ.

ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ತುರ್ತು ಕ್ರಮ ತೆಗೆದುಕೊಳ್ಳುವಂತೆ ಎಂದು ಯುಎಸ್ ಏಜೆನ್ಸಿ ಎಚ್ಚರಿಸಿದೆ. ಸ್ಥಳೀಯ ಸಮಯ ಸಂಜೆ 7 ಗಂಟೆಯ ಸುಮಾರಿಗೆ ಮೊದಲ ಅಲೆಗಳು ಬೀಸುವ ನಿರೀಕ್ಷೆಯಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts