ಹೊಸದಿಲ್ಲಿ: ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಛೇರ್ಮನ್ ಜಗದೀಪ್ ಧನ್ಮರ್ ತಮ್ಮ ಸ್ಥಾನಕ್ಕೆ ಸೋಮವಾರ ದಿಢೀರ್ ರಾಜೀನಾಮೆ ಸಲ್ಲಿಸಿದ್ದಾರೆ.
ಅನಾರೋಗ್ಯ ಕಾರಣದಿಂದ ಹಾಗೂ ವೈದ್ಯಕೀಯ ಸಲಹೆ ಮೇರೆಗೆ 74 ವರ್ಷದ ಜಗದೀಪ್ ಧನ್ಮರ್ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ದೇಶದ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ರಾಷ್ಟ್ರಪತಿ ಮುರ್ಮು, ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನದ ವೇಳೆಯೇ ರಾಜೀನಾಮೆ ಸಲ್ಲಿಸಿರುವುದು ಆಶ್ಚರ್ಯಚಕಿತರಾಗಿಸಿದೆ.
ಸೂಕ್ತ ಸಮಯದಲ್ಲಿ ನಿವೃತ್ತಿಯಾಗುವೆ ಎಂದಿದ್ದ ಧರ್ ದೆಹಲಿಯ ಜವಾಹಾರ್‌ಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್‌ಯು)ದಲ್ಲಿ ಜು.10 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಧನ್‌ಕರ್, “ನಾನು ಸರಿಯಾದ ಸಮಯಕ್ಕೆ ನಿವೃತ್ತಿ ಹೊಂದಲಿದ್ದೇನೆ.
2027ರ ಆಗಸ್ಟ್‌ಗೆ ನಾನು ನಿವೃತ್ತಿ ಪಡೆಯುತ್ತೇನೆ’ ಎಂದಿದ್ದರು.